
ಮಡಿಕೇರಿ ಜು.11 NEWS DESK : 2027 ನೇ ಸಾಲಿನಲ್ಲಿ ನಡೆಯುವ ವಿಶ್ವವಿಖ್ಯಾತ ಅಜ್ಜಿಕುಟ್ಟಿರ ಕೊಡುವ ಹಾಕಿ ನಮ್ಮೆಯ ಆತಿಥ್ಯ ಹಕ್ಕು ಪತ್ರವನ್ನು ಕೊಡವ ಹಾಕಿ ಅಕಾಡಮಿ ವತಿಯಿಂದ ಅಜ್ಜಿಕುಟ್ಟಿರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಶ್ರೀ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ ಅವರು ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷರಾದ ನರೇನ್ ಕಾರ್ಯಪ್ಪ ಹಾಗೂ ಶಾಸಕರು, ಗೌರವಾಧ್ಯಕ್ಷರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮತ್ತು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ ಹಾಜರಿದ್ದರು.









