
ಮಡಿಕೇರಿ NEWS DESK ಜು.12 : ನಮ್ಮ ದೇಶ ನಮ್ಮ ಹೆಮ್ಮೆ ನಿಮ್ಮ ಪ್ರತಿಭೆ – ನಮ್ಮ ವೇದಿಕೆ ಸಮರ್ಥ ಕನ್ನಡಿಗರು ( ನೋಂ ), ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಮರ್ಥ ಕನ್ನಡಿಗರು (ನೋಂ) ಕೊಡಗು ಜಿಲ್ಲಾ ಘಟಕದ ವತಿಯಿಂದ ವಿವಿಧ ಸ್ಪರ್ಧೆಗಳು. ಆಗಸ್ಟ್ ಒಂಭತ್ತರಂದು ಮಡಿಕೇರಿಯ ಲಯನ್ಸ್ ಹಾಲ್ ನಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆ, ಪಿ ಯು ಸಿ ವಿಭಾಗದ ಮಕ್ಕಳಿಗೆ ‘ನಮ್ಮ ದೇಶ ನಮ್ಮ ಹೆಮ್ಮೆ ‘ಎನ್ನುವ ವಿಷಯದ ಬಗ್ಗೆ ಐದು ನಿಮಿಷ ಕಾಲಾವಕಾಶದಲ್ಲಿ ಭಾಷಣ ಮಾಡುವ ಸ್ಪರ್ಧೆ ಮತ್ತು ಮಹಿಳೆಯರಿಗೆ ವೈಯಕ್ತಿಕ ಗಾಯನ (ಎಸ್ .ಜಾನಕಿ ಯವರು ಹಾಡಿರುವ ಕನ್ನಡ ಗೀತೆಯನ್ನು ಕರೋಕೆ ಬಳಸಿ ಅಥವಾ ಬಳಸದೆ ಮೂರು ನಿಮಿಷಗಳಲ್ಲಿ ಹಾಡುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಮರ್ಥ ಕನ್ನಡಿಗರು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಒಂದರಿಂದ ನಾಲ್ಕನೇ ತರಗತಿ(1-4) ಐದರಿಂದ ಏಳನೇ ತರಗತಿ ( 5-7) ಎಂಟರಿಂದ ಹತ್ತು ( 8-10) ಮತ್ತು ಕಾಲೇಜು ಮಕ್ಕಳಿಗೆ ಪ್ರತ್ಯೇಕವಾಗಿ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ನಡೆಯಲಿದೆ. ಸಮೂಹ ಗಾಯನ ಸ್ಪರ್ಧೆಯ ನಿಯಮಗಳು : 1 ಸಮಯ 3 ನಿಮಿಷಗಳು 2 ತಂಡದಲ್ಲಿರಬೇಕಾದ ಸ್ಪರ್ಧಿಗಳ ಸಂಖ್ಯೆ ಕನಿಷ್ಠ 4 ಗರಿಷ್ಠ 6 3 ಕರೋಕೆ ಬಳಸಿ ಹಾಡುವಂತಿಲ್ಲ 4 ಹಾಡಿಗೆ ಅನುಗುಣವಾದ ಉಡುಗೆಗೆ 5 ಅಂಕಗಳಿವೆ ತಂಡದ ಹೆಸರು ನೋಂದಾಯಿಸಲು ಕೊನೆ ದಿನಾಂಕ 02.08.26 ಹೆಸರು ನೋಂದಾವಣಿಗೆ ಸಂಪರ್ಕಿಸಿ. ಸೌಮ್ಯ ಭಟ್ : 8762574584, ಪವಿತ್ರಾ ಸಂತೋಷ್ : 9686323326, ಶ್ರೀಲತಾ : 9480524681, ಅನಿತಾ : 9632653739








