Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*
  • *SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*
  • *VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*
  • *ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*
  • *ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*
  • *ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*
  • *ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*
  • *ಮಡಿಕೇರಿಯಲ್ಲಿ ಆ.30 ರಂದು ದಾಸರ ಕೀತ೯ನೆ – ಶ್ರೀ ರಾಘವೇಂದ್ರ ಆರಾಧನೆ*
  • *ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ.75.35 ಲಕ್ಷ ನಿವ್ವಳ ಲಾಭ : ಸದಸ್ಯರಿಗೆ ಶೇ.20 ಡಿವಿಡೆಂಡ್ : ಆ.30ರಂದು ವಾರ್ಷಿಕ ಮಹಾಸಭೆ*
  • *ಕಸ್ತೂರಿರಂಗನ್ ವರದಿ ಸಂವಾದ : ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲ : ಸಂಸದ ಯದುವೀರ್ ಒಡೆಯರ್ ಅಭಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನವಮಂಗಳೂರು ಬಂದರು ಟ್ರಸ್ಟ್ ವತಿಯಿಂದ ಕೊಡಗಿಗೆ ಜನೋಪಯೋಗಿ ಯೋಜನೆಗೆ ಚಿಂತನೆ : ಸುಶೀಲ್ ಕುಮಾರ್ ಸಿಂಗ್ *
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ನವಮಂಗಳೂರು ಬಂದರು ಟ್ರಸ್ಟ್ ವತಿಯಿಂದ ಕೊಡಗಿಗೆ ಜನೋಪಯೋಗಿ ಯೋಜನೆಗೆ ಚಿಂತನೆ : ಸುಶೀಲ್ ಕುಮಾರ್ ಸಿಂಗ್ *

ಜುಲೈ 13, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.13 NEWS DESK : ಕೊಡಗು ಜಿಲ್ಲೆಗೆ ನವ ಮಂಗಳೂರು ಬಂದರು ಸಂಸ್ಥೆಯಿಂದ ಶಾಶ್ವತವಾದ ಜನೋಪಯೋಗಿ ಯೋಜನೆಯನ್ನು ಜಾರಿಗೊಳಿಸಲು ಬದ್ದ ಎಂದು ಸಂಸ್ಥೆಯ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಭರವಸೆ ನೀಡಿದ್ದಾರೆ. ಮಡಿಕೇರಿಗೆ ಭೇಟಿ ನೀಡಿದ್ದ ಸುಶೀಲ್ ಕುಮಾರ್ ಸಿಂಗ್ ಅವರನ್ನು ತಾಜ್ ವಿವಾಂತ ರೆಸಾಟ್೯ನಲ್ಲಿ ಭೇಟಿ ಮಾಡಿದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮಸ್೯ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್  ನೇತೃತ್ವದ ನಿಯೋಗವು ವಿವಿಧ ಬೇಡಿಕೆಗಳ ಪ್ರಸ್ತಾವನೆ ಸಲ್ಲಿಸಿತು. ಜಿಲ್ಲಾ ಚೇಂಬರ್ ಆಫ್ ಕಾಮಸ್೯ನ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಈ ಸಂದಭ೯ ಪ್ರಸ್ತಾವನೆ ಸಲ್ಲಿಸಿ, ಕೊಡಗು ಜಿಲ್ಲೆಯಿಂದ ಬಹುತೇಕ ಕಾಫಿ ವಹಿವಾಟು ನವ ಮಂಗಳೂರು ಬಂದರಿನ ಮೂಲಕ ಆಗುತ್ತಿದೆ. ನವಮಂಗಳೂರಿನ ಆಥಿ೯ಕ ಲಾಭಕ್ಕೂ ಕೊಡಗಿನಿಂದ ಸರಬರಾಜಾಗುತ್ತಿರುವ ಕಾಫಿ ಪರೋಕ್ಷವಾಗಿ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ನವಮಂಗಳೂರು ಬಂದರು ಟ್ರಸ್ಟ್ ನಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಬಳಸಿ ಕೊಡಗು ಜಿಲ್ಲೆಯಲ್ಲಿ ಜನರಿಗೆ ಪ್ರಯೋಜನವಾಗುವಂಥ ಶಾಶ್ವತ ಯೋಜನೆಯನ್ನು ಜಾರಿಗೊಳಿಸುವಂತೆ ಕೋರಿದರು. ಈ ಪ್ರಸ್ತಾವನೆಗೆ ಸುಶೀಲ್ ಕುಮಾರ್ ಪೂರಕವಾಗಿ ಸ್ಪಂದಿಸಿದರು.  ಈಗಾಗಲೇ ಮೈಸೂರು ಕುಶಾಲನಗರ ರೈಲ್ವೆ ಸಂಪರ್ಕ ಸರ್ವೇ ನಡೆದಿದ್ದು,. ಕೊಪ್ಪ ಭಾಗದಲ್ಲಿ ನಿಲುಗಡೆ ಯೋಜನೆ ಇದೆ, ಅದನ್ನೂ ಕಾರ್ಯರೂಪಕ್ಕೆ ತರಲು ಒತ್ತಡ ಹಾಕುವಂತೆ ಅವರು ಮನವಿ ಮಾಡಿದರು. ಭಾರತದಲ್ಲಿ ಕೇವಲ ಒಂದು ಲಕ್ಷ ಟನ್ ಅಷ್ಟು ಕಾಫಿ ಆಂತರಿಕವಾಗಿ ಬಳಸಲಾಗುತ್ತಿದ್ದು ಅದರ ಪ್ರಮಾಣ ಹೆಚ್ಚಿಸಲು ಸರ್ಕಾರ ಪ್ರಯತ್ನಿಸಲು ಸಂಬಂಧಿಸಿದವರನ್ನು ಸಂಪರ್ಕಿಸಬೇಕು, ಮಡಿಕೇರಿಯಿಂದ ಸಂಪಾಜೆವರೆಗೆ ಸರ್ವ ಋತು ರಸ್ತೆಯನ್ನು ನಿರ್ಮಿಸಬೇಕು, ಅದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ 3 ತಿಂಗಳು ಭಾರಿ ವಾಹನ ಸಂಚಾರ ಸ್ಥಗಿತವಾಗದಂತೆ ಸಾಧ್ಯ, ಈ ಬಗ್ಗೆ ಸಚಿವರೊಂದಿಗೆ. ಚಚಿ೯ಸಿ ಸಮಸ್ಯೆ ಪರಿಹರಿಸುವಂತೆ  ಚಿದ್ವಿಲಾಸ್ ವಿನಂತಿಸಿದರು. ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ನ ವಕ್ತಾರ ಕೆ.ಕೆ. ವಿಶ್ವನಾಥ್ ಮಾತನಾಡಿ, ಕುಶಾಲನಗರದಿಂದ 190 ಕಿ.ಮೀ. ಅಂತರದಲ್ಲಿರುವ ಮಂಗಳೂರು ಬಂದರಿಗೆ ದಿನನಿತ್ಯ 100 ಕಾಫಿ ಕಂಟೈನರ್ ಗಳಂತೆ ವಾಷಿ೯ಕ 15 ಸಾವಿರ ಕಂಟೈನರ್ ಗಳಷ್ಟು ಕಾಫಿ ಸರಬರಾಜಾಗುತ್ತಿದೆ. ಮಳೆಗಾಲದಲ್ಲಿ ಮಡಿಕೇರಿ – ಮಂಗಳೂರು ಘಾಟ್ ರಸ್ತೆಯಲ್ಲಿ ಲಾರಿಗಳ ಸಂಚಾರಕ್ಕೆ ನಿಭ೯ಂಧ ಹೇರಲಾಗುತ್ತದೆ. ಈ ದಿನಗಳಲ್ಲಿ ಶಿರಾಡಿ ಘಾಟ್, ಆಗುಂಬೆ ಸೇರಿದಂತೆ ಮಲೆನಾಡಿನ ಎಲ್ಲಾ ಮುಖ್ಯ ರಸ್ತೆಗಳು ಬಂದ್ ಆಗುತ್ತವೆ. ಹೀಗಾಗಿ ಸುತ್ತಿ ಬಳಸಿ ಶಿವಮೊಗ್ಗ – ತೀಥ೯ಹಳ್ಳಿ ಮೂಲಕ ಕಾಫಿ ಕಂಟೈನರ್ ಗಳ ಸಾಗಾಣೆಯಿಂದ ದುಬಾರಿ ವೆಚ್ಚವಾಗುತ್ತಿದೆ. ಈ ನಿಟ್ಟಿನಲ್ಲಿ ಕೂಡಿಗೆಯಿಂದ ಬೇಲೂರಿಗೆ ರೈಲ್ವೇ ಸಂಪಕ೯ ಮಾಗ೯ದ ಅಗತ್ಯವಿದೆ ಎಂದರು. ಕೂಡಿಗೆಯಿಂದ ಬೇಲೂರಿಗೆ ಸಂಪಕ೯ ಕಲ್ಪಿಸಿದರೆ ಬೇಲೂರಿನಿಂದ ಮಂಗಳೂರಿಗೆ ಈಗಾಗಲೇ ಇರುವ ರೈಲು ಮಾಗ೯ದ ಮೂಲಕ ಕಾಫಿ ಸಾಗಾಣೆ ಸುಲಭಸಾಧ್ಯವಾಗಿ ಸಾಗಾಣೆ ವೆಚ್ಚವೂ ಕಡಮೆಯಾಗಲಿದೆ ಎಂದೂ ವಿಶ್ವನಾಥ್ ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೇ ಸಚಿವಾಲಾಯದ ಪ್ರಮುಖರೊಂದಿಗೆ ಚಚಿ೯ಸುವುದಾಗಿ ಸುಶೀಲ್ ಕುಮಾರ್ ಭರವಸೆ ನೀಡಿದರು. ಮಡಿಕೇರಿ – ಮಂಗಳೂರು ನವಬಂದರಿಗೆ ಸವ೯ ಋತು ರಸ್ತೆಯನ್ನೂ ನಿಮಾ೯ಣ ಮಾಡುವ ಬಗ್ಗೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಮುಖರೊಂದಿಗೆ ಚಚಿ೯ಸುವುದಾಗಿ ಹೇಳಿದ ಸುಶೀಲ್ ಕುಮಾರ್, ನವಮಂಗಳೂರು ಬಂದರುಗೆ ಕೊಡಗಿನ ಕಾಫಿ ಉದ್ಯಮಿಗಳು ವಷ೯ಂಪ್ರತಿ ಉತ್ತಮ ಸಂಖ್ಯೆಯಲ್ಲಿ ಕಾಫಿ ನೀಡುವದರಿಂದಾಗಿ ಬಂದರಿನ ಆಥಿ೯ಕ ವಹಿವಾಟಿಗೆ ನೆರವಾಗಿದೆ ಎಂದೂ ಶ್ಲಾಘಿಸಿದರು. ಜಿಲ್ಲಾ ಚೇಂಬರ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕಾಫಿ ಉದ್ಯಮವನ್ನೇ ಕೇಂದ್ರೀಕರಿಸಿರುವ ಕೊಡಗು ಜಿಲ್ಲೆಗೆ ಪರಿಸರ ಸ್ನೇಹಿ ಯೋಜನೆಗಳ ಅಗತ್ಯವಿದೆ. ಇದರಿಂದ ಕೊಡಗಿನ ಯುವಜನತೆ ಭವಿಷ್ಯದಲ್ಲಿ ಇದೇ ಜಿಲ್ಲೆಯಲ್ಲಿ ಜೀವನ ರೂಪಿಸಲು ಸಾಧ್ಯವಾಗಲಿದೆ ಎಂದರು. ಜಿ.ಚಿದ್ವಿಲಾಸ್ ಮಾತನಾಡಿ, ಕೊಡಗಿನಲ್ಲಿ ಯಾವುದೇ ಪ್ರಗತಿ ಯೋಜನೆ ಕೈಗೊಂಡರೂ ಖಂಡಿತವಾಗಿಯೂ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಗಮನ ಹರಿಸಬೇಕಾಗಿದ್ದು ಅತ್ಯಗತ್ಯ. ಪರಿಸರದೊಂದಿಗೆ ಕೊಡಗಿನ ಜನತೆ ಭಾವನಾತ್ಮಕ ಸಂಬಂಧ ಹೊಂದಿದ್ದು ಪರಿಸರಕ್ಕೆ ಹಾನಿಯಾಗುವ ಯಾವುದೇ ಯೋಜನೆ ಸ್ವಾಗತಾಹ೯ವಲ್ಲ. ಆದರೆ ಪರಿಸರ ಸ್ನೇಹಿಯಾಗಿಯೂ ಹಲವು ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು. ಭಾರತೀಯ ಸೇನಾ ಪಡೆಯಲ್ಲಿ ಕೊಡಗಿನ ಕಾಫಿಯನ್ನು ಪರಿಚಯಿಸುವ ಮೂಲಕ ಕೊಡಗಿನ ಕಾಫಿ ಬ್ರಾಂಡ್ ನ್ನು ಸೈನಿಕರಿಗೆ ತಲುಪುವಂತೆ ಮಾಡಿ, ಕಾಫಿ ಕೖಷಿಕರಿಗೆ ನೆರವಾಗಿ ಎಂದೂ ಚಿದ್ವಿಲಾಸ್ ಸಲಹೆ ನೀಡಿದರು. ಕೊಡಗು ಚೇಂಬರ್ ಆಫ್ ಕಾಮಸ್೯ ನಿಯೋಗದಲ್ಲಿ ಮಡಿಕೇರಿ ಚೇಂಬರ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್,  ಮಡಿಕೇರಿ ಚೇಂಬರ್ ನಿದೇ೯ಶಕ ಎಂ.ಧನಂಜಯ್,   ರೋಟರಿ ಸಂಸ್ಥೆಯ  ಜಿಲ್ಲಾ  ನಿದೇ೯ಶಕ ಅನಿಲ್ ಹೆಚ್.ಟಿ. ಚೇಂಬರ್ ನಿದೇ೯ಶಕರಾದ  ಕುಶಾಲನಗರದ  , ಎಂ.ಡಿ. ರಂಗಸ್ವಾಮಿ, ಪಿ.ಎಸ್.ಪ್ರಶಾಂತ್. ಎಸ್.ಎನ್. ರಾಜೇಂದ್ರ ಇದ್ದರು. ನವಮಂಗಳೂರು ಬಂದರಿನ ಸಾರಿಗೆ ನಿಯಂತ್ರಣಾಧಿಕಾರಿ ಸಿದ್ದೇಶ್ ಹಾಜರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026

*VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*

ಆಗಷ್ಟ್ 27, 2026

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಗುಂಡಿಕೆರೆ, NEWS DESK ಆ.27: ಜುಲೈ 25, 26 ರಂದು ಗುಂಡಿಕೆರೆಯಲ್ಲಿ ನಡೆದ SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಸೀನಿಯರ್…

*VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*

ಆಗಷ್ಟ್ 27, 2026

*ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*

ಆಗಷ್ಟ್ 27, 2026

*ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*

ಆಗಷ್ಟ್ 27, 2026

*ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*

ಆಗಷ್ಟ್ 27, 2026

*ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*

ಆಗಷ್ಟ್ 27, 2026

*ಮಡಿಕೇರಿಯಲ್ಲಿ ಆ.30 ರಂದು ದಾಸರ ಕೀತ೯ನೆ – ಶ್ರೀ ರಾಘವೇಂದ್ರ ಆರಾಧನೆ*

ಆಗಷ್ಟ್ 27, 2026

*ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ.75.35 ಲಕ್ಷ ನಿವ್ವಳ ಲಾಭ : ಸದಸ್ಯರಿಗೆ ಶೇ.20 ಡಿವಿಡೆಂಡ್ : ಆ.30ರಂದು ವಾರ್ಷಿಕ ಮಹಾಸಭೆ*

ಆಗಷ್ಟ್ 27, 2026

*ಕಸ್ತೂರಿರಂಗನ್ ವರದಿ ಸಂವಾದ : ಕೊಡಗಿನ ಜನತೆ ಆತಂಕಪಡುವ ಅಗತ್ಯವಿಲ್ಲ : ಸಂಸದ ಯದುವೀರ್ ಒಡೆಯರ್ ಅಭಯ*

ಆಗಷ್ಟ್ 27, 2026

*ಈದ್ ಮಿಲಾದ್ ಪ್ರೀತಿ, ಶಾಂತಿ, ಸಹೋದರತ್ವದ ಸಂದೇಶ ಸಾರುವ ಪವಿತ್ರ ದಿನ ಶಾಸಕ ಮಂತರ್‌ಗೌಡ*

ಆಗಷ್ಟ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.