
ಪೊನ್ನಂಪೇಟೆ NEWS DESK ಜು.14 : ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಮಾರಮ್ಮ ದೇವರ ವಾರ್ಷಿಕ ಉತ್ಸವ *ಮಾರಿಗುಡಿ ನಮ್ಮೆ* ಇದೇ ಜುಲೈ -16 ಹಾಗೂ ಜುಲೈ -22ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಊರಿನ ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಶ್ರೀ ಭದ್ರಕಾಳಿ ಹಾಗೂ ಶ್ರೀ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು ಪೂರ್ವಿಕರ ಕಾಲದಿಂದಲೂ ಮಾರಿಗುಡಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಮಚ್ಚಿಯಂಡ ಕುಟುಂಬಸ್ಥರ ಮುಂದಾಳತ್ವದಲ್ಲಿ ಇಲ್ಲಿ ವರ್ಷಕ್ಕೆ ಎರಡು ಬಾರಿ ಹಬ್ಬ ನಡೆಯಲಿದ್ದು ಇಲ್ಲಿ ಕೊಡವರೇ ಪೂಜಾರಿಗಳಾಗಿರುತ್ತಾರೆ ಎಂದು ಮಾಹಿತಿ ನೀಡಿದ್ದರು. ಕೊಡಗಿನ ಸಾಂಪ್ರದಾಯಿಕ ಕಕ್ಕಡ ಮಾಸದ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಜುಲೈ-16ರಂದು ಗುರುವಾರ ಮೊದಲ ಹಬ್ಬ ನಡೆಯಲಿದ್ದು, ಎರಡನೇ ಹಬ್ಬವು ಕಕ್ಕಡ ಮಾಸದ ಆರನೇ ದಿನದಂದು ಅಂದರೆ ಜುಲೈ-22ರಂದು ಹಬ್ಬ ನಡೆಯಲಿದೆ. ಎರಡು ದಿನಗಳು ಕೂಡ ಬೆಳಿಗ್ಗೆ 9-30ರಿಂದ ಸಂಜೆ 3-00 ಗಂಟೆಯವರೆಗೆ ಹಬ್ಬ ನಡೆಯಲಿದ್ದು ಹರಕೆ ಕಾಣಿಕೆಗಳನ್ನು ಸಲ್ಲಿಸಬಹುದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ. *ಹೆಚ್ಚಿನ ಮಾಹಿತಿಗೆ -9880967573 ಅಥವಾ 9483815430 ಸಂಪರ್ಕಿಸಬಹುದಾಗಿದೆ*









