Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗಣೇಶೋತ್ಸವ : ಸೆ.8 ರಂದು ಕೋಟೆ ಶ್ರೀ ಗಣಪತಿ ದೇವಾಲಯದಲ್ಲಿ ಈಡುಗಾಯಿ ಬಹಿರಂಗ ಹರಾಜು*
  • *ಆ.28 ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಕೊಡಗಿಗೆ ಭೇಟಿ*
  • *ಖಾರೀಫ್ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆ*
  • *ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*
  • *SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*
  • *VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*
  • *ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*
  • *ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*
  • *ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*
  • *ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ನುಡಿನಮನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ನುಡಿನಮನ*

ಜುಲೈ 16, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.16 NEWS DESK : ಕೋಟ್ಯಂತರ ಜನರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿರುವ ಸ್ವರ ಸಾಮ್ರಾಜ್ಞಿ, ಗಾನ ಕೋಗಿಲೆ ಎಸ್. ಜಾನಕಿಯಮ್ಮನವರಿಗೆ, ಸುಮಧುರ ಗಾಯನಗಳ ಪುಷ್ಪಮಾಲೆಯನ್ನು ತೊಡಿಸಿ, ನುಡಿನಮನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಸಂಯುಕ್ತ ಆಶ್ರಯದಲ್ಲಿ ಕೆಲ ದಿನಗಳ ಹಿಂದಷ್ಟೆ ನಮ್ಮನ್ನಗಲಿರುವ ಎಸ್. ಜಾನಕಿಯವರಿಗೆ ನಗರದ ಪತ್ರಿಕಾ ಭವನದಲ್ಲಿ ಗೌರವ ನಮನ ಸಲ್ಲಿಸುವ ಮೂಲಕ, ಅವರ ಅಗಲಿಕೆಗೆ ಸಂತಾಪವನ್ನು ವ್ಯಕ್ತಪಡಿಸಲಾಯಿತು. ಸತಿ ಸಕ್ಕೂಬಾಯಿ ಚಲನ ಚಿತ್ರಕ್ಕೆ ಜಾನಕಿಯವರು ಹಾಡಿದ “ಓ ಪಾಂಡುರಂಗ ಪ್ರಭೋ ವಿಠಲ”ವನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್ ಅವರು ಸುಮಧುರವಾಗಿ ಹಾಡಿದರೆ, ಜಿಲ್ಲಾ ಕಸಾಪ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು, ಜಾನಕಿಯಮ್ಮನವರು ಹಾಡಿರುವ ಹಾಡುಗಳನ್ನೆಂದಿಗೂ ಮರೆಯಲಾಗದ್ದು, ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವೆಂದು ಅಭಿಪ್ರಾಯಿಸಿ, ಶೀಘ್ರದಲ್ಲೆ ಜಿಲ್ಲಾ ಕಸಾಪ ಮೂಲಕ ಜಿಲ್ಲಾ ವ್ಯಾಪ್ತಿಯ ಎಲ್ಲಾ ಗಾಯಕ ಗಾಯಕಿಯರನ್ನು ಒಗ್ಗೂಡಿಸಿ ಜಾನಕಿಯವರು ಹಾಡಿರುವ ಹಾಡುಗಳ ಕಾರ್ಯಕ್ರಮವನನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಕನ್ನಡವನ್ನು ಒಳಗೊಂಡಂತೆ ಜಾನಕಿಯವರು ಸುಮಾರು 18 ಕ್ಕೂ ಹೆಚ್ಚಿನ ಭಾಷೆಗಳಲ್ಲಿ 48 ಸಾವಿರ ಹಾಡುಗಳನ್ನು ಹಾಡುವ ಮೂಲಕ, ಗಾನ ಸುಧೆಯನ್ನು ನಾಡಿನ ಜನತೆಗೆ ಉಣಬಡಿಸಿದ್ದಾರೆಂದು ತಿಳಿಸಿದರು. ಈ ಸಂದರ್ಭ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷೆ ತುಳಸಿ ಮೋºನ್ ಅವರು ” ಆಕಾಶ ದೀಪವೂ ನೀನೆ…” ಹಾಡನ್ನು ಪ್ರಸ್ತುತ ಪಡಿಸುವ ಮೂಲಕ ಜಾನಕಿಯವರ ಭೌತಿಕವಾಗಿ ಇಲ್ಲವಾದರು, ಹಾಡಿನ ಮೂಲಕ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎನ್ನುವುದನ್ನು ರುಜುವಾತುಪಡಿಸಿದರು. ತಾಲ್ಲೂಕು ಕಸಾಪ ಪ್ರಮುಖರಾದ ಲೋಕನಾಥ್ ಅಮೆಚೂರ್ ಅವರು, ಗಾಯಕರಿಗೆಂದಿಗೂ ಸಾವಿಲ್ಲ. ಜಾನಕಿಯವರು ತಮ್ಮ ಹಾಡುಗಳ ಮೂಲಕ ಪ್ರತಿ ಮನೆ ಮನಗಳಲ್ಲಿ ನೆಲೆಸಿದ್ದಾರೆಂದು ನುಡಿದರೆ, ಪ್ರೇಮಾ ರಾಘವಯ್ಯ ಅವರು, ಅತ್ಯಂತ ಪ್ರಸಿದ್ಧ ಕನ್ನಡ ಚಲನಚಿತ್ರ ಬಯಲು ದಾರಿಯ “ಬಾನಲ್ಲು ನೀನೆ ಭುವಿಯಲ್ಲು ನೀನೆ…” ಹಾಡನ್ನು ಹಾಡುವ ಮೂಲಕ ಜಾನಕಿಯವರಿಗೆ ಗೌರವವÀನ್ನು ಅರ್ಪಿಸಿದರು. ಉಪನ್ಯಾಸಕಿ ಪ್ರತಿಮಾ ರೈ ಅವರ “ಕಂಗಳು ತುಂಬಿರಲು…” ಹಾಡು, ಶಿಕ್ಷಕಿ ಜಯಲಕ್ಷ್ಮಿ ಅವರ “ನನ್ನ ಆಸೆ ಹಣ್ಣಾಗಿ” ಹಾಡುವ ಮೂಲಕ ಗಾನ ಕೋಗಿಲೆಗೆ ಗೌರವವನ್ನು ಸಲ್ಲಿಸಿದರೆ, ಬಳಗದ ಅಧ್ಯಕ್ಷ ಪ್ರೇಂ ಕುಮಾರ್, ಕೆ.ಟಿ.ಬೇಬಿ ಮ್ಯಾಥ್ಯು, ಅಂಬೆಕಲ್ಲು ನವೀನ್, ರೇವತಿ ರಮೇಶ್, ಸಂಪತ್ ಕುಮಾರ್, ಉಮೇಶ್ ಸೇರಿದಂತೆ ಹಲವರು ಜಾನಕಿಯಮ್ಮನವರಿಗೆ ನುಡಿ ನಮನ ಸಲ್ಲಿಸಿದರು. ಗಾನ ಕೋಗಿಲೆ ಎಸ್.ಜಾನಕಿಯವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಇದೇ ಸಂದರ್ಭ ಸಲ್ಲಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗಣೇಶೋತ್ಸವ : ಸೆ.8 ರಂದು ಕೋಟೆ ಶ್ರೀ ಗಣಪತಿ ದೇವಾಲಯದಲ್ಲಿ ಈಡುಗಾಯಿ ಬಹಿರಂಗ ಹರಾಜು*

ಆಗಷ್ಟ್ 27, 2026

*ಆ.28 ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಕೊಡಗಿಗೆ ಭೇಟಿ*

ಆಗಷ್ಟ್ 27, 2026

*ಖಾರೀಫ್ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆ*

ಆಗಷ್ಟ್ 27, 2026

*ಆ.28 ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಕೊಡಗಿಗೆ ಭೇಟಿ*

ಆಗಷ್ಟ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.27 NEWS DESK : ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಅವರು ಆ.28 ರಂದು ಕೊಡಗು…

*ಖಾರೀಫ್ ಬೆಳೆಗೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆ*

ಆಗಷ್ಟ್ 27, 2026

*ದಿವಂಗತ ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*SSF ಕೊಡಗು ಜಿಲ್ಲಾ ಸಾಹಿತ್ಯೋತ್ಸವದಲ್ಲಿ ಹಾಶೀರ್‌ಗೆ ಪ್ರಥಮ ಸ್ಥಾನ*

ಆಗಷ್ಟ್ 27, 2026

*VB-G RAM G ಯೋಜನೆಯಡಿ 318 ಬಗೆಯ ಕಾಮಗಾರಿಗಳಿಗೆ ಅವಕಾಶ*

ಆಗಷ್ಟ್ 27, 2026

*ಕುಶಾಲನಗರ ಬಾಲಿಕಾ ಪ್ರೌಢಶಾಲೆಯಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ : ಮಹಿಳಾ ಸಾಹಿತ್ಯದಿಂದ ಗಟ್ಟಿ ಸಾಹಿತ್ಯದ ಧ್ವನಿ : ಲೀಲಾಕುಮಾರಿ ತೊಡಿಕಾನ ಅಭಿಮತ*

ಆಗಷ್ಟ್ 27, 2026

*ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ಗೆ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*

ಆಗಷ್ಟ್ 27, 2026

*ಕಸ್ತೂರಿ ರಂಗನ್ ವರದಿ ವಿರುದ್ಧ ನಗರಸಭೆ ನಿರ್ಣಯ : ಕಸ ವಿಲೇವಾರಿ ಜಾಗಕ್ಕೂ ವರದಿಯಿಂದ ಅಡ್ಡಿ*

ಆಗಷ್ಟ್ 27, 2026

*ನೇಪಾಳ, ಟಿಬೇಟ್‌ನಲ್ಲಿ ಭಾರೀ ಪ್ರವಾಹ-ಭೂಕುಸಿತ: ಕೊಡಗಿನವರು ಸಿಲುಕಿದ್ದರೆ ಮಾಹಿತಿ ನೀಡಿ*

ಆಗಷ್ಟ್ 27, 2026

*ಮಡಿಕೇರಿಯಲ್ಲಿ ಆ.30 ರಂದು ದಾಸರ ಕೀತ೯ನೆ – ಶ್ರೀ ರಾಘವೇಂದ್ರ ಆರಾಧನೆ*

ಆಗಷ್ಟ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.