
ಮಡಿಕೇರಿ NEWS DESK ಜು.18 : ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ನಲ್ಲಿ ಇನ್ಸ್ ಪೆಕ್ಟರ್ ಆಗಿ ಕೊಡಗಿನ ಕೆ.ದೇವಮ್ಮ ಬಡ್ತಿ ಹೊಂದಿದ್ದಾರೆ. ದೇವಮ್ಮ ಅವರು 1992ರಲ್ಲಿ ಆರ್‌ಎಎಫ್‌ಗೆ ಆಯ್ಕೆಯಾಗಿದ್ದು, ಇವರು ಹೈದರಾಬಾದ್‌ನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಭಾರತದ ಪಶ್ಚಿಮ ಗಡಿಯ ಮಣಿಪುರ ರಾಜ್ಯದ ಮೋರೆಯ ಮಯನ್ಮಾರ್ ಗಡಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಮಡಿಕೇರಿ ತಾಲ್ಲೂಕು ಕಾಟಕೇರಿ ಗ್ರಾಮದ ಪೈಕೇರ ಮೇದಪ್ಪ, ನಂಜಮ್ಮ ದಂಪತಿಯ ಪುತ್ರಿ ದೇವಮ್ಮ ಅವರು ಕುಟ್ಟಮಣಿಯನ ಮೋಹನ್ ಅವರ ಪತ್ನಿಯಾಗಿದ್ದಾರೆ.









