
ಮಡಿಕೇರಿ NEWS DESK ಜು.21 : ಸಂಪೂರ್ಣ ಹದಗೆಟ್ಟಿರುವ ಭಾಗಮಂಡಲ- ನಾಪೋಕ್ಲು ಮತ್ತು ಭಾಗಮಂಡಲ ಕರಿಕೆ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಬಿಜೆಪಿ ಶಕ್ತಿ ಕೇಂದ್ರ ಪ್ರತಿಭಟನೆ ನಡೆಸಿತು. ರಸ್ತೆಯಲ್ಲಿನ ಹೊಂಡ ಗುಂಡಿಗಳಲ್ಲಿ ಬಾಳೆಗಿಡ ನೆಡುವ ಮೂಲಕ ಪ್ರತಿಭಟನಾಕಾರರು ರಾಜ್ಯ ಸರಕಾರ ಹಾಗೂ ಶಾಸಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ. ಕೆಸರು ನೀರು ತುಂಬಿಕೊ0ಡು ವಾಹನಗಳ ಸಂಚಾರದೊ0ದಿಗೆ ಜನ ಸಂಚಾರಕ್ಕೂ ತೊಡಕುಂಟಾಗುತ್ತಿದೆ. ಹೀಗಿದ್ದೂ ಸಂಬ0ಧಪಟ್ಟವರು ರಸ್ತೆ ದುರಸ್ತಿಯತ್ತ ಗಮನ ಹರಿಸಿಲ್ಲವೆಂದು ಬಿಜೆಪಿ ಪ್ರಮುಖರು ಆರೋಪಿಸಿದರು.









