
ಸೋಮವಾರಪೇಟೆ ಜು.30 NEWS DESK : ನೇರುಗಳಲೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ಶಾಲಾ ಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎನ್. ಪಾಪಯ್ಯ ಅವರು ಟ್ರ್ಯಾಕ್ ಸೂಟ್‌ಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಎಚ್.ಎಸ್. ರಾಜೇಶ್ವರಿ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್. ರತ್ನಕುಮಾರ್, ಶಿಕ್ಷಕರಾದ ಎ.ಬಿ. ತೇಜಾಕ್ಷಿ, ಎಚ್.ಕೆ. ಉಮೇಶ್, ಎಚ್.ಎನ್. ರತೀಶ್, ಸಿ.ಜೆ. ಆಶಾ, ಬಿ.ಆರ್. ಲಿಖಿತ ಹಾಗೂ ಎ.ಎಸ್. ಭಾನುಮತಿ ಇದ್ದರು.









