
ವಿರಾಜಪೇಟೆ ಜು.31 NEWS DESK : ಅವರ್ಸ್ ಕ್ಲಬ್ ವತಿಯಿಂದ ಆ.5 ರಂದು ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಕಕ್ಕಡ ನಮ್ಮೆ ಆಚರಣೆ, ಸಂತೋಷ ಕೂಟ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶೋಭಾ ಚಂಗಪ್ಪ ವಹಿಸಲಿದ್ದಾರೆ. ಕಕ್ಕಡ ಹಬ್ಬದ ಪ್ರಯುಕ್ತ ಕಕ್ಕಡ ತಿಂಗಳಿನ ವಿಶೇಷ ಆಹಾರ ಪದಾರ್ಥಗಳಿಂದ ಮದ್ದು ಪಾಯಸ, ಮದ್ದ್ ಪುಟ್ಟ್, ಹಲಸಿನ ಬೀಜದ ಚಟ್ನಿ, ಬೈಮಬಳೆ ಕರಿ, ಪಲ್ಯ, ಮದ್ದು ನೀರ್ ಜೆಲ್ಲಿ, ಕುವಾಲೆ ಪುಟ್ಟ್, ಪತ್ರೋಡೆ, ಏಡಿ ಕರಿ, ನಾಟಿ ಕೋಳಿ ಕರಿ, ಪ್ರೈ, ಹಂದಿಮಾಂಸ ಕರಿ, ಪ್ರೈ, ತಯಾರಿಕ ಸ್ಪರ್ಧೆ ಮತ್ತು ನಡೆಯಲಿದೆ. ಅಲ್ಲದೆ ಮನರಂಜನಾತ್ಮಕ ಆಟೋಟಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಕ್ಲಬ್‍ನ ಎಲ್ಲಾ ಸದಸ್ಯರ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದು ಕ್ಲಬ್‍ನ ಆಡಳಿತ ಮಂಡಳಿ ಹಾಗೂ ಸದಸ್ಯರ ಪರವಾಗಿ ಅದ್ಯಕ್ಷರಾದ ಶೋಭಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








