Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೊಡಗು : ಕೃಷಿಕರಲ್ಲಿ ಸಂತಸ ತಂದ ಪುಷ್ಯ ಮಳೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡಗು : ಕೃಷಿಕರಲ್ಲಿ ಸಂತಸ ತಂದ ಪುಷ್ಯ ಮಳೆ

ಆಗಷ್ಟ್ 1, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಆ.1 NEWS DESK : ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಆರಂಭವಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ.
ಕಳೆದ ಮೂರು-ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿಕರಲ್ಲಿ ಹಾಗೂ ಕಾವೇರಿ ಕಣಿವೆಯ ಎಲ್ಲಾ ನಾಗರಿಕರಲ್ಲಿ ಸಂತಸ ತಂದಿದೆ.
ಈ ಬಾರಿ ಎಲ್ -ನಿನೋ ಪರಿಣಾಮದಿಂದ ವಾಡಿಕೆಗಿಂದ ಕಡಿಮೆ ಮಳೆ ಆಗಲಿದೆ ಎಂದು ಹೇಳಲಾಗಿತ್ತು. ಅದರಂತೆ ಜೂನ್ ಮತ್ತು ಜುಲೈ ಮೂರನೇ ವಾರದವರೆಗೂ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಸದ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಲ್ಲರಲ್ಲಿ ಆಶಾಭಾವನೆ ಮೂಡಿಸಿದೆ.
ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಭರ್ತಿಯಾಗಿ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಳೆದ 2019 ರಿಂದ 2026 ರವರೆಗೆ ತಿಂಗಳವಾರು ಸರಾಸರಿ ವಾಡಿಕೆ ಮಳೆ ಪ್ರಮಾಣವನ್ನು ಗಮನಿಸಿದಾಗ ಈ ಬಾರಿ ಕಡಿಮೆ ಮಳೆಯಾಗಿರುವುದು ಕಂಡು ಬರುತ್ತದೆ. ಜನವರಿಯಿಂದ ಜುಲೈ ಅಂತ್ಯದವರೆಗೆ ತಿಂಗಳುವಾರು ವಾಡಿಕೆ ಮಳೆ ಪ್ರಮಾಣ ಗಮನಿಸಿದಾಗ ಜುಲೈ ತಿಂಗಳಲ್ಲಿ ವಾಡಿಕೆ ಮಳೆ 859 ಮಿ.ಮೀ.ಗಳಾಗಿದ್ದು, ಈ ಬಾರಿ ಜುಲೈ ತಿಂಗಳಲ್ಲಿ 599.4 ಮಿ.ಮೀ. ಮಳೆಯಾಗಿದೆ. ಆದರೆ ಜೂನ್ ತಿಂಗಳಲ್ಲಿ ವಾಡಿಕೆ ಮಳೆ 534 ಮಿ.ಮೀ. ಆಗಿದ್ದು, 2026 ರ ಜೂನ್ ತಿಂಗಳಲ್ಲಿ 197.7 ಮಿ.ಮೀ ಮಾತ್ರ ಮಳೆಯಾಗಿದೆ. ಹಾಗೆಯೇ ಮೇ ತಿಂಗಳಲ್ಲಿ 139 ಮಿ.ಮೀ. ವಾಡಿಕೆ ಮಳೆಯಾಗಿದ್ದು, 76.4 ಮಿ.ಮೀ. ಮಾತ್ರ ಮಳೆಯಾಗಿದೆ. ಏಪ್ರಿಲ್ ತಿಂಗಳಲ್ಲಿ 84.4 ಮಿ.ಮೀ. ವಾಡಿಕೆ ಮಳೆಯಾಗಿದ್ದು, 20.6 ರಷ್ಟು ಮಾತ್ರ ಮಳೆಯಾಗಿದೆ. ಮಾರ್ಚ್ ತಿಂಗಳಲ್ಲಿ 21.5 ಮಿ.ಮೀ. ವಾಡಿಕೆ ಮಳೆಯಾಗಿದ್ದು, 21.4 ಮಿ.ಮೀನಷ್ಟು ಮಳೆಯಾಗಿದೆ. ಫೆಬ್ರವರಿ ಮತ್ತು ಜನವರಿ ತಿಂಗಳಲ್ಲಿ ಸಾಧಾರಣ ಮಳೆಯಾಗಿದೆ.
ಒಟ್ಟಾರೆ ಕಳೆದ 2018 ರಿಂದ 2025 ರವರೆಗೂ ಮಳೆಯ ಪ್ರಮಾಣವನ್ನು ಗಮನಿಸಿದಾಗ ಜುಲೈ ತಿಂಗಳಲ್ಲಿ ಸಾಮಾನ್ಯ ಮಳೆಯಾಗಿ, ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿರುವುದು ತಿಳಿದುಬರುತ್ತದೆ. 2019 ರಲ್ಲಿ ಜೂನ್ ತಿಂಗಳಲ್ಲಿ 287.9 ಮಿ.ಮೀ., ಮಳೆಯಾಗಿತ್ತು, ಜುಲೈ ತಿಂಗಳಲ್ಲಿ 568.5 ಮಿ.ಮೀ. ಮಳೆಯಾಗಿದ್ದು, ಹಾಗೆಯೇ 2020 ರಲ್ಲಿ 412.2 ಮಿ.ಮೀ. ಮಳೆಯಾಗಿತ್ತು, ಜುಲೈ, ತಿಂಗಳಲ್ಲಿ 436.9 ಮಿ.ಮೀ. ಮಳೆಯಾಗಿತ್ತು. ಹಾಗೆಯೇ 2021 ರಲ್ಲಿ ಜೂನ್ ತಿಂಗಳಲ್ಲಿ 421 ಮಿ.ಮೀ, ಜುಲೈ ತಿಂಗಳಲ್ಲಿ 675.1 ಮಿ.ಮೀ ಮಳೆಯಾಗಿತ್ತು. 2022 ರಲ್ಲಿ ಜೂನ್ ತಿಂಗಳಲ್ಲಿ 227 ಮಿ.ಮೀ. ಮಳೆಯಾಗಿತ್ತು, ಜುಲೈ ತಿಂಗಳಲ್ಲಿ 1147.3 ಮಿ.ಮೀ. ಮಳೆಯಾಗಿತ್ತು. 2023 ರಲ್ಲಿ ಜೂನ್ ತಿಂಗಳಲ್ಲಿ 102 ಮಿ.ಮೀ. ಮಳೆಯಾಗಿದ್ದು, ಜುಲೈ ತಿಂಗಳಲ್ಲಿ 822 ಮಿ.ಮೀ. ಮಳೆಯಾಗಿದೆ. 2024 ರ ಜೂನ್ ತಿಂಗಳಲ್ಲಿ 435 ಮಿ.ಮೀ. ಮಳೆಯಾಗಿದ್ದು, ಜುಲೈ ತಿಂಗಳಲ್ಲಿ 1284.2 ಮಿ.ಮೀ. ಮಳೆಯಾಗಿದೆ. 2025 ರ ಜೂನ್ ತಿಂಗಳಲ್ಲಿ 665.4 ಮಿ.ಮೀ. ಮಳೆಯಾಗಿದ್ದು, ಜುಲೈ ತಿಂಗಳಲ್ಲಿ 763 ಮಿ.ಮೀ. ಮಳೆಯಾಗಿತ್ತು. 2026 ರ ಜೂನ್ ತಿಂಗಳಲ್ಲಿ 197.7 ಮಿ.ಮೀ., ಜುಲೈ ತಿಂಗಳಲ್ಲಿ 599.4 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈಗ ಉತ್ತಮ ಮಳೆಯಾಗುತ್ತಿದ್ದು ಎಲ್ಲರಲ್ಲಿ ಸಂತಸ ತಂದಿದೆ. 2026 ರ ಕ್ಯಾಲೆಂಡರ್ ವರ್ಷದಲ್ಲಿ ಜನವರಿಯಿಂದ ಇಲ್ಲಿಯ ವರೆಗೆ ದಿನದ 24 ಗಂಟೆ ಅವಧಿಯಲ್ಲಿ 50 ಮಿ.ಮೀ.ಗಿಂತ ಹೆಚ್ಚು ಮಳೆ ಆಗಿರುವುದು ಜುಲೈ, 31 ರಂದು ದಾಖಲಾಗಿದೆ.
ಜಿಲ್ಲೆಯ ಭಾಗಮಂಡಲ, ಶಾಂತಳ್ಳಿ, ಸೋಮವಾರಪೇಟೆ, ಸಂಪಾಜೆ, ಮಡಿಕೇರಿ, ಶ್ರೀಮಂಗಲ, ನಾಪೋಕ್ಲು, ಸುಂಟಿಕೊಪ್ಪ, ಕೊಡ್ಲಿಪೇಟೆ, ವಿರಾಜಪೇಟೆ, ಅಮ್ಮತ್ತಿ, ಮತ್ತಿತರ ಕಡೆಗಳಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಹೆಚ್ಚಿನ ಮಳೆಯಾಗಿರುವುದು ಕಂಡು ಬಂದಿದೆ. ಕೃಷಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದ್ದು, ಇದುವರೆಗೆ 400 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಆಗಿದ್ದು, ಆಗಸ್ಟ್ ಅಂತ್ಯದವರೆಗೂ ಭತ್ತ ನಾಟಿ ಕಾರ್ಯ ನಡೆಯಲಿದೆ. ಹಾಗೆಯೇ ಮುಸುಕಿನ ಜೋಳ ಭಿತ್ತನೆ ಕಾರ್ಯವು 1500 ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

ವಿರಾಜಪೇಟೆ ಕರ್ನಾಟಕ ಸಂಘದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

ನವೆಂಬರ್ 2, 2026

ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ನೆರವು: ‘ರಾಣಿ’ ಬಸ್ ಸಿಬ್ಬಂದಿಗೆ ಸನ್ಮಾನ

ನವೆಂಬರ್ 2, 2026

ಕುಶಾಲನಗರದ ನೂತನ ತಹಶೀಲ್ದಾರ್ ಆಗಿ ರಮೇಶ್ ಬಾಬು ಅಧಿಕಾರ ಸ್ವೀಕಾರ; ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ಆತ್ಮೀಯ ಸ್ವಾಗತ ಹಾಗೂ ಗೌರವ ಸನ್ಮಾನ

ನವೆಂಬರ್ 2, 2026

ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ನೆರವು: ‘ರಾಣಿ’ ಬಸ್ ಸಿಬ್ಬಂದಿಗೆ ಸನ್ಮಾನ

ನವೆಂಬರ್ 2, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ನ.2 NEWS DESK : ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯನ್ನು ಸಕಾಲದಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಸುರಕ್ಷಿತ…

ಕುಶಾಲನಗರದ ನೂತನ ತಹಶೀಲ್ದಾರ್ ಆಗಿ ರಮೇಶ್ ಬಾಬು ಅಧಿಕಾರ ಸ್ವೀಕಾರ; ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ಆತ್ಮೀಯ ಸ್ವಾಗತ ಹಾಗೂ ಗೌರವ ಸನ್ಮಾನ

ನವೆಂಬರ್ 2, 2026

ಕುಲಾಲ ಕ್ರಿಕೆಟ್ ಚಾಂಪಿಯನ್ ಟ್ರೋಫಿ ಸೀಸನ್-2: ಗೆಳೆಯರ ಬಳಗ ಕುಶಾಲನಗರ ತಂಡ ಚಾಂಪಿಯನ್

ನವೆಂಬರ್ 2, 2026

ಹಾಲಿನ ದರ ಏರಿಕೆ ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ; ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ

ನವೆಂಬರ್ 2, 2026

ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಕಲರವಕ್ಕೆ ಸಚಿವ ಪಿ.ಎಂ. ನರೇಂದ್ರಸ್ವಾಮಿ ಚಾಲನೆ

ನವೆಂಬರ್ 2, 2026

ಚೆಯ್ಯಂಡಾಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಕಟ್ಟಡ: ತಕ್ಷಣ ದುರಸ್ತಿಗೆ ಆಗ್ರಹ

ನವೆಂಬರ್ 2, 2026

ಸೋಲಿನ ಭೀತಿಯಿಂದ ಹುದಿಕೇರಿ ಜಿ.ಪಂ. ಕ್ಷೇತ್ರದ ಮೀಸಲಾತಿ ಬದಲಾವಣೆಗೆ ಕಾಂಗ್ರೆಸ್ ಪ್ರಯತ್ನ: ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪ

ನವೆಂಬರ್ 2, 2026

ನಾಪೋಕ್ಲುವಿನಲ್ಲಿ ‘ಸೇವ್ ಬರ್ಡ್ಸ್, ಸೇವ್ ಟ್ರೀ’ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮ

ನವೆಂಬರ್ 2, 2026

ಭರತನಾಟ್ಯ ಜೂನಿಯರ್ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಕು. ಖುಷಿಗೆ ಉನ್ನತ ಶ್ರೇಣಿ

ನವೆಂಬರ್ 2, 2026

ಹೆಬ್ಬಾಲೆ ವ್ಯಾಪ್ತಿಯ ವೀರಶೈವ ಲಿಂಗಾಯತ ಸಮಾಜದ ಸಭೆ: ನೂತನ ಬಸವ ಸಮಿತಿ ರಚನೆ, ಮೋಹನ್ ಹಕ್ಕೆ ನಂಜಪ್ಪ ಅಧ್ಯಕ್ಷರಾಗಿ ಆಯ್ಕೆ

ನವೆಂಬರ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.