
ಮಡಿಕೇರಿ ಆ.7 NEWS DESK : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಅಸ್ಸಾಂ ಮೂಲದ ಐವರು ಆರೋಪಿಗಳನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಅತ್ತೂರು ಗ್ರಾಮದ ಎಸ್ಟೇಟ್ ವೊಂದರ ಅಸ್ಸಾಂ ಮೂಲದ ಕಾರ್ಮಿಕರು ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ದಾಳಿ ಮಾಡಿ ಆರೋಪಿಗಳ ಸಹಿತ 6 ಕೆಜಿ 950 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದರು.
ಅಸ್ಸಾಂ ರಾಜ್ಯದ ದರಾಂಗ್ ಜಿಲ್ಲೆಯ ಮಂಗಲ್ ದೋಹಿ ತಾಲ್ಲೂಕಿನ ಅಜತ್ ಆಲಿ (25), ನೂರ್ ಹಕ್ (23), ಅಜಿತಾಲಿ (24), ಅಸದೊಲ್ ಹಕ್ (34) ಹಾಗೂ ಅಸತುಲ್ಲಾ ಹಕ್ (25) ಬಂಧಿತ ಆರೋಪಿಗಳಾಗಿದ್ದಾರೆ. ವಿರಾಜಪೇಟೆ ಉಪ ವಿಭಾಗದ ಡಿವೈಎಸ್‍ಪಿ ಮಹೇಶ್ ಕುಮಾರ್ ಎಸ್. ಗೋಣಿಕೊಪ್ಪ ಸಿಪಿಐ ಶಿವರಾಜ್.ಆರ್. ಮುದೋಳ್ ಅವರ ನೇತೃತ್ವದಲ್ಲಿ ಪಿ.ಎಸ್.ಐ ಕಾಳೇಗೌಡ, ತನಿಖಾ ವಿಭಾಗದ ಪಿ.ಎಸ್.ಐ. ವೆಂಕಟೇಶ್, ಎಎಸ್‍ಐ ಪಿ.ಟಿ.ಶ್ರೀನಿವಾಸ್, ಸಿಬ್ಬಂದಿಗಳಾದ ಮಹೇಂದ್ರ, ಗಿರೀಶ್, ಎನ್.ಎಸ್.ಲೊಕೇಶ್, ಸತೀಶ್, ಶುಭಂ, ರಘು, ಭರತ್ ಹಾಗೂ ಚಾಲಕ ಬಾಳಪ್ಪ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಶ್ಲಾಘಿಸಿದ್ದಾರೆ.









