Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಾದರಿ ದಾನಿಗಳು: ಕಡಿಯತ್ತೂರು ಶ್ರೀ ಭಗವತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರಕಾಶ್ ರೈ ದಂಪತಿಯಿಂದ ರೂ.12.78 ಲಕ್ಷ ನೆರವು*
  • *ಅ.11ರಿಂದ 20ರವರೆಗೆ ಮಡಿಕೇರಿ ದಸರಾ ಕ್ರೀಡಾಕೂಟ; ರಾಜ್ಯ ಮಟ್ಟದ ಹೋರಿ ಪ್ರದರ್ಶನ ಈ ಬಾರಿಯ ವಿಶೇಷ*
  • *ಮಡಿಕೇರಿ, ಗೋಣಿಕೊಪ್ಪ ದಸರಾ: ನಿಯಮ ಪಾಲಿಸಿ, ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ*
  • *ಗನ್-ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಅ.9ರಂದು ಸಿಎನ್‌ಸಿ ಸತ್ಯಾಗ್ರಹ*
  • *ದಸರಾ: ಮೈಸೂರು-ಬೆಂಗಳೂರು ನಡುವೆ 5 ವಿಶೇಷ ರೈಲು; 17 ಟ್ರಿಪ್‌ಗಳ ಸಂಚಾರ*
  • *ಮಡಿಕೇರಿಯಲ್ಲಿ ಬಿಜೆಪಿಯಿಂದ ‘ಸೇವಾ ಜ್ಯೋತಿ’ ಕಾರ್ಯಕ್ರಮ*
  • *ಅ.20ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆ*
  • *ರಾಷ್ಟ್ರೀಯ ರಕ್ತದಾನ ದಿನಾಚರಣೆ; ರಕ್ತದಾನ – ಮಹಾದಾನ: ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಕರೆ*
  • *ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆ; ಪರಿಶಿಷ್ಟ ಪಂಗಡ ಸಮಾಜಗಳ ಕುಂದುಕೊರತೆ ಸಭೆ ಶೀಘ್ರ ಆಹ್ವಾನ: ಜಿಲ್ಲಾಧಿಕಾರಿ*
  • *ಮಡಿಕೇರಿ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ; ಗೃಹಲಕ್ಷ್ಮಿ ಮರು ಪರಿಶೀಲನೆಗೆ ಮನೆಮನೆ ಸಮೀಕ್ಷೆ ಆರಂಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರೈತರ ಬಂಧನಕ್ಕೆ ಖಂಡನೆ : ಪೊಲೀಸ್ ಕ್ರಮದ ವಿರುದ್ಧ ಕೊಡಗು ಎಸ್‍ಪಿ ಕಚೇರಿ ಎದುರು ಪ್ರತಿಭಟನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರೈತರ ಬಂಧನಕ್ಕೆ ಖಂಡನೆ : ಪೊಲೀಸ್ ಕ್ರಮದ ವಿರುದ್ಧ ಕೊಡಗು ಎಸ್‍ಪಿ ಕಚೇರಿ ಎದುರು ಪ್ರತಿಭಟನೆ*

ಆಗಷ್ಟ್ 7, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement


ಮಡಿಕೇರಿ ಆ.7 NEWS DESK : ಬಿಡದಿ ಟೌನ್ ಶಿಪ್ ವಿರುದ್ಧ ಶಾಂತಿಯುತ ಹೋರಾಟ ನಡೆಸಲು ತೆರಳುತ್ತಿದ್ದ ಕೊಡಗಿನ ರೈತರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ರೈತ ಸಂಘದ ಪ್ರಮುಖರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಮಾತನಾಡಿ ಕೊಡಗಿನಲ್ಲಿ ಮಾತ್ರ ರೈತರನ್ನು ಬಂಧಿಸಲಾಗಿದೆ, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಶಾಂತಿಯುತ ಹೋರಾಟಕ್ಕೆ ಹೊರಟಿದ್ದ ರೈತರನ್ನು ಬಂಧಿಸುವ ಮೂಲಕ ಪೊಲೀಸರು ಕೃಷಿಕ ವರ್ಗಕ್ಕೆ ಅವಮಾನ ಮಾಡಿದ್ದಾರೆ. ಕೊಡಗಿನ ಗಡಿಯಲ್ಲಿ ಬಂಧಿಸಿದ ರೈತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಿತ್ತು. ಆದರೆ ಸಂಜೆವರೆಗೆ ಮದುವೆ ಮಂಟಪ, ಪೊಲೀಸ್ ಠಾಣೆಗಳಲ್ಲಿ ಕೂಡಿ ಹಾಕಿ ಅವಮಾನ ಎಸಗಲಾಗಿದೆ. ಬಂಧನಕ್ಕೆ ಒಳಗಾದ ರೈತರ ಕುಟುಂಬ ವರ್ಗ ಮತ್ತವರ ಮಕ್ಕಳ ಮನಸ್ಸಿನ ಮೇಲೆ ಬೀರಿದ ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ. ಪೊಲೀಸರ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರಪೇಟೆ ರೈತ ಸಂಘದ ಮುಖಂಡ ದಿನೇಶ್ ಮಾತನಾಡಿ, ಪೊಲೀಸರು ರೈತರನ್ನು ಬಂಧಿಸುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. ರೈತ ಮುಖಂಡ ಸರಗೂರು ನಾಗರಾಜ್ ಮಾತನಾಡಿ, ಬಿಡದಿ ಟೌನ್ ಶಿಪ್ ವಿರೋಧಿಸಲು ಕೊಡಗಿನ ರೈತರು ಬಿಡದಿಗೆ ಹೊರಟಿದ್ದರು. ಆದರೆ ಪೊಲೀಸರು ಕಳ್ಳರನ್ನು ಬಂಧಿಸುವ ಮಾದರಿಯಲ್ಲಿ ರೈತರನ್ನು ಬಂಧಿಸಿ ಮದುವೆ ಮಂಟಪ ಮತ್ತು ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ. ಬದುಕು ಕಟ್ಟಿಕೊಳ್ಳಲು ಬಿಡದಿ ರೈತರು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಬೆಂಬಲ ಸೂಚಿಸುವುದು ಅಪರಾಧವಲ್ಲ. ಇಂತಹ ಹೋರಾಟಗಳಿಗೆ ಪೊಲೀಸರು ಕೂಡ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮುಂಜಾಗೃತಾ ಕ್ರಮವಾಗಿ ರೈತರನ್ನು ಗಡಿ ಭಾಗದಲ್ಲಿ ತಡೆದು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮೇಲಾಧಿಕಾರಿಗಳು ಆದೇಶ ನೀಡಿದಂತೆಯೇ ನಡೆದುಕೊಳ್ಳಲಾಗಿದೆ. ಆದೇಶದ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಸಾಧ್ಯವಿಲ್ಲ. ಮೇಲಾಧಿಕಾರಿಗಳು ಹೊರಡಿಸಿದ ಆದೇಶದ ಪ್ರತಿ ಬೇಕಾದಲ್ಲಿ ಸೂಕ್ತ ಕಾನೂನು ರೀತಿಯಲ್ಲಿ ಪಡೆದುಕೊಳ್ಳಬಹುದು ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮನು ಸೋಮಯ್ಯ, ಆದೇಶದ ಪ್ರತಿಯನ್ನು ಕಾನೂನಾತ್ಮಕವಾಗಿ ಪಡೆಯಲಾಗುವುದು. ಈ ಹಿಂದೆಯೂ ರೈತ ಸಂಘ ಸಾಕಷ್ಟು ಹೋರಾಟಗಳನ್ನು ಮಾಡಿದೆ. ಆದರೆ ಎಲ್ಲಿಯೂ ರೈತರನ್ನು ತಡೆದು ಬಂಧಿಸುವ ಕೆಲಸವಾಗಿಲ್ಲ. ಶಾಂತಿಯುತ ಹೋರಾಟ ನಡೆಸುವ ಸಂದರ್ಭ ರೈತರನ್ನು ಬಂಧಿಸುವ ಕ್ರಮವನ್ನು ಕೈಬಿಡಬೇಕು. ಪೊಲೀಸರು ಕೂಡ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಪ್ರಮುಖರಾದ ಸುಜಯ್ ಬೋಪಯ್ಯ, ರಾಯ್ ಮಾದಪ್ಪ, ಸುರೇಶ್ ಚಕ್ರವರ್ತಿ, ಕೂತಿ ಹೂವಯ್ಯ, ಆಲೇಮಾಡ ಮಂಜುನಾಥ್, ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್.ಭರತ್, ಪಿರಿಯಾಪಟ್ಟಣ ಶಿವಣ್ಣ, ಮೈಸೂರಿನ ಲೋಕೇಶ್ ರಾಜೇ ಅರಸ್ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Related Posts

*ಮಾದರಿ ದಾನಿಗಳು: ಕಡಿಯತ್ತೂರು ಶ್ರೀ ಭಗವತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರಕಾಶ್ ರೈ ದಂಪತಿಯಿಂದ ರೂ.12.78 ಲಕ್ಷ ನೆರವು*

ಅಕ್ಟೋಬರ್ 7, 2026

*ಅ.11ರಿಂದ 20ರವರೆಗೆ ಮಡಿಕೇರಿ ದಸರಾ ಕ್ರೀಡಾಕೂಟ; ರಾಜ್ಯ ಮಟ್ಟದ ಹೋರಿ ಪ್ರದರ್ಶನ ಈ ಬಾರಿಯ ವಿಶೇಷ*

ಅಕ್ಟೋಬರ್ 7, 2026

*ಮಡಿಕೇರಿ, ಗೋಣಿಕೊಪ್ಪ ದಸರಾ: ನಿಯಮ ಪಾಲಿಸಿ, ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ*

ಅಕ್ಟೋಬರ್ 7, 2026

*ಅ.11ರಿಂದ 20ರವರೆಗೆ ಮಡಿಕೇರಿ ದಸರಾ ಕ್ರೀಡಾಕೂಟ; ರಾಜ್ಯ ಮಟ್ಟದ ಹೋರಿ ಪ್ರದರ್ಶನ ಈ ಬಾರಿಯ ವಿಶೇಷ*

ಅಕ್ಟೋಬರ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.7: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಕ್ರೀಡಾಕೂಟಗಳನ್ನು…

*ಮಡಿಕೇರಿ, ಗೋಣಿಕೊಪ್ಪ ದಸರಾ: ನಿಯಮ ಪಾಲಿಸಿ, ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ*

ಅಕ್ಟೋಬರ್ 7, 2026

*ಗನ್-ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಅ.9ರಂದು ಸಿಎನ್‌ಸಿ ಸತ್ಯಾಗ್ರಹ*

ಅಕ್ಟೋಬರ್ 7, 2026

*ದಸರಾ: ಮೈಸೂರು-ಬೆಂಗಳೂರು ನಡುವೆ 5 ವಿಶೇಷ ರೈಲು; 17 ಟ್ರಿಪ್‌ಗಳ ಸಂಚಾರ*

ಅಕ್ಟೋಬರ್ 7, 2026

*ಮಡಿಕೇರಿಯಲ್ಲಿ ಬಿಜೆಪಿಯಿಂದ ‘ಸೇವಾ ಜ್ಯೋತಿ’ ಕಾರ್ಯಕ್ರಮ*

ಅಕ್ಟೋಬರ್ 7, 2026

*ಅ.20ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆ*

ಅಕ್ಟೋಬರ್ 7, 2026

*ರಾಷ್ಟ್ರೀಯ ರಕ್ತದಾನ ದಿನಾಚರಣೆ; ರಕ್ತದಾನ – ಮಹಾದಾನ: ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಕರೆ*

ಅಕ್ಟೋಬರ್ 7, 2026

*ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆ; ಪರಿಶಿಷ್ಟ ಪಂಗಡ ಸಮಾಜಗಳ ಕುಂದುಕೊರತೆ ಸಭೆ ಶೀಘ್ರ ಆಹ್ವಾನ: ಜಿಲ್ಲಾಧಿಕಾರಿ*

ಅಕ್ಟೋಬರ್ 7, 2026

*ಮಡಿಕೇರಿ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ; ಗೃಹಲಕ್ಷ್ಮಿ ಮರು ಪರಿಶೀಲನೆಗೆ ಮನೆಮನೆ ಸಮೀಕ್ಷೆ ಆರಂಭ*

ಅಕ್ಟೋಬರ್ 7, 2026

*ಮಹಿಳೆಯರ ಬ್ಯಾಡ್ಮಿಂಟನ್ ಹಾಗೂ ಪುರುಷರ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ದ್ವಿತೀಯ ಸ್ಥಾನ*

ಅಕ್ಟೋಬರ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.