Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ*
  • *ಆ.15 ರಿಂದ ಮಲೇತಿರಿಕೆ ಬೆಟ್ಟದ ಶ್ರೀ ಶನೇಶ್ವರ ದೇವಾಲಯದಲ್ಲಿ ವಾರ್ಷಿಕ ಶ್ರಾವಣ ಮಹೋತ್ಸವ*
  • *ಸ್ನಾತಕೋತ್ತರ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ*
  • *ಸರ್ಕಾರಿ ನೌಕರರೊಂದಿಗೆ ಸಂವಾದ : ಸರ್ಕಾರದ ದೂರದೃಷ್ಟಿ ತಿಳಿದು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್* 
  • *ಕೈಗಾರಿಕಾ ಅಪಘಾತಗಳ ತಡೆ ಹಾಗೂ ತುರ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ : ಕೈಗಾರಿಕೆ ಇಲಾಖೆ ಕಟ್ಟುನಿಟ್ಟಿನ ಸೂಚನೆ*
  • *ನಿಧನ ಸುದ್ದಿ*
  • *ಪುರಸಭೆ ಕಚೇರಿಯಲ್ಲೇ ಮೀನು ಮಾರಾಟ :  ಬಿಜೆಪಿ ಪ್ರಮುಖರಿಂದ ವಿನೂತನ ಪ್ರತಿಭಟನೆ*
  • *ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆ ಪುನರುಜ್ಜೀವನಕ್ಕೆ ಚಿಂತನೆ : ಜಾಣಗೆರೆ ವೆಂಕಟರಾಮಯ್ಯ*
  • *ಕಸ್ತೂರಿ ರಂಗನ್ ವರದಿ : ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರ ಪ್ರತಿಭಟನೆ*
  • *ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರ ಸಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ*

ಆಗಷ್ಟ್ 11, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ ಆ.11 NEWS DESK : ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಶಿಸ್ತಿನ ಗುಣಗಳನ್ನು ಬೆಳೆಸುವ ಉದ್ದೇಶದಿಂದ ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಅಧಿಕಾರ  ವಹಿಸಿ ಮಾತನಾಡಿದ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಲೇಪಾಕ್ಷಿ ಐ.ಡಿ., ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣ, ಶಿಸ್ತು ಹಾಗೂ ದೇಶಪ್ರೇಮವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು. ಅಧಿಕಾರ ಸ್ವೀಕರಿಸಿದ ವಿದ್ಯಾರ್ಥಿ ನಾಯಕರು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಡೆದುಕೊಳ್ಳಬೇಕು. ಶಾಲಾ ಹಂತದಲ್ಲಿ ದೊರೆಯುವ ಇಂತಹ ಜವಾಬ್ದಾರಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಅಡಿಪಾಯವಾಗುತ್ತವೆ ಎಂದು ಹೇಳಿದರು. :: ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ: ಬಿ.ಬಿ. ಮಾದಪ್ಪ :: 
ಗೌರವ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಟ್ರಸ್ಟ್ ಅಧ್ಯಕ್ಷ ರೋಟೇರಿಯನ್ ಬಿ.ಬಿ. ಮಾದಪ್ಪ ಮಾತನಾಡಿ, ನಾಯಕತ್ವ ಎಂಬುದು ಕೇವಲ ಹುದ್ದೆಯಲ್ಲ, ಅದೊಂದು ಜವಾಬ್ದಾರಿ. ನೂತನವಾಗಿ ಆಯ್ಕೆಯಾದ ಶಾಲಾ ನಾಯಕರು ಶಾಲೆಯ ಶಿಸ್ತು ಮತ್ತು ಗೌರವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಬೆಳೆಸುವ ಕಾರ್ಯ ನಡೆಯಬೇಕು ಎಂದರು. ರೋಟರಿ ಟ್ರಸ್ಟ್ ಕಾರ್ಯದರ್ಶಿ ರೋಟೇರಿಯನ್ ಸರೋಜ್ ಕಾರ್ಯಪ್ಪ ಉಪಸ್ಥಿತರಿದ್ದು, ನೂತನ ನಾಯಕರಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ ಮಾತನಾಡಿ, ವಿದ್ಯಾರ್ಥಿ ಹಂತದಲ್ಲಿ ದೊರೆಯುವ ಜವಾಬ್ದಾರಿಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯ ಶಿಸ್ತು ಹಾಗೂ ನಿಯಮಗಳನ್ನು ಪಾಲಿಸುವುದರೊಂದಿಗೆ ತಮ್ಮ ಕರ್ತವ್ಯಗಳನ್ನು ಪ್ರೀತಿಯಿಂದ ನಿರ್ವಹಿಸಬೇಕು ಎಂದು ಹೇಳಿದರು. ನೂತನ ನಾಯಕರು ಇಡೀ ಶಾಲೆಗೆ ಮಾದರಿಯಾಗಿ ನಿಂತು, ಸಹಪಾಠಿಗಳನ್ನು ಪ್ರೀತಿ ಹಾಗೂ ಗೌರವದಿಂದ ಮುನ್ನಡೆಸಬೇಕು ಎಂದು ಹಾರೈಸಿದರು. :: ನೂತನ ವಿದ್ಯಾರ್ಥಿ ನಾಯಕರು ::  ಶಾಲಾ ನಾಯಕಿಯಾಗಿ ಹನ್ನಾ ವಿಲ್ಸನ್, ಉಪ ಶಾಲಾ ನಾಯಕಿಯಾಗಿ ರಕ್ಷಿತಾ, ಕ್ರೀಡಾ ನಾಯಕಿಯಾಗಿ ರಿದಾ ಫಾತಿಮಾ, ಉಪ ಕ್ರೀಡಾ ನಾಯಕರಾಗಿ ಆರ್ಯ ಚಿನ್ನಪ್ಪ, ಸಾಂಸ್ಕೃತಿಕ ನಾಯಕಿಯಾಗಿ ಗ್ರೀಶಾಲಿ, ಉಪ ಸಾಂಸ್ಕೃತಿಕ ನಾಯಕಿಯಾಗಿ ನಿಷ್ಮಾ ಕಿರಣ್, ಶಿಸ್ತು ನಾಯಕರಾಗಿ ಭವಿಷ್ ಪಿ., ಉಪ ಶಿಸ್ತು ನಾಯಕಿಯಾಗಿ ಯಶಸ್ವಿನಿ, ಆರೋಗ್ಯ ನಾಯಕಿಯಾಗಿ ರಚನಾ, ಉಪ ಆರೋಗ್ಯ ನಾಯಕಿಯಾಗಿ ತಶ್ವಿ ಆಯ್ಕೆಯಾದರು. ಹೌಸ್ ನಾಯಕರಾಗಿ ಎಮರಾಲ್ಡ್ ಹೌಸ್‌ನ ಕ್ಯಾಪ್ಟನ್ ಅನ್ವಿಕಾ, ವೈಸ್ ಕ್ಯಾಪ್ಟನ್ ಹಫ್ನಾಜ್; ರೂಬಿ ಹೌಸ್‌ನ ಕ್ಯಾಪ್ಟನ್ ಪ್ರೇಕ್ಷಾ, ವೈಸ್ ಕ್ಯಾಪ್ಟನ್ ನವ್ಯಶ್ರೀ; ಸಫೈರ್ ಹೌಸ್‌ನ ಕ್ಯಾಪ್ಟನ್ ಯಾನ್ ಸಿ.ಪಿ., ವೈಸ್ ಕ್ಯಾಪ್ಟನ್ ಹಿಬಾ; ಟೋಪಾಜ್ ಹೌಸ್‌ನ ಕ್ಯಾಪ್ಟನ್ ಮೊಹಮ್ಮದ್ ಶಾನ್, ವೈಸ್ ಕ್ಯಾಪ್ಟನ್ ವಿಬಿನ್ ಕುಶಾಲಪ್ಪ ಪ್ರಮಾಣ ವಚನ ಸ್ವೀಕರಿಸಿದರು. ಶಾಲೆಯ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಆ.15 ರಿಂದ ಮಲೇತಿರಿಕೆ ಬೆಟ್ಟದ ಶ್ರೀ ಶನೇಶ್ವರ ದೇವಾಲಯದಲ್ಲಿ ವಾರ್ಷಿಕ ಶ್ರಾವಣ ಮಹೋತ್ಸವ*

ಆಗಷ್ಟ್ 11, 2026

*ಸ್ನಾತಕೋತ್ತರ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ*

ಆಗಷ್ಟ್ 11, 2026

*ಸರ್ಕಾರಿ ನೌಕರರೊಂದಿಗೆ ಸಂವಾದ : ಸರ್ಕಾರದ ದೂರದೃಷ್ಟಿ ತಿಳಿದು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್* 

ಆಗಷ್ಟ್ 11, 2026

*ಆ.15 ರಿಂದ ಮಲೇತಿರಿಕೆ ಬೆಟ್ಟದ ಶ್ರೀ ಶನೇಶ್ವರ ದೇವಾಲಯದಲ್ಲಿ ವಾರ್ಷಿಕ ಶ್ರಾವಣ ಮಹೋತ್ಸವ*

ಆಗಷ್ಟ್ 11, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಆ.11 NEWS DESK : ಶ್ರೀ ಕ್ಷೇತ್ರ ಮಲೆತಿರಿಕೆ ಬೆಟ್ಟದ ಶ್ರೀ ಶನೇಶ್ವರ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ…

*ಸ್ನಾತಕೋತ್ತರ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ*

ಆಗಷ್ಟ್ 11, 2026

*ಸರ್ಕಾರಿ ನೌಕರರೊಂದಿಗೆ ಸಂವಾದ : ಸರ್ಕಾರದ ದೂರದೃಷ್ಟಿ ತಿಳಿದು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್* 

ಆಗಷ್ಟ್ 11, 2026

*ಕೈಗಾರಿಕಾ ಅಪಘಾತಗಳ ತಡೆ ಹಾಗೂ ತುರ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ : ಕೈಗಾರಿಕೆ ಇಲಾಖೆ ಕಟ್ಟುನಿಟ್ಟಿನ ಸೂಚನೆ*

ಆಗಷ್ಟ್ 11, 2026

*ನಿಧನ ಸುದ್ದಿ*

ಆಗಷ್ಟ್ 11, 2026

*ಪುರಸಭೆ ಕಚೇರಿಯಲ್ಲೇ ಮೀನು ಮಾರಾಟ :  ಬಿಜೆಪಿ ಪ್ರಮುಖರಿಂದ ವಿನೂತನ ಪ್ರತಿಭಟನೆ*

ಆಗಷ್ಟ್ 11, 2026

*ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆ ಪುನರುಜ್ಜೀವನಕ್ಕೆ ಚಿಂತನೆ : ಜಾಣಗೆರೆ ವೆಂಕಟರಾಮಯ್ಯ*

ಆಗಷ್ಟ್ 11, 2026

*ಕಸ್ತೂರಿ ರಂಗನ್ ವರದಿ : ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರ ಪ್ರತಿಭಟನೆ*

ಆಗಷ್ಟ್ 11, 2026

*ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರ ಸಾವು*

ಆಗಷ್ಟ್ 11, 2026

*ಆ.14 ರಂದು ಮಡಿಕೇರಿಯಲ್ಲಿ ಗಾನ ಕೋಗಿಲೆ ಎಸ್.ಜಾನಕಿ ಗಾನ ನಮನ ಕಾರ್ಯಕ್ರಮ*

ಆಗಷ್ಟ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.