
ಮಡಿಕೇರಿ ಆ.13 NEWS DESK : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಆಗಸ್ಟ್ 18 ರಂದು ತಾಲ್ಲೂಕು ಪಂಚಾಯಿತಿ, ಪೊನ್ನಂಪೇಟೆ, ಇಲ್ಲಿ ಬೆಳಗ್ಗೆ 10 ರಿಂದ ಅಪರಾಹ್ನ 1 ಗಂಟೆ ವರೆಗೆ ‘ಮಿನಿ ಉದ್ಯೋಗ ಮೇಳ’ ನಡೆಯಲಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಮಂಜುನಾಥ್ ಅವರು ಅವರು ತಿಳಿಸಿದ್ದಾರೆ. ಮಿನಿ ಉದ್ಯೋಗ ಮೇಳದಲ್ಲಿ ಆಟೋವಿಲ್ ಇಂಡಿಯಾ, ಜೆ.ಕೆ.ಟೈರ್ಸ್, ಪಾಲಿಬೆಟ್ಟದ ಕೂರ್ಗ್ ಕ್ಲಿಫ್ಸ್ ರೇಸಾರ್ಟ್, ಪಾಲಿಬೆಟ್ಟದ ಕೂರ್ಗ್ ಪಾರ್ಕುಪೈನ್ ಕ್ಯಾಸ್ಟಲ್ ರೇಸಾರ್ಟ್, ಮಡಿಕೇರಿಯ ಎವೋಲ್ ಬ್ಯಾಕ್ ರೆಸಾರ್ಟ್, ಮಂಗಳೂರಿನ ಡಾಬರ್‍ಮ್ಯಾನ್ ಸೆಕ್ಯೂರಿಟಿ ಎಜೆನ್ಸಿ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದ್ದಾರೆ. ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ., ಐ.ಟಿ.ಐ, ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ಪದವಿ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗ ಪಡೆಯಬಹುದಾಗಿದೆ. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗ ಮೇಳಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಉದ್ಯೋಗ ಸಂಯೋಜಕರ ದೂರವಾಣಿ ಸಂಖ್ಯೆ 8296020826 ಇವರನ್ನು ಸಂಪರ್ಕಿಸಬಹುದಾಗಿದೆ.








