


ಕುಶಾಲನಗರ ಆ.15 NEWS DESK : ಕುಶಾಲನಗರದ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಸ್ವಾತಂತ್ರೋತ್ಸವ ಹಾಗೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಆಫರ್‌ಗಳು ಲಭ್ಯವಿದ್ದು ಆಗಸ್ಟ್ 15ರಿಂದ 23ರವರೆಗೆ ನಡೆಯುವ ಈ ವಿಶೇಷ ಮಾರಾಟ ಮೇಳದಲ್ಲಿ ಗ್ರಾಹಕರಿಗೆ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಖರೀದಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸಂಸ್ಥೆಯು 1957ರಿಂದ ಗುಣಮಟ್ಟ, ವಿಶ್ವಾಸ ಹಾಗೂ ವಿನೂತನ ವಿನ್ಯಾಸಗಳ ಮೂಲಕ ಗ್ರಾಹಕರ ಮೆಚ್ಚುಗೆಗಳಿಸಿಕೊಂಡಿದೆ. ಈ ಅವಧಿಯಲ್ಲಿ ಚಿನ್ನದ ಆಭರಣಗಳ VA ಮೇಲೆ ಪ್ರತೀ ಗ್ರಾಂಗೆ ರೂ.600 ವರೆಗೆ ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ಫ್ಲಾಟ್ ರೂ.7000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿಗೆ ಫ್ಲಾಟ್ ರೂ.8000 ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ಹಳೆಯ ಚಿನ್ನಾಭರಣಗಳ ಎಕ್ಸ್‌ಚೇಂಜ್ ದರದ ಮೇಲೆ 0% ಕಡಿತದ ಸೌಲಭ್ಯವೂ ಲಭ್ಯವಿದೆ. ಇದರೊಂದಿಗೆ ಆಕರ್ಷಕ ಹಳದಿ ಟ್ಯಾಗ್ ಸಂಗ್ರಹದಲ್ಲಿ 10%ರಿಂದ ಪ್ರಾರಂಭವಾಗುವ ವಿಶೇಷ ರಿಯಾಯಿತಿಯೊಂದಿಗೆ ಸುಂದರ ನೆಕ್ಸಸ್, ಹಾರ, ಚೈನ್, ಉಂಗುರ, ಬಳೆ ಸೇರಿದಂತೆ ವೈವಿಧ್ಯಮಯ ಹಾಗೂ ಮನಮೋಹಕ ಆಭರಣಗಳ ವಿಶಾಲ ಸಂಗ್ರಹ ಗ್ರಾಹಕರಿಗಾಗಿ ಲಭ್ಯವಿದೆ. ಸಂಸ್ಥೆಯ ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಹಾಗೂ ಮೂಡಬಿದ್ರೆಯ ಎಲ್ಲಾ ಮಳಿಗೆಗಳಲ್ಲಿ ಈ ವಿಶೇಷ ಆಫರ್‌ಗಳು ಲಭ್ಯವಿದ್ದು, ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









