Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಲು ಒತ್ತಾಯ : ಮಡಿಕೇರಿಯಲ್ಲಿ ಪ್ರತಿಭಟನೆ*
  • *ಮರೆನಾಡಿನ ಬಿರುನಾಣಿಯಲ್ಲಿ ಸಿಎನ್‌ಸಿ ಮಾನವ ಸರಪಳಿ : ಕೊಡವ ಜನಸಂಪರ್ಕ ಅಭಿಯಾನ ಆರಂಭ*
  • *ಪತ್ರಕರ್ತ ಶ್ರೀಧರ್ ಹೂವಲ್ಲಿ ರಚಿಸಿರುವ ಕೊಡವ ಮಕ್ಕಡ ಕೂಟದ 126ನೇ ಪುಸ್ತಕ “ಕಥಾಂಜಲಿ” ಲೋಕಾರ್ಪಣೆ : ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಯಾಗಬೇಕು : ಅಡಗೂರು ಹೆಚ್.ವಿಶ್ವನಾಥ್ ಅಭಿಮತ*
  • *ಪುಣ್ಯಕ್ಷೇತ್ರ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಭೇಟಿ, ವಿಶೇಷ ಪೂಜೆ*
  • *ಭಾಗಮಂಡಲ : ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಪಾಡುವುದು ನನ್ನ ಕರ್ತವ್ಯ : ಸಿಎಂ ಡಿ.ಕೆ.ಶಿವಕುಮಾರ್*
  • *ಮಡಿಕೇರಿ : ಮೊಹಮ್ಮದ್ ನಲಪ್ಪಾಡ್ ವಿವಾಹದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್*
  • *ಮಡಿಕೇರಿಯಲ್ಲಿ ಎಸ್.ಜಾನಕಿ ಗೀತ ನಮನ* 
  • *ಕೊಡಗು ಸೇರಿದಂತೆ 6 ಜಿಲ್ಲೆಗಳನ್ನು “ಲಾಯಲ್ ಪ್ರವಾಸೋದ್ಯಮ ಕೇಂದ್ರ”ವನ್ನಾಗಿ ಪರಿವರ್ತಿಸಿ*
  • *ಕೊಡಗು ಸೈನಿಕ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ*
  • *ಮಡಿಕೇರಿ ಕೊಡವ ಸಮಾಜದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮರೆನಾಡಿನ ಬಿರುನಾಣಿಯಲ್ಲಿ ಸಿಎನ್‌ಸಿ ಮಾನವ ಸರಪಳಿ : ಕೊಡವ ಜನಸಂಪರ್ಕ ಅಭಿಯಾನ ಆರಂಭ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮರೆನಾಡಿನ ಬಿರುನಾಣಿಯಲ್ಲಿ ಸಿಎನ್‌ಸಿ ಮಾನವ ಸರಪಳಿ : ಕೊಡವ ಜನಸಂಪರ್ಕ ಅಭಿಯಾನ ಆರಂಭ*

ಆಗಷ್ಟ್ 17, 20265 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಆ.17 : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ನಮ್ಮ ಸಂವಿಧಾನದ ವಿಧಿ 371, 5 ಮತ್ತು 6ರ ಅಡಿಯಲ್ಲಿ ಸ್ವಯಂ ಆಡಳಿತ, ವಿಶ್ವಸಂಸ್ಥೆಯ ಸನ್ನದು ಮತ್ತು ಸಂವಿಧಾನದ ಅಡಿಯಲ್ಲಿ ಆದಿಮಸಂಜಾತ ಸಮುದಾಯವಾಗಿ ಕೊಡವ ಜನಾಂಗೀಯತೆಗೆ ಸಾಂವಿಧಾನಿಕ ರಕ್ಷಣೆ ಹಾಗೂ ವಿಶೇಷ ಗುರುತಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊ0ಡು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಜನಸಂಪರ್ಕ ಅಭಿಯಾನವನ್ನು ಇಂದಿನಿ0ದ ಮರೆನಾಡಿನ ಬಿರುನಾಣಿಯಿಂದ ಆರಂಭಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಯೋಜಿಸಿರುವ ಅಭಿಯಾನದ ಭಾಗವಾಗಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಇಂದು ಬಿರುನಾಣಿಯಲ್ಲಿ ನಡೆಯಿತು. ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು ಆದಿಮಸಂಜಾತ ಕೊಡವರು ಪ್ರತ್ಯೇಕ ಅನಿಮಿಸ್ಟಿಕ್ ನಂಬುಗೆಯ ಜನರೆಂದು ಸಂವಿಧಾನದ ಅಡಿಯಲ್ಲಿ ಗುರುತಿಸಿವ ಮೂಲಕ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸ್ವಯಂ ಶಾಸನದ ಜನ್ಮ ಭೂಮಿಯಾಗಿ ಭದ್ರತೆ ದೊರೆತಲ್ಲಿ ಮಾತ್ರ ಕೊಡವ ನೆಲ, ಜಲ, ಸಂಸೃತಿ, ಪರಂಪರೆ, ಪರಿಸರ, ಜೀವವೈವಿಧ್ಯ ರಕ್ಷಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅದಕ್ಕಾಗಿ ನಮ್ಮ ಆಧ್ಯಾತ್ಮಿಕ ನೆಲೆಗಳಾದ ಮಂದ್, ಕೊಡವರ ವಿಶಿಷ್ಟ ವಂಶಾವಳಿ, ಸಾಂಪ್ರದಾಯಿಕ ನೆಲೆಯನ್ನು ಅನಾವರಣ ಮಾಡುವುದರೊಂದಿಗೆ ಮುಂಬರುವ 2027ರ ರಾಷ್ಟ್ರೀಯ ಜನಗಣತಿಯಲ್ಲಿ, ಕೊಡವರು ಪ್ರತ್ಯೇಕ ಅಪರೂಪದ ಜನಾಂಗವೆ0ದು ದಾಖಲೀಕರಣ ಮಾಡಬೇಕು ಎಂದರು. ಕೊಡವರ ಧಾರ್ಮಿಕ ಸಂಸ್ಕಾರ ‘ಗನ್-ತೋಕ್’ (ಬಂದೂಕು) ಸಂಪ್ರದಾಯವನ್ನು ಸಂವಿಧಾನದ ವಿಧಿ 25, 26 ಮತ್ತು 28ರ ಅಡಿಯಲ್ಲಿ ಮುಂದುವರಿಸುವುದನ್ನು ಕೇಂದ್ರೀಕರಿಸಿದೆ. ಇದರೊಂದಿಗೆ, ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಲಾಗಿರುವ “ಸಂಘ” ಅದೃಶ್ಯ ಕ್ಷೇತ್ರದ ಮಾದರಿಯಲ್ಲೇ, ಆದಿಮಸಂಜಾತ ಅನಿಮಿಸ್ಟಿಕ್ (ಪ್ರಕೃತಿ ಆರಾಧಕ) ಕೊಡವರಿಗಾಗಿ ಸಂಸತ್ತು ಮತ್ತು ಶಾಸನಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ನೀಡಬೇಕು ಎಂಬ ಬೇಡಿಕೆಯನ್ನೂ ಒಳಗೊಂಡ0ತೆ ಕಾವೇರಿ ನದಿ ಹುಟ್ಟುವ ಕೊಡವ ನೆಲಕ್ಕೆ ವಿಶ್ವ ರಾಷ್ಟ್ರ ಸಂಸ್ಥೆಯ 1966ರ ಹೆಲ್ಸಿಂಕಿ ನಿಯಮದ ಪ್ರಕಾರ ಸಿಂಹಪಾಲು ಸಿಗಬೇಕು. ಜೀವಜಲವಾಹಿನಿ ತಲಕಾವೇರಿಯನ್ನು ಕೊಡವರ ಪವಿತ್ರ ತೀರ್ಥ ಕ್ಷೇತ್ರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ದೇವಾಟ್ ಪರಂಬು ಕೊಡವ ನರಮೇಧ ದುರಂತ ಸ್ಥಳದಲ್ಲಿ ಮತ್ತು ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯ ಅರಮನೆ ಪಿತೂರಿಯಲ್ಲಿ ನಡೆದ ಕೊಡವರ ರಾಜಕೀಯ ಹತ್ಯಾಕಾಂಡಗಳಿಗೆ ಸಂವಿಧಾನದ 49ನೇ ವಿಧಿ ಮತ್ತು ವಿಶ್ವ ರಾಷ್ಟ್ರ ಸಂಸ್ಥೆಯ ವೆನಿಸ್ ಚಾರ್ಟರ್ 1964ರ ಅನ್ವಯ ಅಂತಾರಾಷ್ಟ್ರೀಯ ನರಮೇಧ ಸ್ಮಾರಕ ನಿರ್ಮಿಸಬೇಕು ಮತ್ತು ಕೊಡವ ಆಧ್ಯಾತ್ಮಿಕ ನೆಲೆ ಮಂದ್, ದೇವಬನ ಹಾಗೂ ಇನ್ನಿತರ ಪಾರಂಪರಿಕ ತಾಣಗಳನ್ನು, ಯುನೆಸ್ಕೊ ಪಟ್ಟಿಯಲ್ಲಿ ಸೇರಿಸಬೇಕು. ಶಾಸ್ತ್ರೀಯ ಕೊಡವ ತಕ್ಕ್ ನ್ನು ಸಂವಿಧಾನದ 8ನೇ ಶೆಡ್ಯೂಲ್ಗೆ ಸೇರಿಸಬೇಕು ಹಾಗೂ ಹೊರಗಿನ ಕೆಳದಿ/ಪಾಲೇರಿ ರಾಜರು, ತದನಂತರ ಬ್ರಿಟಿಷರಾದಿಯಾಗಿ ಆದಿಮಸಂಜಾತ ಕೊಡವರ ಪೂರ್ವಾರ್ಜಿತ ಪ್ರಾಚೀನ ಭೂಮಿಗಳನ್ನು ತೆರಿಗೆ ನೀಡದ ನೆಪದಲ್ಲಿ ವಶಕ್ಕೆ ಪಡೆದು, ಹೊರಗಿನ ಲೇವಾದೇವಿಗಾರರು, ಬಂಡವಾಳ ಶಾಹಿಗಳು ಮತ್ತು ಆಗರ್ಭ ಧನಿಕರಿಗೆ ಹರಾಜು, ಮಾರಾಟ, ಭೋಗ್ಯ ಮತ್ತು ಅಡಮಾನದ ಮೂಲಕ ಕಬ್ಜ ಮಾಡಲಾದ ಕೊಡವ ಭೂಮಿಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಆದಿಮಸಂಜಾತ ಜನರ ಭೂಮಿ ಮರಳಿ ಪಡೆಯುವ ಹಕ್ಕಿನ ಅನ್ವಯ ಕೊಡವರಿಗೆ ವಾಪಸು ನೀಡಬೇಕು ಎಂಬ ಹಕ್ಕೊತ್ತಾಯಗಳ ಕುರಿತು ಎನ್.ಯು.ನಾಚಪ್ಪ ವಿವರಿಸಿದರು. ಮುಂದುವರಿದು ಮಾತನಾಡಿದ ಅವರು, ನಮ್ಮ ಮೇಲ್ಕಂಡ ಮುಖ್ಯ ಆಕಾಂಕ್ಷೆಗಳು, ಅಸ್ಮಿತೆ, ಭೂಮಿ, ಭಾಷೆ, ಸಾಂಸ್ಕೃತಿಕ, ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ‍್ಯವನ್ನು ನಿರ್ಧರಿಸಲು, ಕೇಂದ್ರ ಸರ್ಕಾರವು ನಡೆಸುವ ರಾಷ್ಟ್ರೀಯ ಜನಗಣತಿ 2027 ಹಾಗೂ ಜಾತಿ ಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ನಮೂದಿಸಿ, ದಾಖಲಿಸಬೇಕು. 1871-72ರಿಂದ 1941ರ ಜನಗಣತಿಯವರೆಗೆ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ಗಣನೆಗೆ ತೆಗೆದುಕೊಳ್ಳಲಾಗಿತ್ತು. 1941ರ ನಂತರ, ನಾವು ಆ ಅಸ್ಮಿತೆಯನ್ನು ಕಳೆದುಕೊಂಡು ದೊಡ್ಡ ಗುಂಪುಗಳೊ0ದಿಗೆ ವಿಲೀನಗೊಂಡೆವು, ಇದರಿಂದ ಕೊಡವರು ಎಲ್ಲವನ್ನೂ ಕಳೆದುಕೊಳ್ಳುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು. 1956 ರವರೆಗೆ ನಮ್ಮ ಪ್ರೀತಿಯ ಮಾತೃಭೂಮಿಯಾದ “ಸಿ” ರಾಜ್ಯ ಕೊಡಗು ಅಸ್ತಿತ್ವದಲ್ಲಿತ್ತು. 1956 ರಲ್ಲಿ ರಾಜ್ಯಗಳ ಮರುಸಂಘಟನೆ ಕಾಯ್ದೆಯಡಿ ಕೊಡಗು ಕರ್ನಾಟಕದೊಂದಿಗೆ ವಿಲೀನಗೊಂಡಿತು.
1941ರ ಜನಗಣತಿಯಲ್ಲಿ ಕೊಡವರ ಹೆಸರು ಅಳಿಸಿಹಾಕಿದ್ದು/ವಿಲೀನಗೊಳಿಸಿದ್ದು ಮತ್ತು 1956ರ ವಿಲೀನ—ಈ ಎರಡೂ ಘಟನೆಗಳು ಅತ್ಯಂತ ಪ್ರಮುಖವಾದ ಐತಿಹಾಸಿಕ ಅನ್ಯಾಯಗಳಾಗಿದ್ದು, ಇದು ನಮ್ಮ ಅಸ್ಮಿತೆಗೆ ಬಿದ್ದ ಪ್ರಭಲವಾದ ದ್ವಿಗುಣ ಪೆಟ್ಟಾಗಿದೆ ಎಂದು ವಿಷಾದಿಸಿದರು. ಇದರೊಂದಿಗೆ, ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಗೆ ಮಾಡಲಾದ ಮಾರಕ ತಿದ್ದುಪಡಿಗಳಿಂದಾಗಿ, ರಾಜ್ಯ ಸರ್ಕಾರವು ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಹೊರಗಿನ ಉದ್ಯಮಿಗಳು ಮತ್ತು ಬಂಡವಾಳಶಾಹಿಗಳ ಬೃಹತ್ ಟೌನ್‌ಶಿಪ್‌ಗಳು, ದೈತ್ಯ ರೆಸಾರ್ಟ್ಗಳು ಮತ್ತು ಲೇಔಟ್‌ಗಳನ್ನು ನಿರ್ಮಿಸಲು ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಖರೀದಿಸುತ್ತಿದ್ದಾರೆ. ಇದು ಕಾವೇರಿಯ ಶಾಶ್ವತ ಜಲಮೂಲಗಳಿಗೆ ಧಕ್ಕೆ ತರುತ್ತಿದ್ದು, ಕಾಫಿ ತೋಟಗಳು ಮತ್ತು ಕೃಷಿ ಪ್ರದೇಶಗಳು ಕ್ಷೀಣಿಸಲು ಕಾರಣವಾಗಿದೆ. ಜೊತೆಗೆ ಜನಸಂಖ್ಯಾ ಸ್ವರೂಪ, ಭೂಪ್ರದೇಶ ಮತ್ತು ನಿತ್ಯಹರಿದ್ವರ್ಣ ಅರಣ್ಯ ಹೊದಿಕೆಯ ಬದಲಾವಣೆಗೆ ಪ್ರೇರೇಪಿಸುತ್ತಿದೆ. ಇದು ನಮ್ಮ ಸಂವಿಧಾನದ ವಿಧಿ 51A(f) ಹಾಗೂ ಆದಿಮಸಂಜಾತ ಸಮುದಾಯಗಳ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಒಪ್ಪಂದದ ತೀವ್ರ ಉಲ್ಲಂಘನೆಯಾಗಿದೆ. ಉದಾಹರಣೆಗೆ ಜೀವವೈವಿಧ್ಯ ಹೆಸರಾದ ಪಕ್ಷಿಮಘಟ್ಟ ಪ್ರದೇಶದಿಂದ ಮೊದಲ್ಗೊಂಡು ಕಾವೇರಿ ಜಲಾನಯನ ಪ್ರದೇಶದಾದ್ಯಂತ ಮುನ್ನೂರು ಗ್ರಾಮಗಳಲ್ಲಿ ಕನಿಷ್ಠವೆಂದರೂ ಪ್ರತಿ ಗ್ರಾಮಕ್ಕೆ 10 ರೆಸಾರ್ಟ್ ಗಳಂತೆ ಸುಮಾರು 3 ಸಾವಿರ ರೆಸಾರ್ಟ್ಗಳು ಬೃಹತ್ ಟೌನ್ ಶಿಪ್ ಗಳು ಮತ್ತು ಲೇಔಟ್ಗಳು ಹೊರಗಿನ ಬಂಡವಾಳಶಾಹಿಗಳಿ0ದ ತಲೆಎತ್ತಿದ್ದು, ಇದೆಲ್ಲವೂ ನಿರಂತವಾಗಿ ವ್ಯಾಪಕ ಭ್ರಷ್ಟಾಚಾರ ಮತ್ತು ಅಕ್ರಮ ಮಾರ್ಗದ ಹಣವಿಲೇವಾರಿಗಳ ಮೂಲಕ ಅನಿವಾಸಿ ಭಾರತೀಯ ಉದ್ಯಮಪತಿಗಳು, ಬಹುರಾಷ್ಟ್ರೀಯ ಕಂಪೆನಿಗಳು, ಕಾಳಸಂತೆಕೋರರು, ಭ್ರಷ್ಟ ಅಧಿಕಾರಶಾಹಿಗಳು, ದುಷ್ಟ ರಾಜಕಾರಣಿಗಳು, ಆರ್ಥಿಕ ಅಪರಾಧಿಗಳು ತಾವು ಸಂಪಾದಿಸಿದ ಕಪ್ಪು ಹಣವನ್ನು ಬಿಳುಪು ಮಾಡಲು ಕೊಡವ ನೆಲವನ್ನು ಖರೀದಿಸುವ ಮೂಲಕ ಈ ಪುಣ್ಯ ಭೂಮಿಯಲ್ಲಿ ದುಂಡಾವೃತ್ತಿಯನ್ನು ಎಗ್ಗಿಲ್ಲದೆ ನಡೆಸುತ್ತಿದ್ದಾರೆ. ಇವರು ಖರೀದಿಸಿದ ಭೂಮಿಯು 24 ಘಂಟೆಗಳೊಳಗೆ, ವಾಣಿಜ್ಯ ಉದ್ದೇಶಕೋಸ್ಕರ ಪರಿವರ್ತಿಸಲಾಗುತ್ತಿದೆ. ಇವರುಗಳು ನಿರ್ಮಾಣ ಆರಂಭಿಸಲು ಪರ್ವತಗಳನ್ನು, ಗುಡ್ಡಗಳನ್ನು ಕೊರೆಯುವ ಮೂಲಕ ಕಾವೇರಿಯ ಜಲಮೂಲಗಳನ್ನು ಸಂಪೂರ್ಣ ನಾಶ ಮಾಡಲಾಗುತ್ತದೆ. 2018ರಲ್ಲಿ, ಈಶಾನ್ಯ ವಾಯುವ್ಯ ಕೊಡಗಿನ ಸುಮಾರು 12ಗ್ರಾಮಗಳು ಭೀಕರ ಜಲಪ್ರಳಯ ಮತ್ತು ಭೂಪ್ರಳಯದ ಉತ್ಪಾತ ಅನುಭವಿಸಿದ್ದರೂ ದಕ್ಷಿಣ ಕೊಡಗಿನ ಗಡಿಗೆ ತಾಗಿಕೊಂಡಿರುವ ಕೇರಳದ ವಯನಾಡಿನಲ್ಲಿ 2024ರಲ್ಲೂ ಸಂಭವಿಸಿದ ಭೀಕರ ಜಲಪ್ರಳಯ ವಿಪತ್ತು ಇನ್ನು ಹಸಿರಾಗಿರುವಾಗಲೇ, ಸರ್ಕಾರದ ಬೊಕ್ಕಸಕ್ಕೆ ಹಣ ಮತ್ತು ಅಕ್ರಮ ಲಂಚಕೋಸ್ಕರ ಈ ಭೂಪರಿವರ್ತನೆಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ತಾಗಿಕೊಂಡಿರುವ ಸಿದ್ದಾಪುರದ ಆನೆ ಕಾರಿಡಾರ್ ನಲ್ಲ್ಲಿ ರೆಸಾರ್ಟ್ ಉದ್ಯಮಿಯೊಬ್ಬರು, ಮೆಗಾ ಟೌನ್ ಶಿಪ್ ಗಳು ಮತ್ತು ಲೇಔಟ್ ನಿರ್ಮಿಸಲು ಹೊಂಚು ಹಾಕುತ್ತ ಸಂಚು ರೂಪಿಸುತ್ತಿದ್ದಾರೆ. ಕೊಡಗಿನ ದಕ್ಷಿಣ ತುದಿಯ ಬ್ರಹ್ಮಗಿರಿಯಿಂದ ಉತ್ತರದ ತುದಿಯ ಪುಷ್ಪಗಿರಿಯವರೆಗೆ ಪಶ್ಚಿಮಘಟ್ಟದ ಪರ್ವತ ಶ್ರೇಣಿಯ ಬಿರುನಾಣಿಯಿಂದಿಡಿದು ಚೇಲವಾರ, ಚೆಯ್ಯಂಡಾಣೆ, ಮರಂದೊಡ, ಕಕ್ಕಬ್ಬೆ, ನಾಲಡಿ, ನೆಲಜಿ, ಪೇರೂರು, ಮದೆನಾಡು, ಗಾಳಿಬೀಡು, ಸೂರ್ಲಬ್ಬಿ, ಮಾದಾಪುರ, ಮಡಿಕೇರಿ, ಬೋಯಿಕೇರಿ, ಶುಂಠಿಕೊಪ್ಪ, ಮೋದೂರು, ಕಡಗದಾಳ, ಕತ್ತಲೆಕಾಡು ಇನ್ನಿತರ ಎಲ್ಲಾ ಕಡೆಗಳಲ್ಲೂ ಜಲಮೂಲಗಳಾದ ಕಾಲುವೆಗಳು, ಕೊಲ್ಲಿಗಳು, ತೊರೆಗಳು, ತೋಡುಗಳನ್ನು ಮುಚ್ಚಿ ಜಲಬುಗ್ಗೆಗಳನ್ನು ನಿರ್ನಾಮ ಮಾಡಿರುತ್ತಾರೆ. ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರುಗಳೇ ಅಲ್ಲಿಗೆ ಬರುವ ಅಥಿತಿಗಳಿಗೆ ಜಾಗ ಖರೀದಿಸಲು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ SARFAESI Act 2002ರಂತೆ ಹರಾಜು ಹಾಕಲ್ಪಡುವ ನತದೃಷ್ಟ ಕೊಡವರ ಭೂಮಿಗಳನ್ನು, ಹರಾಜು ಪಡೆದವನಿಂದ ದುಪ್ಪಟ್ಟು ಹಣ ನೀಡಿ ಖರೀದಿಸುವ ತಿರುಪತಿ ದೇವಸ್ಥಾನಂ ಸಮಿತಿಯ LONG TERM LOAN, (SOFT MONEY )ಬಡ್ಡಿರಹಿತ ಸಾಲದ ಫಲಾನುಭವಿಗಳು ತೆಲಂಗಾಣ ಮತ್ತು ಆಂಧ್ರದಿ0ದ ಜೇನು ನೊಣಗಳಂತೆ ಕೊಡಗಿಗೆ ಲಗ್ಗೆ ಇಡುತ್ತಿದ್ದು, ಇದು ಆತಂಕಕಾರಿ ವಿಚಾರವಾಗಿದೆ. ತಮಿಳುನಾಡಿ ಜನತೆ ಕಾವೇರಿ ಟ್ರಿಬ್ಯೂನಲ್ ತೀರ್ಪಿನ ಪ್ರಕಾರ ಅವರ ಪಾಲಿನ ಕಾವೇರಿ ನೀರಿನ ಹಕ್ಕು ಕೇಳಿದಾಗ ಮಾತ್ರ, ಕರ್ನಾಟಕದ ರಾಜಕೀಯ ಸಮುದಾಯಗಳಿಗೆ ಕಾವೇರಿ ನದಿ ನೀರು ಕೊಡಗಿನಿಂದ ಬರುತ್ತದೆ ಎನ್ನುವ ನೆನಪು ಬರುತ್ತದೆ. ಆದರೆ ಕೊಡಗಿನ ನೆಲ-ಜಲ, ಪರಿಸರ ಸಮೃದ್ಧಿ ಯಾಗಿದ್ದಾರೆ ಮಾತ್ರ ಕಾವೇರಿ ನದಿ ನೀರು ಉಕ್ಕಿ ಹರಿಯಲು ಸಾಧ್ಯ. ಆದ್ದರಿಂದ ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ಯಾವುದೇ ಭೂಪರಿವರ್ತನೆ ಮಾಡಕೂಡದೆನ್ನುವ ಕನಿಷ್ಠ ಸದ್ಬುದ್ಧಿಯು ಇಲ್ಲ. ಕೇವಲ ಮೊಸಳೆ ಕಣ್ಣೇರು ಸುರಿಸುತ್ತ, ಕೊಡವ ನೆಲವನ್ನು ಕಪ್ಪ ಒಪ್ಪಿಸುವ ಸಾಮಂತನ0ತೆ ಪರಿಗಣಿಸಿ ಹಗಲು ದರೋಡೆ ನಡೆಸಲಾಗುತ್ತಿದೆ ಎಂಬ ಆರೋಪಿಸಿದರು.
ಆದಿಮಸಂಜಾತ ಕೊಡವರು ಪ್ರತ್ಯೇಕ ಅನಿಮಿಸ್ಟಿಕ್ ನಂಬುಗೆಯ ಜನರೆಂದು ಸಂವಿಧಾನದ ಅಡಿಯಲ್ಲಿ ಗುರುತಿಸಿವ ಮೂಲಕ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸ್ವಯಂ ಶಾಸನದ ಜನ್ಮ ಭೂಮಿಯಾಗಿ ಭದ್ರತೆ ದೊರೆತಲ್ಲಿ ಮಾತ್ರ ಕೊಡವ ನೆಲ, ಜಲ, ಸಂಸೃತಿ, ಪರಂಪರೆ, ಪರಿಸರ, ಜೀವವೈವಿಧ್ಯ ರಕ್ಷಿಸಲು ಸಾಧ್ಯ ಎಂದು ಮಾನವ ಸರಪಳಿ ಸಂಧರ್ಭ ಪ್ರತಿಪಾದಿಸಲಾಯಿತು.ಈ ನಿಟ್ಟಿನಲ್ಲಿ, ಕೊಡವರ ಜನಾಂಗೀಯ ಜಗತ್ತು, ಕೊಡವಲ್ಯಾಂಡ್ ಮತ್ತು ಕೊಡವ ಅಸ್ಮಿತೆಯ ರಕ್ಷಕ ಮತ್ತು ಸಾಕ್ಷಿಪ್ರಜ್ಞೆಯಾಗಿರುವ ಸಿಎನ್‌ಸಿ, ಈ ಸಾರ್ವಜನಿಕ ಜಾಗೃತಿ ಜನಸಂಪರ್ಕ ಕಾರ್ಯಕ್ರಮವನ್ನು ರೂಪಿಸುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಅಂತಿಮಯಾಗಿ ಗುರು-ಕಾರೋಣ, ಸೂರ್ಯ-ಚಂದ್ರ, ಭೂದೇವಿ, ವನದೇವಿ, ಜಲದೇವಿ ಕಾವೇರಿ, ಭಾರತದ ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿ ಯ ಹೋರಾಟದಲ್ಲಿ ಸಮರ್ಪಿಸಿಕೊಳ್ಳುವುದಾಗಿ ಭಾಗಿಯಾದ ಕೊಡವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾಳಿಮಾಡ ಸವಿತಾ, ಅಣ್ಣಿರ ಸರಸು, ಕಾಳಿಮಾಡ ಪವಿತಾ, ಕಾಳಿಮಾಡ ಪೊನ್ನಮ್ಮ, ಕಾಳಿಮಾಡ ಶೆರಿ, ಬಲ್ಯಮೀದೇರಿರ ಸರಸ್ವತಿ, ಬೊಟ್ಟಂಗಡ ಗಿರೀಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಣ್ಣಿರ ಧನು ಪೂಣಚ್ಚ, ಅಣ್ಣಳಮಾಡ ಲಾಲ ಅಪ್ಪಣ್ಣ, ಕುಪ್ಪಣಮಾಡ ಜೀವನ್, ಕೀಕಣಮಡ ಮನು ಕಾರ್ಯಪ್ಪ, ನೆಲ್ಲಿರ ರಘು ನಂದ, ಕಳಕಂಡ ಚೇತು, ನೆಲ್ಲಿರ ಸೋಮಣ್ಣ, ಅಣ್ಣಳಮಾಡ ರಂಜನ್, ಕೀಕಣಮಡ ಉದಯ, ಅಣ್ಣಳಮಾಡ ಬಿದ್ದಪ್ಪ, ಅಣ್ಣಳಮಾಡ ಜಿಮ್ಮಿ, ಕರ್ತಮಾಡ ರಸ್ಸು, ಚೊಟ್ಟಂಗಡ ವಿಜು, ಕಳಕಂಡ ವಾಸು, ಅಣ್ಣಳಮಾಡ ಅಶೋಕ್, ಚಂಗಣಮಾಡ ನಾಣಿ, ಕಾಳಿಮಾಡ ಬೋಪಣ್ಣ, ಕುಪ್ಪಣಮಾಡ ಅರುಣ್, ಚೊಟ್ಟಂಗಡ ಅರುಣ್, ಚೊಟ್ಟಂಗಡ ಪೂವಯ್ಯ, ಕಾಳಿಮಾಡ ಸೋಮಯ್ಯ, ಕಳಕಂಡ ಪ್ರವೀ, ಬೊಟ್ಟಂಗಡ ಕಾರ್ಯಪ್ಪ, ಬೊಟ್ಟಂಗಡ ರಂಜನ್, ಆಲೆಮಾಡ ಗಗನ್, ಕಾಳಿಮಾಡ ಸಂತೋಷ್, ಕೀಕಣಮಡ ಹರೀಶ್, ಗುಡ್ಡಮಾಡ ಮಂಜು, ಕಳಕಂಡ ಪ್ರಧಾನ್, ಕರ್ತಮಾಡ ವಿಕಾಶ್, ಕುಪ್ಪಣಮಾಡ ಪ್ರೀತಮ್, ಕಾಳಿಮಾಡ ಪವನ್, ಬೊಟ್ಟಂಗಡ ರಂಜಿ, ಬೊಟ್ಟಂಗಡ ನಂಜಪ್ಪ, ಪಾಲೇಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ, ಬೊಟ್ಟಂಗಡ ವಿಜಯ, ಕಳಕಂಡ ಬೊಳ್ಳಿಯಪ್ಪ, ಕರ್ತಮಾಡ ನಂದ, ಕರ್ತಮಾಡ ಸುಗುಣ, ಅಣ್ಣಿರ ಪ್ರಕಾಶ್, ಅಮ್ಮತಿರ ಗಣೇಶ್, ಮೀದೇರಿರ ಕಾವೇರಪ್ಪ, ಅಣ್ಣಿರ ಸದಾ, ಕುಪ್ಪಣಮಾಡ ಸಂತೋಷ್, ಚೊಟ್ಟಂಗಡ ಸೋಮಣ್ಣ, ಬೊಳ್ಳೆರ ಕುಮಾರ್, ಗುಡ್ಡಮಾಡ ಸಚಿನ್, ಚೊಟ್ಟಂಗಡ ಬೋಸು, ನೆಲ್ಲಿರ ರಂಜಿ, ಅಣ್ಣಳಮಾಡ ಚಿಪ್ಪ, ಕಾಳಿಮಾಡ ಬನ್ಸಿ, ಬೊಳ್ಳೆರ ಪೂಣಚ್ಚ, ಚಂಗಣಮಾಡ ರೋಷನ್, ಅಣ್ಣಳಮಾಡ ಅರಸು, ಕರ್ತಮಾಡ ನೀಲಕಂಠ, ಕರ್ತಮಾಡ ಬಾಲಕೃಷ್ಣ, ಕೀಕಣಮಡ ಶಂಭು, ಕಳಕಂಡ ಮೋಟಯ್ಯ, ಮೀದೇರಿರ ಸೋಮಯ್ಯ, ಕಳಕಂಡ ನಾಚಪ್ಪ, ಕರ್ತಮಾಡ ಗಪ್ಪು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಲು ಒತ್ತಾಯ : ಮಡಿಕೇರಿಯಲ್ಲಿ ಪ್ರತಿಭಟನೆ*

ಆಗಷ್ಟ್ 17, 2026

*ಪತ್ರಕರ್ತ ಶ್ರೀಧರ್ ಹೂವಲ್ಲಿ ರಚಿಸಿರುವ ಕೊಡವ ಮಕ್ಕಡ ಕೂಟದ 126ನೇ ಪುಸ್ತಕ “ಕಥಾಂಜಲಿ” ಲೋಕಾರ್ಪಣೆ : ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಯಾಗಬೇಕು : ಅಡಗೂರು ಹೆಚ್.ವಿಶ್ವನಾಥ್ ಅಭಿಮತ*

ಆಗಷ್ಟ್ 16, 2026

*ಪುಣ್ಯಕ್ಷೇತ್ರ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಭೇಟಿ, ವಿಶೇಷ ಪೂಜೆ*

ಆಗಷ್ಟ್ 16, 2026

*ಮರೆನಾಡಿನ ಬಿರುನಾಣಿಯಲ್ಲಿ ಸಿಎನ್‌ಸಿ ಮಾನವ ಸರಪಳಿ : ಕೊಡವ ಜನಸಂಪರ್ಕ ಅಭಿಯಾನ ಆರಂಭ*

ಆಗಷ್ಟ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಆ.17 : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ನಮ್ಮ ಸಂವಿಧಾನದ ವಿಧಿ 371, 5 ಮತ್ತು 6ರ…

*ಪತ್ರಕರ್ತ ಶ್ರೀಧರ್ ಹೂವಲ್ಲಿ ರಚಿಸಿರುವ ಕೊಡವ ಮಕ್ಕಡ ಕೂಟದ 126ನೇ ಪುಸ್ತಕ “ಕಥಾಂಜಲಿ” ಲೋಕಾರ್ಪಣೆ : ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಯಾಗಬೇಕು : ಅಡಗೂರು ಹೆಚ್.ವಿಶ್ವನಾಥ್ ಅಭಿಮತ*

ಆಗಷ್ಟ್ 16, 2026

*ಪುಣ್ಯಕ್ಷೇತ್ರ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಭೇಟಿ, ವಿಶೇಷ ಪೂಜೆ*

ಆಗಷ್ಟ್ 16, 2026

*ಭಾಗಮಂಡಲ : ಕಾವೇರಿ ವಿಚಾರದಲ್ಲಿ ರೈತರ ಹಿತ ಕಾಪಾಡುವುದು ನನ್ನ ಕರ್ತವ್ಯ : ಸಿಎಂ ಡಿ.ಕೆ.ಶಿವಕುಮಾರ್*

ಆಗಷ್ಟ್ 16, 2026

*ಮಡಿಕೇರಿ : ಮೊಹಮ್ಮದ್ ನಲಪ್ಪಾಡ್ ವಿವಾಹದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್*

ಆಗಷ್ಟ್ 16, 2026

*ಮಡಿಕೇರಿಯಲ್ಲಿ ಎಸ್.ಜಾನಕಿ ಗೀತ ನಮನ* 

ಆಗಷ್ಟ್ 16, 2026

*ಕೊಡಗು ಸೇರಿದಂತೆ 6 ಜಿಲ್ಲೆಗಳನ್ನು “ಲಾಯಲ್ ಪ್ರವಾಸೋದ್ಯಮ ಕೇಂದ್ರ”ವನ್ನಾಗಿ ಪರಿವರ್ತಿಸಿ*

ಆಗಷ್ಟ್ 16, 2026

*ಕೊಡಗು ಸೈನಿಕ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ*

ಆಗಷ್ಟ್ 15, 2026

*ಮಡಿಕೇರಿ ಕೊಡವ ಸಮಾಜದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ*

ಆಗಷ್ಟ್ 15, 2026

*ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ*

ಆಗಷ್ಟ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.