
ಮಡಿಕೇರಿ ಆ.18 NEWS DESK : ಕಾವೇರಿ ಕ್ಷೇತ್ರ ಭಾಗಮಂಡಲದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅªರಿಗೆ ಸೇರಿದ ಗದ್ದೆಯಲ್ಲಿ ಆ.22 ರಂದು 34ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ನಡೆಯಲಿದೆಯೆಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಕೆ.ಕೆ.ಸುಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟದ ಮಾಹಿತಿಯನ್ನಿತ್ತ ಅವರು, ಭಾಗಮಂಡಲದಲ್ಲಿ ದ್ವಿತೀಯ ಬಾರಿಗೆ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾ ಕೂಟವನ್ನು ಅಯ್ಯಂಗೇರಿಯ ಶ್ರೀಕೃಷ್ಣ ಯುವಕ ಸಂಘದ ಸಹಕಾರದೊಂದಿಗೆ ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ, ಜಿಲ್ಲಾಡಳಿತ, ಕೊಡಗು ಜಿಲ್ಲಾ ಯುವ ಸಬಲೀಕರಣ ಮತ್ತು ಮತ್ತು ಕ್ರೀಡಾ ಇಲಾಖೆ, ಮಡಿಕೇರಿ, ವಿರಾಜಪೇಟೆ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸುತ್ತಿರುವುದಾಗಿ ಮಾಹಿತಿಯನ್ನಿತ್ತರು. ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದ ಹಗ್ಗಜಗ್ಗಾಟ, ಸಾರ್ವಜನಿಕ ಪುರುಷರ ವಿಭಾಗದ ವಾಲಿಬಾಲ್, ಸಾರ್ವಜನಿಕ ಮಹಿಳೆಯರ ವಿಭಾಗದ ಥ್ರೋಬಾಲ್ ಹಾಗೂ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆಗಳು ನಡೆಯಲಿದೆ. ಬೆ.11 ಗಂಟೆಗೆ ಓಟದ ಸ್ಪರ್ಧೆಗಳು ಆರಂಭಗೊಳ್ಳಲಿದ್ದು, ಇದಕ್ಕೂ ಮುನ್ನ ಬೆಳಗ್ಗೆ 9 ರಿಂದ ಹಗ್ಗಜಗ್ಗಾಟ ಸೇರಿದಂತೆ ಇತರ ಸ್ಪರ್ಧೆಗಳು ನಡೆಯಲಿರುವುದಾಗಿ ತಿಳಿಸಿದರು. ಹಗ್ಗ-ಜಗ್ಗಾಟದ ಸಾರ್ವಜನಿಕ ಪುರುಷರ ವಿಭಾಗದ ತಂಡಗಳಿಗೆ ಪ್ರವೇಶ ಶುಲ್ಕ 1,500 ರೂ., ಸಾರ್ವಜನಿಕ ಮಹಿಳೆಯರ ವಿಭಾಗದ ಹಗ್ಗ-ಜಗ್ಗಾಟ ತಂಡಗಳಿಗೆ ಪ್ರವೇಶ ಶುಲ್ಕ 1ಸಾವಿರ. ವಾಲಿಬಾಲ್ ಸಾರ್ವಜನಿಕ ಪುರುಷರ ವಿಭಾಗದ ತಂಡಗಳಿಗೆ ಪ್ರವೇಶ ಶುಲ್ಕ 1ಸಾವಿರ, ಥ್ರೋಬಾಲ್ ಸಾರ್ವಜನಿಕ ಮಹಿಳೆಯರ ವಿಭಾಗದ ತಂಡಗಳಿಗೆ ಪ್ರವೇಶ ಶುಲ್ಕ 1ಸಾವಿರ ಆಗಿರುತ್ತದೆ. ತಂಡಗಳು ಆ.21ರ ಸಂಜೆ 5 ಗಂಟೆಯ ಒಳಗಾಗಿ ತಂಡದ ಹೆಸರು ನೋಂದಾವಣೆ ಮಾಡಿಕೊಳ್ಳುವಂತೆ ಕೋರಿದರು.ವಾಲಿಬಾಲ್, ಥ್ರೋಬಾಲ್ ನೋಂದಣಿ ಮಾಡುವವರು ಅಭಿಷೇಕ್ 6361621643/ 7337779833, ಹಗ್ಗಜಗ್ಗಾಟ ಬಿದ್ದಿಯಂಡ ಸುಭಾμï 9845053501/ 8431816593 ಸಂಪರ್ಕಿಸಬಹುದೆಂದರು. :: ಉದ್ಘಾಟನೆ :: ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ಬಾಳಾಡಿ ದಿಲೀಪ್ ಕುಮಾರ್ ಮಾತನಾಡಿ, ಕೆಸರು ಗದ್ದೆ ಕ್ರೀಡಾ ಕೂಟಕ್ಕೆ ಆ.22ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ನರೇಂದ್ರ ಸ್ವಾಮಿ ಅವರು ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂಎಲ್‍ಸಿ ಎಂ.ಪಿ.ಸುಜಾಕುಶಾಲಪ್ಪ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 6 ಗಂಟೆಗೆ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಕೃಷ್ಣ ಯುವಕ ಸಂಘದ ಗೌರವಾಧ್ಯಕ್ಷ ಜೀವನ್ ಕುಮಾರ್,ಕಾರ್ಯದರ್ಶಿ ಬಿಸಿ.ಅಭಿಜಿತ್, ಸದಸ್ಯರುಗಳಾದ ಬಿದ್ದಿಯಂಡ ಸುಭಾಷ್ ಮತ್ತು ಮಂಜು ಉಪಸ್ಥಿತರಿದ್ದರು.









