Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸ್ನೇಹದ ಕಡಲು ಬಳಗದಿಂದ ಸಂಗೀತ ಮಾಂತ್ರಿಕ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರಿಗೆ 81ನೇ ಹುಟ್ಟುಹಬ್ಬದ ಸಂಭ್ರಮ*
  • *ಎಐ–ಡಿಜಿಟಲ್ ಫೊರೆನ್ಸಿಕ್ಸ್ ಪ್ರವರ್ತಕ ಪ್ರೊ. ಎಸ್. ಎಸ್. ಅಯ್ಯಂಗಾರ್‌ಗೆ ಪ್ರತಿಷ್ಠಿತ FIU ಪ್ರಶಸ್ತಿ*
  • *ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ, ಮರಳು–ಮರದ ದಿಮ್ಮಿಗಳ ಸಾಗಾಣಿಕೆ ನಿಷೇಧ : ಆ.31ರವರೆಗೆ ವಿಸ್ತರಣೆ*
  • *ಪರಿಸರ ಸೂಕ್ಷ್ಮವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರಿಂದ ಪ್ರತಿಭಟನೆ*
  • *ವಿರಾಜಪೇಟೆ ಎಲ್ ಎಸ್ ಎ ಕೇರ್ ಸೌಹಾರ್ದ ಕಾರ್ಯಕ್ರಮ*
  • *ಕೊಡಗಿನಲ್ಲಿ ಮೋಡಬಿತ್ತನೆ ಬೇಡ ಬಿಜೆಪಿ ಕೃಷಿಮೋರ್ಚಾ ಒತ್ತಾಯ*
  • *ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ರೋಟರಿ ನಮನ*
  • *ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*
  • *ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *
  • *ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಎಐ–ಡಿಜಿಟಲ್ ಫೊರೆನ್ಸಿಕ್ಸ್ ಪ್ರವರ್ತಕ ಪ್ರೊ. ಎಸ್. ಎಸ್. ಅಯ್ಯಂಗಾರ್‌ಗೆ ಪ್ರತಿಷ್ಠಿತ FIU ಪ್ರಶಸ್ತಿ*
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ಭಾರತ

*ಎಐ–ಡಿಜಿಟಲ್ ಫೊರೆನ್ಸಿಕ್ಸ್ ಪ್ರವರ್ತಕ ಪ್ರೊ. ಎಸ್. ಎಸ್. ಅಯ್ಯಂಗಾರ್‌ಗೆ ಪ್ರತಿಷ್ಠಿತ FIU ಪ್ರಶಸ್ತಿ*

ಆಗಷ್ಟ್ 25, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಿಯಾಮಿ (ಅಮೆರಿಕ)/ಬೆಂಗಳೂರು NEWS DESK, ಆ.25  : ಕೃತಕ ಬುದ್ಧಿಮತ್ತೆ, ಡಿಜಿಟಲ್ ಫೊರೆನ್ಸಿಕ್ಸ್, ರೋಬೋಟಿಕ್ಸ್ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಪ್ರವರ್ತಕ ಸಂಶೋಧಕರಾದ ಪ್ರೊ. ಎಸ್. ಎಸ್. ಅಯ್ಯಂಗಾರ್ ಅವರನ್ನು ಫ್ಲೋರಿಡಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿಯ (FIU) ‘President’s Council Outstanding Faculty Award – 2026’ಗೆ ಆಯ್ಕೆ ಮಾಡಲಾಗಿದೆ. ಸಂಶೋಧನೆ, ಬೋಧನೆ, ಮಾರ್ಗದರ್ಶನ ಹಾಗೂ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರೊ. ಅಯ್ಯಂಗಾರ್ ಅವರ ಸಾಧನೆಗಳು FIUನ ಶ್ರೇಷ್ಠತೆ, ನಾವೀನ್ಯತೆ ಮತ್ತು ಪ್ರಭಾವವನ್ನು ಪ್ರತಿನಿಧಿಸುತ್ತವೆ ಎಂದು ವಿಶ್ವವಿದ್ಯಾಲಯದ President’s Council ತಿಳಿಸಿದೆ. ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಪರಿವರ್ತನೆಗೆ ಕಾರಣವಾದ ಅವರ ಕಾರ್ಯವನ್ನೂ ಪ್ರಶಸ್ತಿಯ ಆಯ್ಕೆಯಲ್ಲಿ ಗುರುತಿಸಲಾಗಿದೆ. FIU ನ Knight Foundation School of Computing and Information Sciences ನಲ್ಲಿ ನಿರ್ದೇಶಕರು ಮತ್ತು ಪ್ರಾಧ್ಯಾಪಕರಾಗಿರುವ ಪ್ರೊ. ಅಯ್ಯಂಗಾರ್, ಹಲವು ದಶಕಗಳಿಂದ ಕಂಪ್ಯೂಟರ್ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಫೊರೆನ್ಸಿಕ್ಸ್, ಸೆನ್ಸರ್ ನೆಟ್‌ವರ್ಕ್‌, ಸೆನ್ಸರ್ ಫ್ಯೂಷನ್, ರೋಬೋಟಿಕ್ಸ್ ಮತ್ತು ಸೈಬರ್ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಇತ್ತೀಚಿನ ಅವಧಿಯಲ್ಲಿ ಪ್ರೊ. ಅಯ್ಯಂಗಾರ್ ಅವರಿಗೆ ದೊರೆತ ಎರಡನೇ ಪ್ರಮುಖ ಗೌರವ ಇದಾಗಿದೆ. 2026ರ Florida Inventors Hall of Fame ಪ್ರಶಸ್ತಿಗೂ ಅವರು ಆಯ್ಕೆಯಾಗಿದ್ದಾರೆ. ಆವಿಷ್ಕಾರ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಸಾಧಕರನ್ನು ಗುರುತಿಸುವ ಈ ಗೌರವಕ್ಕೆ ಅಯ್ಯಂಗಾರ್ ಆಯ್ಕೆಯಾಗಿರುವುದು ಅವರ ಸುದೀರ್ಘ ವೈಜ್ಞಾನಿಕ ಸಾಧನೆಗೆ ಸಂದ ಮತ್ತೊಂದು ಮನ್ನಣೆಯಾಗಿದೆ. ಅವರ ಸಾಧನೆಯ ವ್ಯಾಪ್ತಿ ಎಷ್ಟಿದೆ ಎಂಬುದಕ್ಕೆ ಅವರ ಸಂಶೋಧನಾ ಬದುಕೇ ಸಾಕ್ಷಿ. 600ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, 30ಕ್ಕೂ ಹೆಚ್ಚು ಪುಸ್ತಕಗಳು, 65ಕ್ಕೂ ಹೆಚ್ಚು ಪಿಎಚ್‌.ಡಿ. ಸಂಶೋಧಕರಿಗೆ ಮಾರ್ಗದರ್ಶನ, AI, ಸೆನ್ಸರ್ ಫ್ಯೂಷನ್, ರೋಬೋಟಿಕ್ಸ್, ಸೈಬರ್ ಸೆಕ್ಯುರಿಟಿ ಮತ್ತು ಡಿಜಿಟಲ್ ಫೊರೆನ್ಸಿಕ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರ ಕೊಡುಗೆ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಕನ್ನಡದಲ್ಲಿ ಎಐ ಜ್ಞಾನ ವಿಸ್ತರಣೆಗೆ ಸಹಯೋಗ ಪ್ರೊ. ಅಯ್ಯಂಗಾರ್ ಅವರ ಸಾಧನೆ ಕುರಿತು ಪ್ರತಿಕ್ರಿಯಿಸಿದ ಪರ್ತಕರ್ತ ಮತ್ತು ಎಐ ಕುರಿತ ಬರಹಗಾರ ಡಾ. ರಮೇಶ್ ನಿಂಬೆಮರದಳ್ಳಿ ಅವರು, ‘ಕನ್ನಡದಲ್ಲಿ ಎಐ ಜ್ಞಾನವನ್ನು ವಿಸ್ತರಿಸುವ ಪ್ರಯತ್ನದಲ್ಲಿಯೂ ಪ್ರೊ. ಅಯ್ಯಂಗಾರ್ ಕೈಜೋಡಿಸಿರುವುದು ವಿಶೇಷವಾಗಿದೆ,’ ಎಂದಿದ್ದಾರೆ. “ಪ್ರೊ. ಎಸ್. ಎಸ್. ಅಯ್ಯಂಗಾರ್ ಅವರಂತಹ ಜಾಗತಿಕ ವಿಜ್ಞಾನಿ ಕನ್ನಡದಲ್ಲಿ ನಾನು ಬರೆದಿರುವ ಎಐ ಕೃತಿಯಲ್ಲಿ ನನ್ನೊಂದಿಗೆ ಸಹಲೇಖಕರಾಗಿರುವುದು ನನಗೆ ದೊರೆತ ಅಪರೂಪದ ಗೌರವ. ಎಐ ಮತ್ತು ಡಿಜಿಟಲ್ ಫೊರೆನ್ಸಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಿದ ವಿಜ್ಞಾನಿಯೊಬ್ಬರು ಕನ್ನಡದಲ್ಲಿ ಎಐ ಜ್ಞಾನವನ್ನು ಕಟ್ಟಿಕೊಡುವ ಪ್ರಯತ್ನದ ಭಾಗವಾಗಿರುವುದು ಇಡೀ ಕನ್ನಡಿಗರು ಹೆಮ್ಮೆಪಡಬಹುದಾದ ಸಂಗತಿ. ಅವರ Iyengar Educational and Medical Foundation ಜೊತೆಗೂಡಿ ಕರ್ನಾಟಕದಲ್ಲಿ, ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳು, ಗ್ರಾಮೀಣ ವಿದ್ಯಾರ್ಥಿಗಳು, ಯುವಜನರು ಮತ್ತು ಸಾಮಾನ್ಯ ಜನರಲ್ಲಿ ಎಐ ಸಾಕ್ಷರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಯೋಗ ನಡೆಸುತ್ತಿದ್ದೇವೆ. ಎಐ ಜ್ಞಾನವನ್ನು ಕೆಲವೇ ತಂತ್ರಜ್ಞಾನ ಪರಿಣತರಿಗೆ ಸೀಮಿತಗೊಳಿಸದೆ ಸಾಮಾನ್ಯ ಕನ್ನಡಿಗರಿಗೂ ತಲುಪಿಸುವುದು ನಮ್ಮ ಉದ್ದೇಶ,” ಎಂದು ಅವರು ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸ್ನೇಹದ ಕಡಲು ಬಳಗದಿಂದ ಸಂಗೀತ ಮಾಂತ್ರಿಕ ಚೆಕ್ಕೇರ ತ್ಯಾಗರಾಜ ಅಪ್ಪಯ್ಯ ಅವರಿಗೆ 81ನೇ ಹುಟ್ಟುಹಬ್ಬದ ಸಂಭ್ರಮ*

ಆಗಷ್ಟ್ 25, 2026

*ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ, ಮರಳು–ಮರದ ದಿಮ್ಮಿಗಳ ಸಾಗಾಣಿಕೆ ನಿಷೇಧ : ಆ.31ರವರೆಗೆ ವಿಸ್ತರಣೆ*

ಆಗಷ್ಟ್ 25, 2026

*ಪರಿಸರ ಸೂಕ್ಷ್ಮವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರಿಂದ ಪ್ರತಿಭಟನೆ*

ಆಗಷ್ಟ್ 25, 2026

*ಎಐ–ಡಿಜಿಟಲ್ ಫೊರೆನ್ಸಿಕ್ಸ್ ಪ್ರವರ್ತಕ ಪ್ರೊ. ಎಸ್. ಎಸ್. ಅಯ್ಯಂಗಾರ್‌ಗೆ ಪ್ರತಿಷ್ಠಿತ FIU ಪ್ರಶಸ್ತಿ*

ಆಗಷ್ಟ್ 25, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ಭಾರತ

ಮಿಯಾಮಿ (ಅಮೆರಿಕ)/ಬೆಂಗಳೂರು NEWS DESK, ಆ.25  : ಕೃತಕ ಬುದ್ಧಿಮತ್ತೆ, ಡಿಜಿಟಲ್ ಫೊರೆನ್ಸಿಕ್ಸ್, ರೋಬೋಟಿಕ್ಸ್ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ…

*ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ, ಮರಳು–ಮರದ ದಿಮ್ಮಿಗಳ ಸಾಗಾಣಿಕೆ ನಿಷೇಧ : ಆ.31ರವರೆಗೆ ವಿಸ್ತರಣೆ*

ಆಗಷ್ಟ್ 25, 2026

*ಪರಿಸರ ಸೂಕ್ಷ್ಮವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಡಲು ಒತ್ತಾಯ : ಗ್ರಾಮಸ್ಥರಿಂದ ಪ್ರತಿಭಟನೆ*

ಆಗಷ್ಟ್ 25, 2026

*ವಿರಾಜಪೇಟೆ ಎಲ್ ಎಸ್ ಎ ಕೇರ್ ಸೌಹಾರ್ದ ಕಾರ್ಯಕ್ರಮ*

ಆಗಷ್ಟ್ 25, 2026

*ಕೊಡಗಿನಲ್ಲಿ ಮೋಡಬಿತ್ತನೆ ಬೇಡ ಬಿಜೆಪಿ ಕೃಷಿಮೋರ್ಚಾ ಒತ್ತಾಯ*

ಆಗಷ್ಟ್ 24, 2026

*ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ರೋಟರಿ ನಮನ*

ಆಗಷ್ಟ್ 24, 2026

*ಮಡಿಕೇರಿ ಬ್ರಹ್ಮಾಕುಮಾರಿ ಲೈಟ್ ಹೌಸ್ ನಲ್ಲಿ ರಕ್ತದಾನ ಶಿಬಿರ*

ಆಗಷ್ಟ್ 24, 2026

*ಎಸ್‍ಐಆರ್ ಪ್ರಕ್ರಿಯೆ, ಸೆ.23 ರ ವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಕರಡು ಮತದಾರರ ಪಟ್ಟಿ : ಜಿಲ್ಲೆಯಲ್ಲಿ 4,05,803 ಮಂದಿ ಮತದಾರರು : ಡಿಸಿ ಮಾಹಿತಿ *

ಆಗಷ್ಟ್ 24, 2026

*ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗೆ ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿ*

ಆಗಷ್ಟ್ 24, 2026

*ಪೂಂಪುಹಾರ್ ವರೆಗೆ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ : ಅ.26ರಿಂದ ತಲಕಾವೇರಿಯಿಂದ ಆರಂಭ*

ಆಗಷ್ಟ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.