ಮಡಿಕೇರಿ NEWS DESK ಅ.8 : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮಡಿಕೇರಿಯ ನ್ಯಾಯಾಲಯದ ಆವರಣದಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕರಿಗೆ ಪುನಶ್ಚೇತನ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತಿ ಕಾರ್ಯಕ್ರಮದಲ್ಲಿ ‘ಮುಖ್ಯ ಅಪರಾಧ ದೂರು ಪ್ರಕ್ರಿಯೆಗಳು’ ವಿಷಯದ ಕುರಿತು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಉಮೇಶ್ ಕುಮಾರ್ ಎಂ.ಎನ್. ಅವರು ತರಬೇತಿ ನೀಡಿದರು. ಅಪರಾಧ ದೂರುಗಳನ್ನು ಸ್ವೀಕರಿಸುವ ವಿಧಾನ, ದೂರು ದಾಖಲಿಸುವ ಪ್ರಕ್ರಿಯೆ ಹಾಗೂ ಸಂಬ0ಧಿಸಿದ ಕಾನೂನು ಕ್ರಮಗಳ ಕುರಿತು ವಿವರಿಸಿದರು. ಕಾನೂನು ಸ್ವಯಂಸೇವಕರು ಸಾರ್ವಜನಿಕರಿಗೆ ಕಾನೂನು ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ ಅಪರಾಧ ದೂರು ಪ್ರಕ್ರಿಯೆಗಳ ಬಗ್ಗೆ ಅಗತ್ಯ ಅರಿವು ಹೊಂದಿರುವುದು ಮುಖ್ಯವಾಗಿದೆ ಎಂದು ತಿಳಿಸಿದರು.

















