Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ

ಅಕ್ಟೋಬರ್ 8, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, NEWS DESK ಅ.8: ಮಡಿಕೇರಿ ರಾಜಾಸೀಟು ಬಳಿಯ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಟ್ರಸ್ಟ್ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಶ್ರೀ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅ.11ರಿಂದ 21ರವರೆಗೆ ಆಯೋಜಿಸಲಾಗಿದೆ.

ಅ.11ರಂದು ಮಧ್ಯಾಹ್ನ 1.30ಕ್ಕೆ ದೇವಾಲಯದಿಂದ ಕರಗ ಹೊರಟು ಪಂಪಿನಕೆರೆಯನ್ನು ತಲುಪಲಿದೆ. ಸಂಜೆ 6.30ಕ್ಕೆ ಅಲಂಕೃತ ಕರಗದೊಂದಿಗೆ ಬನ್ನಿಮಂಟಪ, ಶ್ರೀ ಕೋದಂಡರಾಮ ದೇವಸ್ಥಾನ, ಶ್ರೀ ಚೌಡೇಶ್ವರಿ ದೇವಸ್ಥಾನ, ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಹಾಗೂ ಪೇಟೆ ಶ್ರೀ ರಾಮಮಂದಿರ ದೇವಸ್ಥಾನಗಳಿಗೆ ತೆರಳಿ ಬಳಿಕ ದೇವಾಲಯಕ್ಕೆ ಹಿಂದಿರುಗಲಿದೆ.

ಅ.12ರಂದು ಚಿಕ್ಕಪೇಟೆ, ಮೈಸೂರು ರಸ್ತೆ, ಶಾಂತಿನಿಕೇತನ, ಜಯನಗರ ಬಡಾವಣೆ, ಅಶೋಕಪುರ ದೇವಸ್ಥಾನ, ಕೆ.ಇ.ಬಿ. ಕ್ವಾಟರ್ಸ್, ಸುದರ್ಶನ ಬಡಾವಣೆ, ಜಲಾಶ್ರಯ ಬಡಾವಣೆ, ಗುಂಡೂರಾವ್ ಬಡಾವಣೆ, ಬ್ರಾಹ್ಮಣರಬೀದಿ, ಅಶ್ವತಕಟ್ಟೆ, ಪುಟಾಣಿನಗರ ಹಾಗೂ ದೇಚೂರು ಭಾಗಗಳಲ್ಲಿ ಕರಗ ನಗರ ಪ್ರದಕ್ಷಿಣೆ ನಡೆಸಲಿದೆ.

ಅ.13ರಂದು ಮುನೀಶ್ವರ ದೇವಾಲಯ ರಸ್ತೆ, ಶ್ರೀ ಓಂಕಾರೇಶ್ವರ ದೇವಸ್ಥಾನ ರಸ್ತೆ, ಸ್ಕೂಲ್ ರಸ್ತೆ, ರಾಘವೇಂದ್ರ ದೇವಸ್ಥಾನ, ಚೈನ್‌ಗೇಟ್, ದಾಸವಾಳ ರಸ್ತೆ, ಪೌರಕಾರ್ಮಿಕರ ವಸತಿ ಗೃಹ ಹಾಗೂ ರಾಣಿಪೇಟೆ ಭಾಗಗಳಲ್ಲಿ ಕರಗ ಸಂಚರಿಸಲಿದೆ.

ಅ.14ರಂದು ರೇಸ್‌ಕೋರ್ಸ್ ರಸ್ತೆ, ಸ್ಟುವರ್ಟ್ ಹಿಲ್, ಹಳೆ ಡೈರಿ ಫಾರ್ಮ್ ರಸ್ತೆ, ಮೈತ್ರಿ ಜಂಕ್ಷನ್, ಕಾನ್ವೆಂಟ್ ಸ್ಕೂಲ್ ರಸ್ತೆ, ಪ್ರಕೃತಿ ಬಡಾವಣೆ ಹಾಗೂ ವಿನಾಯಕ ರೈಸ್ ಮಿಲ್ ರಸ್ತೆ ಮೂಲಕ ಕರಗ ನಗರ ಪ್ರದಕ್ಷಿಣೆ ನಡೆಯಲಿದೆ.

ಅ.16ರಂದು ಹೊಸಬಡಾವಣೆ, ಹಳೆ ಇಂಡೇನ್ ಗ್ಯಾಸ್ ಕಚೇರಿ ರಸ್ತೆ, ಕೊಹಿನೂರು ರಸ್ತೆ, ಖಾದಿ ಭಂಡಾರ, ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನ, ಪೆನ್ನನ್‌ಲೇನ್, ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನ, ನಗರಸಭೆ ಕಚೇರಿ ಹಿಂಭಾಗ, ಗೌಳಿಬೀದಿ ಹಾಗೂ ಕಂಚಿಕಾಮಾಕ್ಷಿ ದೇವಸ್ಥಾನ ಭಾಗಗಳಲ್ಲಿ ಕರಗ ಸಂಚರಿಸಲಿದೆ.

ಅ.20ರಂದು ಆಯುಧ ಪೂಜೆ

ಅ.20ರಂದು ಆಯುಧ ಪೂಜೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ವಾಹನ ಪೂಜೆ ನೆರವೇರಲಿದ್ದು, ಭಕ್ತಾದಿಗಳು ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಟ್ರಸ್ಟ್ ಮನವಿ ಮಾಡಿದೆ.

ಅ.21ರಂದು ವಿಜಯದಶಮಿ ವಿಶೇಷ ಪೂಜೆ

ವಿಜಯದಶಮಿಯಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮದೊಂದಿಗೆ ದೇವಿಗೆ ಮಹಾಪೂಜೆ, ವಿಶೇಷ ಅಲಂಕಾರ, ನೈವೇದ್ಯ, ಹಣ್ಣುಕಾಯಿ, ಮಂಗಳಾರತಿ ಹಾಗೂ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಅದೇ ದಿನ ರಾತ್ರಿ 11 ಗಂಟೆಗೆ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಲ್ಲಿ ಹಿರಿಯಕ್ಕ ಎಂದೇ ಪ್ರಸಿದ್ಧವಾಗಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಿಯ ಕರಗವು ವಿಶೇಷ ಅಲಂಕಾರದೊಂದಿಗೆ ದೇವಾಲಯದಿಂದ ಹೊರಡಲಿದೆ. ಕರಗವು ಇತರೆ ಮೂವರು ಶಕ್ತಿ ದೇವತೆಗಳ ದೇವಾಲಯಗಳಿಗೆ ತೆರಳಿ, ದಶಮಂಟಪಗಳಿಂದ ಪೂಜೆ ಸ್ವೀಕರಿಸಲಿದೆ. ಬಳಿಕ ಬೆಳಗಿನ ಬ್ರಾಹ್ಮ ಮುಹೂರ್ತದಲ್ಲಿ ಬನ್ನಿಮಂಟಪಕ್ಕೆ ತಲುಪಿ ಬನ್ನಿ ಕಡಿದು ದೇವಾಲಯಕ್ಕೆ ಹಿಂದಿರುಗಲಿದೆ.

ರಾತ್ರಿ 11 ಗಂಟೆಯ ನಂತರ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದಸರಾ ಮಂಟಪದ ಮೆರವಣಿಗೆಯೂ ನಡೆಯಲಿದೆ.

ಕರಗೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಟ್ರಸ್ಟ್ ಮನವಿ ಮಾಡಿದೆ.

Follow us Follow us
Share. WhatsApp Facebook Twitter Email Telegram Copy Link

Related Posts

ಜಿಲ್ಲಾ ಮಟ್ಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಸಂತ ಅನ್ನಮ್ಮ ಶಾಲೆಯ ಆರ್ಯನ್ ಕುನ್ವರ್‌ಗೆ ಪ್ರಥಮ ಸ್ಥಾನ

ಅಕ್ಟೋಬರ್ 29, 2026

ಕೊಡಗು ಜಿಲ್ಲೆಗೆ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅಧಿಕಾರ ಸ್ವೀಕಾರ

ಅಕ್ಟೋಬರ್ 29, 2026

ಭರತನಾಟ್ಯ ಹಿರಿಯರ ವಿಭಾಗದ ಪರೀಕ್ಷೆಯಲ್ಲಿ ತುಶಾಲಿಗೆ ಶೇ.90 ಅಂಕ

ಅಕ್ಟೋಬರ್ 29, 2026

ಕೊಡಗು ಜಿಲ್ಲೆಗೆ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅಧಿಕಾರ ಸ್ವೀಕಾರ

ಅಕ್ಟೋಬರ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.29: ಕೊಡಗು ಜಿಲ್ಲೆಯ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.…

ಭರತನಾಟ್ಯ ಹಿರಿಯರ ವಿಭಾಗದ ಪರೀಕ್ಷೆಯಲ್ಲಿ ತುಶಾಲಿಗೆ ಶೇ.90 ಅಂಕ

ಅಕ್ಟೋಬರ್ 29, 2026

ನ. 22ರಂದು ಮಡಿಕೇರಿಯಲ್ಲಿ ‘ಕನ್ನಡ ಹಬ್ಬ’ ಸಾಂಸ್ಕೃತಿಕ ಕಾರ್ಯಕ್ರಮ; ಮಕ್ಕಳು, ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳ ಆಯೋಜನೆ

ಅಕ್ಟೋಬರ್ 29, 2026

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕಾಂಗ್ರೆಸ್‌ಗೆ ಅಪನಂಬಿಕೆ: ಸಂಸದ ಬ್ರಿಜೇಶ್ ಚೌಟ ಟೀಕೆ

ಅಕ್ಟೋಬರ್ 29, 2026

ಕ್ರೀಡೆಯಲ್ಲಿ ಸರ್ವದೈವತ ಪ್ರೌಢಶಾಲೆಗೆ ಹ್ಯಾಟ್ರಿಕ್ ಸಮಗ್ರ ಪ್ರಶಸ್ತಿಯ ಗರಿ

ಅಕ್ಟೋಬರ್ 29, 2026

ಬಿಜೆಪಿ ಆಡಳಿತದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ : ಮಡಿಕೇರಿಗೆ ಅಂಟಿದ್ದ ಶಾಪ ವಿಮೋಚನೆಯಾಗಿದೆ : ಮೂಡ ಅಧ್ಯಕ್ಷ ಬಿ.ವೈ.ರಾಜೇಶ್ ಅಸಮಾಧಾನ

ಅಕ್ಟೋಬರ್ 29, 2026

ಅ.31 ರಂದು ಮಾಯಮುಡಿಯಲ್ಲಿ ಕೊಡಗು ಕುಲಾಲ ಕುಂಬಾರರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ : ನ.1 ರಂದು ಸಮಾರೋಪ

ಅಕ್ಟೋಬರ್ 29, 2026

ನ.2ರಂದು ಪೊನ್ನಂಪೇಟೆಯಲ್ಲಿ ಸಿಎನ್‌ಸಿ ಮಾನವ ಸರಪಳಿ : ಕೊಡವಲ್ಯಾಂಡ್ ಸ್ವಾಯತ್ತತೆಗಾಗಿ ಜನಜಾಗೃತಿ ಕಾರ್ಯಕ್ರಮ

ಅಕ್ಟೋಬರ್ 29, 2026

ನ.7 ರಂದು ಸಂದರ್ಶನ

ಅಕ್ಟೋಬರ್ 28, 2026

ನ.1 ರಂದು ಕನ್ನಡ ರಾಜ್ಯೋತ್ಸವ ದಿನಾಚರಣೆ

ಅಕ್ಟೋಬರ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.