ಮಡಿಕೇರಿ, ಅ.19: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಕೊಡಗು ಜಿಲ್ಲೆ ವತಿಯಿಂದ 2024-25ನೇ ಸಾಲಿನ ಎಸ್.ಸಿ.ಎಸ್.ಪಿ. (SCSP) ಯೋಜನೆಯಡಿ ಪರಿಶಿಷ್ಟ ಜಾತಿಯ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸುವ ಉದ್ದೇಶದಿಂದ ಫಲಾನುಭವಿಯೊಬ್ಬರಿಗೆ ಮೊಬೈಲ್ ಕ್ಯಾಂಟೀನ್ ವಾಹನವನ್ನು ಹಸ್ತಾಂತರಿಸಲಾಯಿತು.
Entrepreneurship Programme (EP) ಅಡಿಯಲ್ಲಿ ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಪರಿಶಿಷ್ಟ ಜಾತಿಯ ಅಭ್ಯರ್ಥಿ ಹೆಚ್.ಎಸ್. ರಾಕೇಶ್, ತಂದೆ ಸುರೇಶ್, ಹೆಬ್ಬಾಲೆ ಗ್ರಾಮ ಮತ್ತು ಅಂಚೆ, ಬನಶಂಕರಿ ದೇವಸ್ಥಾನ ರಸ್ತೆ, ಕುಶಾಲನಗರ ಇವರಿಗೆ ಪ್ರವಾಸಿ ತಾಣದಲ್ಲಿ ಉದ್ಯಮ ಚಟುವಟಿಕೆ ಕೈಗೊಳ್ಳಲು ಇಲಾಖೆಯ ವತಿಯಿಂದ ರೂ.5 ಲಕ್ಷಗಳ ಸಹಾಯಧನದೊಂದಿಗೆ ಒದಗಿಸಲಾದ ಮೊಬೈಲ್ ಕ್ಯಾಂಟೀನ್ ವಾಹನವನ್ನು ಅಕ್ಟೋಬರ್ 19, 2026ರಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಚ್.ಎನ್. ರಾಜಶೇಖರ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಶಶಿಧರ್ ಉಪಸ್ಥಿತರಿದ್ದರು.
ಈ ಯೋಜನೆಯು ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಸಂಬಂಧಿತ ಉದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

















