Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ರಾಜಾಸೀಟು ರಸ್ತೆ ಅಭಿವೃದ್ಧಿಗೆ 12 ಅತ್ತಿ ಮರಗಳ ಕಡಿತಕ್ಕೆ ಮನವಿ; ಸಾರ್ವಜನಿಕರಿಂದ ತೀವ್ರ ಆಕ್ಷೇಪ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ರಾಜಾಸೀಟು ರಸ್ತೆ ಅಭಿವೃದ್ಧಿಗೆ 12 ಅತ್ತಿ ಮರಗಳ ಕಡಿತಕ್ಕೆ ಮನವಿ; ಸಾರ್ವಜನಿಕರಿಂದ ತೀವ್ರ ಆಕ್ಷೇಪ

ನವೆಂಬರ್ 11, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, NEWS DESK ನ.11: ರಾಜಾಸೀಟು ರಸ್ತೆಯ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲಿ ದಶಕಗಳಿಂದ ಬೆಳೆದು ನಿಂತಿರುವ 12 ಅತ್ತಿ ಮರಗಳನ್ನು ಕಡಿದು ಹರಾಜು ನಡೆಸಲು ನಗರಸಭೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದ್ದು, ಮರಗಳ ಕಡಿತಕ್ಕೆ ಅನುಮತಿ ನೀಡದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಮರಗಳ ಕಡಿತಕ್ಕೆ ಸಾರ್ವಜನಿಕರ ವಿರೋಧ

ರಾಜಾಸೀಟು ಪರಿಸರ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ರಸ್ತೆಯ ಬದಿಯಲ್ಲಿರುವ ಅತ್ತಿ ಮರಗಳು ನೂತನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಯಾವುದೇ ರೀತಿಯ ಅಡಚಣೆ ಉಂಟುಮಾಡುವುದಿಲ್ಲ. ಆದರೂ, ಮರಗಳಿರುವ ಸ್ಥಳದಲ್ಲಿ ಇಂಟರ್‌ಲಾಕ್ ಅಳವಡಿಸಿ ಸೌಂದರ್ಯೀಕರಣದ ನೆಪದಲ್ಲಿ ಮರಗಳನ್ನು ಕಡಿದು ಸೌದೆ ಹರಾಜು ಮಾಡಲು ಉದ್ದೇಶಿಸಲಾಗಿದೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಮ್ಮ ವಿರೋಧವಿಲ್ಲ. ಆದರೆ, ವೈಜ್ಞಾನಿಕವಾಗಿ ಕಾಮಗಾರಿ ನಡೆಸಿದಲ್ಲಿ ಮರಗಳನ್ನು ಕಡಿಯುವ ಅಗತ್ಯವಿರುವುದಿಲ್ಲ. ಈ ಅತ್ತಿ ಮರಗಳು ಸ್ಥಳೀಯ ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ನೆರಳು ಒದಗಿಸುತ್ತಿವೆ. ವಾಯುವಿಹಾರಕ್ಕೂ ಅನುಕೂಲವಾಗಿವೆ. ಆದ್ದರಿಂದ ಅನಗತ್ಯ ಮರಗಳ ಹನನವನ್ನು ತಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಗರಸಭೆಯೊಂದಿಗೆ ಚರ್ಚಿಸಿ ನಿರ್ಧಾರ: ಡಿ.ಸಿ.ಎಫ್

ಮನವಿ ಸ್ವೀಕರಿಸಿ ಮಾತನಾಡಿದ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು, ಮರಗಳನ್ನು ಕಡಿಯದೆಯೇ ಕಾಮಗಾರಿ ನಡೆಸುವಂತೆ ಅರಣ್ಯ ಇಲಾಖೆಯಿಂದ ನಗರಸಭೆಗೆ ಮನವಿ ಮಾಡಲಾಗಿತ್ತು. ಆದರೆ, ಅದು ಸಾಧ್ಯವಿಲ್ಲ ಎಂದು ನಗರಸಭೆಯ ಅಭಿಯಂತರರು ತಿಳಿಸಿದ್ದು, ಮರಗಳನ್ನು ಕಡಿದು ಸೌದೆ ಹರಾಜು ನಡೆಸಲು ಇಲಾಖೆಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಮರಗಳ ಕಡಿತದ ವಿರುದ್ಧ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಮರಗಳನ್ನು ಕಡಿದು ಸೌದೆ ಹರಾಜು ಮಾಡಲು ಅನುಮತಿ ನೀಡುವುದಿಲ್ಲ. ನಗರಸಭೆಯ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಮರಗಳಿಗೆ ಹಾನಿಯಾಗದಂತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು, ಅಗತ್ಯವಿದ್ದಲ್ಲಿ ಮಾತ್ರ ಮರಗಳನ್ನು ಕಡಿಯುವಂತೆ ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ತಿಳಿಸಿದರು.

ಈ ಸಂದರ್ಭ ಆಕ್ಷೇಪಣೆ ಸಲ್ಲಿಸಿದ ಪ್ರಜ್ಜಾ ಜಿ.ಆರ್., ಪ್ರಜ್ವಲ್ ಜಿ.ಆರ್., ಶರತ್ ಸರಳಾಯ, ಅನಿಲ್ ಬೆಟ್ಟದಳ್ಳಿ, ಡಾ. ಅನುಶ ಎಸ್., ವಕೀಲರಾದ ರಾಷ್ಟ್ರಿತ್ ಚಂಗಪ್ಪ, ಪ್ರಯಾಗ್ ಗೌಡ, ಪ್ರಸನ್ನ ಕೆ.ಟಿ., ಸಂಜಯ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ನ.16ರಂದು ತಲಕಾವೇರಿಯಲ್ಲಿ ಕಿರು ಸಂಕ್ರಮಣ ವಿಶೇಷ ಪೂಜೆ

ನವೆಂಬರ್ 12, 2026

ನ.21ರಂದು ಮರಗೋಡಿನಲ್ಲಿ ಅದ್ಧೂರಿ ‘ಕನ್ನಡ ಹಬ್ಬ’

ನವೆಂಬರ್ 12, 2026

ಕುಂದುರುಮೊಟ್ಟೆಯಲ್ಲಿ ನೋಡುಗರ ಮನಸೆಳೆದ ಚಿಣ್ಣರ ದಸರಾ ಮಂಟಪಗಳು!

ನವೆಂಬರ್ 12, 2026

ನ.21ರಂದು ಮರಗೋಡಿನಲ್ಲಿ ಅದ್ಧೂರಿ ‘ಕನ್ನಡ ಹಬ್ಬ’

ನವೆಂಬರ್ 12, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.12: ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಕಂಪನ್ನು ಮನೆಮನೆಗೂ…

ಕುಂದುರುಮೊಟ್ಟೆಯಲ್ಲಿ ನೋಡುಗರ ಮನಸೆಳೆದ ಚಿಣ್ಣರ ದಸರಾ ಮಂಟಪಗಳು!

ನವೆಂಬರ್ 12, 2026

ಅಂಗಾಂಗ ದಾನ ಮಾಡಿದ ಯೋಗೇಶ್ ಮನೆಗೆ ಪ್ರಸನ್ನ ಎಡಿಕೇರಿ ಭೇಟಿ; ರಾತ್ರಿಯೂ ತಜ್ಞ ವೈದ್ಯರನ್ನು ನಿಯೋಜಿಸುವಂತೆ ಜಿಲ್ಲಾಸ್ಪತ್ರೆ ಸರ್ಜನ್‌ಗೆ ಮನವಿ

ನವೆಂಬರ್ 12, 2026

ನಿಗಮ ಮಂಡಳಿಗಳಿಗೆ ನಿರ್ದೇಶಕರ ಆಯ್ಕೆ: ಕೊಡಗು ಜಿಲ್ಲೆಯಿಂದ ಐವರಿಗೆ ಅವಕಾಶ

ನವೆಂಬರ್ 11, 2026

7ನೇ ಹೊಸಕೋಟೆಯ ಗೌರಿ ಬಡಾವಣೆಯಲ್ಲಿ ಸಾಮರಸ್ಯ ದೀಪಾವಳಿ ಆಚರಣೆ

ನವೆಂಬರ್ 11, 2026

ಸುಂಟಿಕೊಪ್ಪದಲ್ಲಿ ಸಾಮರಸ್ಯ ದೀಪಾವಳಿ ಆಚರಣೆ

ನವೆಂಬರ್ 11, 2026

ನ.17ರಂದು ಬಾಲ ಕಾರ್ಮಿಕರ ಸಮಸ್ಯೆಗಳ ಕುರಿತು ತರಬೇತಿ ಕಾರ್ಯಾಗಾರ

ನವೆಂಬರ್ 11, 2026

ಸಾವಿನಲ್ಲೂ ಸಾರ್ಥಕತೆ ಮೆರೆದ 22ರ ಹರೆಯದ ಯೋಗೇಶ್; ಮೆದುಳು ನಿಷ್ಕ್ರಿಯಗೊಂಡ ಪುತ್ರನ ಅಂಗಾಂಗ ದಾನ ಮಾಡಿದ ಪೋಷಕರು; ಯಕೃತ್, ಕಾರ್ನಿಯಾ ಮೈಸೂರಿಗೆ ರವಾನೆ

ನವೆಂಬರ್ 11, 2026

ನ.14 ರಂದು ಬಲ್ಲಮಾವಟಿಯಲ್ಲಿ ಪ್ರಜಾಸೇವಾ ಅಭಿಯಾನ

ನವೆಂಬರ್ 11, 2026

ನ.13ರಂದು ಮಡಿಕೇರಿಯಲ್ಲಿ ಯುವ ಸಂಸತ್ತು ಕಾರ್ಯಕ್ರಮ

ನವೆಂಬರ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.