ಮಡಿಕೇರಿ, NEWS DESK ನ.11: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ಸರ್ಕಾರಿ ಶುಶ್ರೂಷಾ ಕಾಲೇಜು, ಮಡಿಕೇರಿಯಲ್ಲಿ 2026-27ನೇ ಸಾಲಿನ ಬಿ.ಎಸ್ಸಿ. ನರ್ಸಿಂಗ್ (B.Sc. Nursing) ಪದವಿ ಕೋರ್ಸ್ಗೆ ಬಾಕಿ ಉಳಿದಿರುವ 16 ಸೀಟುಗಳನ್ನು ನೇರ ಪ್ರವೇಶಾತಿ (Walk-in Admission) ಮೂಲಕ ಭರ್ತಿ ಮಾಡಲು ಸರ್ಕಾರ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಬಿ.ಎಸ್ಸಿ. ನರ್ಸಿಂಗ್ ಕೋರ್ಸ್ಗೆ ಸೇರಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ನಿಯಮಾನುಸಾರ ಪ್ರವೇಶಾತಿ ಪಡೆಯಲು ತಮ್ಮ ಎಲ್ಲಾ ಮೂಲ ದಾಖಲೆಗಳೊಂದಿಗೆ ನವೆಂಬರ್ 14ರಂದು (ಶನಿವಾರ) ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯೊಳಗೆ ಸರ್ಕಾರಿ ಶುಶ್ರೂಷಾ ಕಾಲೇಜು, ಮಡೇರಿಯಲ್ಲಿ ಹಾಜರಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ನೋಂದಾಯಿತ ಅಭ್ಯರ್ಥಿಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
-
ಶ್ರೀಮತಿ ಮಂಜುಳಾ ಎ.ಕೆ., ಪ್ರಾಂಶುಪಾಲರು, ಸರ್ಕಾರಿ ಶುಶ್ರೂಷಾ ಕಾಲೇಜು, ಮಡಿಕೇರಿ – 8088835156.
-
ಶ್ರೀ ಗುರುಪಾದ ಕೆ.ಪಿ., ಸಮನ್ವಯ ಅಧಿಕಾರಿಗಳು, ಸರ್ಕಾರಿ ಶುಶ್ರೂಷಾ ಕಾಲೇಜು, ಮಡಿಕೇರಿ – 9964244304.















