ಸುಂಟಿಕೊಪ್ಪ, NEWS DESK ನ.11: ಕುಶಾಲನಗರ ತಾಲೂಕು ಸಾಮರಸ್ಯ ವೇದಿಕೆಯ ವತಿಯಿಂದ 7ನೇ ಹೊಸಕೋಟೆಯ ಗೌರಿ ಬಡಾವಣೆಯ ದಲಿತ ಸಮುದಾಯದ ಕಾಲೋನಿಯಲ್ಲಿ ಸಾಮರಸ್ಯ ದೀಪಾವಳಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮಹಾಗಣಪತಿ ದೇವಸ್ಥಾನದಲ್ಲಿ ಅರ್ಚಕರು ದೀಪ ಬೆಳಗಿಸಿ, ವಿಶ್ವನಾಥ್ ಮತ್ತು ಪುಷ್ಪ ದಂಪತಿಗಳ ಕೈಗೆ ಸಾಮರಸ್ಯ ಜ್ಯೋತಿಯನ್ನು ಹಸ್ತಾಂತರಿಸಿದರು. ಬಳಿಕ ಗೋ ಪೂಜೆಯೊಂದಿಗೆ ಆರಂಭವಾದ ಸಾಮರಸ್ಯ ಜ್ಯೋತಿಯು ಬಡಾವಣೆಯ ಪ್ರತಿಯೊಂದು ಮನೆಯನ್ನೂ ಬೆಳಗಿಸಿತು.
ಈ ಸಂದರ್ಭದಲ್ಲಿ ಚಿ.ನಾ. ಸೋಮೇಶ್ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತರಾದ ಶಿವನ್, ದಿನೇಶ್, ಸಾಮರಸ್ಯ ವೇದಿಕೆಯ ಕಾರ್ಯಕರ್ತರು, ಊರಿನ ಪ್ರಮುಖರು ಹಾಗೂ ದಲಿತ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.






















