ಮಡಿಕೇರಿ, NEWS DESK ನ.11: ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ನಿಗಮ ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಇಂದು ಪಟ್ಟಿ ಬಿಡುಗಡೆ ಮಾಡಿದ್ದು, ಕೊಡಗು ಜಿಲ್ಲೆಯಿಂದ ಐವರಿಗೆ ನಿರ್ದೇಶಕ ಸ್ಥಾನ ಲಭಿಸಿದೆ.
ಕಾವೇರಿ ಜಲಾನಯನ ಪ್ರದೇಶ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ಸಂಪಾಜೆಯ ಹೆಚ್.ಟಿ. ಶಿವಪ್ರಸಾದ್ (ಸೂರಜ್ ಹೊಸೂರು) ನೇಮಕಗೊಂಡಿದ್ದಾರೆ.
ಗೋಣಿಕೊಪ್ಪಲಿನ ಅರ್ವತೋಕ್ಲು ಗ್ರಾಮದ ನಿವಾಸಿ ಎ.ಜೆ. ಬಾಬು ಅವರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಚೆಸ್ಕಾಂ) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕರಾಗಿ ನಾಪೋಕ್ಲುವಿನ ಕೆ.ಎ. ಇಸ್ಮಾಯಿಲ್ ನೇಮಕಗೊಂಡಿದ್ದಾರೆ.
ಮಲೆನಾಡು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯ ಕೆ.ಎಂ. ಲೋಕೇಶ್ ಆಯ್ಕೆಯಾಗಿದ್ದಾರೆ.
ಅದೇ ರೀತಿ, ಶ್ರೀ ಕಂಠೀರವ ಸ್ಟುಡಿಯೋಸ್ ನಿರ್ದೇಶಕರಾಗಿ ಕಿಗ್ಗಾಲು ಗ್ರಾಮದ ಐ.ಎಲ್. ಚಿಣ್ಣಪ್ಪ ನೇಮಕಗೊಂಡಿದ್ದಾರೆ.
ಈ ಮೂಲಕ ಕೊಡಗು ಜಿಲ್ಲೆಗೆ ಐದು ನಿರ್ದೇಶಕ ಸ್ಥಾನಗಳು ಲಭಿಸಿದ್ದು, ಜಿಲ್ಲೆಯ ವಿವಿಧ ಭಾಗಗಳ ಮುಖಂಡರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ದೊರೆತಂತಾಗಿದೆ.























