ಸೋಮವಾರಪೇಟೆ, NEWS DESK ನ.13: ಕರ್ನಾಟಕದ ಜೀವನಾಡಿ, ಕೋಟ್ಯಂತರ ಜನರ ಜೀವಜಲ ಹಾಗೂ ನಾಡಿನ ಸಮೃದ್ಧಿಯ ಸಂಕೇತವಾಗಿರುವ ಕಾವೇರಿ ತಾಯಿಯ ದರ್ಶನ ಪಡೆಯುವ ಉದ್ದೇಶದಿಂದ ಮಂಡ್ಯ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾಧ್ಯಕ್ಷರ ನೇತೃತ್ವದ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ಕುಶಾಲನಗರದ ಕೊಪ್ಪ ಗೇಟ್ನಲ್ಲಿರುವ ಕಾವೇರಿ ಪ್ರತಿಮೆಯ ಬಳಿ ಆಗಮಿಸಿದ ತಂಡವನ್ನು ಕೊಡಗು ಜಿಲ್ಲಾ ಕರವೇ ಅಧ್ಯಕ್ಷ ದೀಪಕ್ ಕನ್ನಡಿಗ ಅವರ ಮಾರ್ಗದರ್ಶನದಲ್ಲಿ, ಯುವ ಘಟಕದ ತಾಲೂಕು ಅಧ್ಯಕ್ಷ ಪುನೀತ್ ಅವರ ನೇತೃತ್ವದಲ್ಲಿ ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿ ಗೌರವಿಸಲಾಯಿತು.
ನಂತರ ಕಾವೇರಿ ತಾಯಿಯ ಪ್ರತಿಮೆಗೆ ಪೂಜೆ ಸಲ್ಲಿಸಿ, ತಾಯಿಯ ಆಶೀರ್ವಾದದೊಂದಿಗೆ ಪವಿತ್ರ ತೀರ್ಥಕ್ಷೇತ್ರವಾದ ತಲಕಾವೇರಿಗೆ ತಂಡವನ್ನು ಬೀಳ್ಕೊಡಲಾಯಿತು.
ಕಾವೇರಿ ನಾಡಿನ ಜನರ ಬದುಕು ಹಸನಾಗಲಿ, ರೈತರ ಬಾಳಿನಲ್ಲಿ ಸಮೃದ್ಧಿ ನೆಲೆಸಲಿ ಹಾಗೂ ನಾಡಿನಾದ್ಯಂತ ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿ ಸದಾ ನೆಲೆಸಿರಲಿ ಎಂಬುದು ಈ ಭೇಟಿಯ ಆಶಯವಾಗಿದೆ.
ಕಾವೇರಿ ನಮ್ಮ ಹೆಮ್ಮೆ, ಕಾವೇರಿ ನಮ್ಮ ಬದುಕು, ಕಾವೇರಿ ನಮ್ಮ ಜೀವನಾಡಿ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆನಂದ್ ಕನ್ನಡಿಗ, ಜಿಲ್ಲಾ ಕಾರ್ಯದರ್ಶಿ ಸಂದೀಪ್ ಪೆಂಗ್ವಿನ್, ತಾಲೂಕು ಅಧ್ಯಕ್ಷ ಆಸಿಫ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಇಂಚರ ಗೌಡ, ತಾಲೂಕು ಉಪಾಧ್ಯಕ್ಷೆ ನಾಗರತ್ನ, ನಗರಾಧ್ಯಕ್ಷ ಯೋಗೇಶ್ ಗೌಡ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪವನ್, ಪಾಂಡುರಂಗ, ಆವರ್ತಿ ಹರೀಶ್, ಪ್ರಕಾಶ್ ಹಾಗೂ ಶಾರದ ಉಪಸ್ಥಿತರಿದ್ದರು.
















