ಮಡಿಕೇರಿ, NEWS DESK ನ.13: ಜಿಲ್ಲೆಯ ವಿವಿಧ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಹಾಗೂ ವಿದ್ಯುತ್ ಮಾರ್ಗ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 18 ಮತ್ತು 19ರಂದು ಜಿಲ್ಲೆಯ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಮೈಸೂರಿನ ಕಡಕೋಳದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ 2×500 ಎಂವಿಎ, 400 ಕೆವಿ ವಿದ್ಯುತ್ ಉಪಕೇಂದ್ರ ಹಾಗೂ ಸಂಬಂಧಿತ ವಿದ್ಯುತ್ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ 220 ಕೆವಿ ಬಸ್ತಿಪುರ–ತಮಡಹಳ್ಳಿ ವಿದ್ಯುತ್ ಮಾರ್ಗಕ್ಕೆ ತಂತಿ ಎಳೆಯುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 220 ಕೆವಿ ಕುಶಾಲನಗರ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಬೇಕಾಗಿರುವುದರಿಂದ ಮಡಿಕೇರಿ ವಿದ್ಯುತ್ ಉಪಕೇಂದ್ರ ಹಾಗೂ ವಿರಾಜಪೇಟೆ ಉಪಕೇಂದ್ರದಿಂದ ಸರಬರಾಜಾಗುವ ಮೂರ್ನಾಡು ಫೀಡರ್ ವ್ಯಾಪ್ತಿಯಲ್ಲಿ ನವೆಂಬರ್ 18 ಮತ್ತು 19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಅವಧಿಯಲ್ಲಿ ಮಡಿಕೇರಿ ನಗರ, ರಾಜಾಸೀಟ್, ಗದ್ದಿಗೆ, ಕೋಟೆ, ಕುಂಡಾಮೇಸ್ತ್ರಿ, ಓಂಕಾರೇಶ್ವರ, ಜಿ.ಟಿ. ರಸ್ತೆ, ಕೆಎಸ್‌ಆರ್‌ಟಿಸಿ, ಮೇಕೇರಿ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಗಾಳಿಬೀಡು, ಮಕ್ಕಂದೂರು, ಹೆಬ್ಬೆಟ್ಟಗೇರಿ, ಕೆ. ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಚೆಟ್ಟಿಮಾನಿ, ಚೇರಂಬಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಅಲ್ಲದೆ, ಮೂರ್ನಾಡು, ಮರಗೋಡು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ ಮತ್ತು ನಾಪೋಕ್ಲು ವ್ಯಾಪ್ತಿಯಲ್ಲಿಯೂ ವಿದ್ಯುತ್ ವ್ಯತ್ಯಯವಾಗಲಿದೆ.
ಇದೇ ರೀತಿ, 220/66/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಕುಶಾಲನಗರ ಹಾಗೂ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸುಂಟಿಕೊಪ್ಪ ಮತ್ತು ಮಾದಾಪುರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 18 ಮತ್ತು 19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡೆಹೊಸೂರು, ಹೆಬ್ಬಾಲೆ, ಕಣಿವೆ, ಮಲ್ಲೇನಹಳ್ಳಿ, ಭುವನಗಿರಿ, ಕೈಗಾರಿಕಾ ಪ್ರದೇಶ, ಕೂಡಿಗೆ, ಕೂಡುಮಂಗಳೂರು, ಶಿರಂಗಾಲ, ಕಾನ್‌ಬೈಲು, ಅಂದಗೋವೆ, ನಾಕೂರು, ಹಾದ್ರೆ ಹಿರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಮಾದಾಪುರ, ಪನ್ಯ, ಚೆಟ್ಟಳ್ಳಿ, ನಾಕೂರು ಶಿರಂಗಾಲ, ವಾಲ್ನೂರು ತ್ಯಾಗತ್ತೂರು, ಪೊನ್ನತ್‌ಮೊಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಗೋಣಿಕೊಪ್ಪ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್5 ಕೆ. ಬಾಡಗ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ನವೆಂಬರ್ 18ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕೆ. ಬಾಡಗ, ಆಲಂದೋಡು, ಹೆರ್ಮಾಡು, ಕುಮಟೂರು, ನಾಲ್ಕೇರಿ, ಕೆ.ಎಂ. ಕೊಲ್ಲಿ ಮತ್ತು ಪಲ್ಲೇರಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅದೇ ರೀತಿ, ಎಫ್15 ಬೆಕ್ಕೆಸೊಡ್ಲೂರು ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ನವೆಂಬರ್ 19ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕಾನೂರು, ಬೆಕ್ಕೆಸೊಡ್ಲೂರು, ಕೋತೂರು, ಬಲ್ಯಮಂಡೂರು, ವಡ್ಡರಮಾಡು, ನಿಡುಗುಂಬ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಸೋಮವಾರಪೇಟೆ ಉಪವಿಭಾಗದ 66 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ನವೆಂಬರ್ 18 ಮತ್ತು 19ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸೋಮವಾರಪೇಟೆ ಟೌನ್, ಅಬ್ಬೂರುಕಟ್ಟೆ, ನೇರುಗಳಲೆ, ತಣ್ಣೀರುಹಳ್ಳಿ, ಅರೆಯೂರು, ಹೊಸಳ್ಳಿ, ಐಗೂರು, ಒಳಗುಂದ, ಹೊಸತೋಟ, ಗರಗಂದೂರು, ಕಾರ್ಕಳ್ಳಿ, ಶಾಂತಳ್ಳಿ, ದೊಡ್ಡಮಳ್ತೆ, ಹಣಕೋಡು, ಗೆಜ್ಜೆಹಣಕೋಡು, ಚಿಕ್ಕತೋಳೂರು, ಕೂಗೆಕೋಡಿ, ಯಡೂರು, ತಾಕೇರಿ, ಕಿರಗಂದೂರು, ಹಾನಗಲ್ಲು, ನಗರೂರು, ದುದ್ದುಗಲ್ಲು, ಗಾಂಧೀನಗರ, ಸಜ್ಜಳ್ಳಿ, ಕಾಜೂರು, ನೆಗಳ್ಳಿ-ಕಾರ್ಕಳ್ಳಿ, ಯಲಕನೂರು, ಎಂ.ಜಿ. ರಸ್ತೆ, ಬಾಣಾವಾರ ರಸ್ತೆ, ಬೀದಳ್ಳಿ, ಜಕ್ನಳ್ಳಿ, ಕುಡಿಗಾಣ, ಕೊತ್ನಳ್ಳಿ, ಕುಸುಜೂರು, ಕಾರೆಕೊಪ್ಪ, ಆಲೂರು ಸಿದ್ಧಾಪುರ, ಗೋಣಿಮಾರೂರು, ಮಾಲಂಬಿ ಮತ್ತು ಅಂಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಇನ್ನು ವಿರಾಜಪೇಟೆ ಉಪವಿಭಾಗದ 220 ಕೆವಿ ಎಂಯುಎಸ್‌ಎಸ್ ಕುಶಾಲನಗರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ನವೆಂಬರ್ 18 ಮತ್ತು 19ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವಿರಾಜಪೇಟೆ, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ವಿದ್ಯುತ್ ಇಲಾಖೆಯೊಂದಿಗೆ ಸಹಕರಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಮನವಿ ಮಾಡಿದ್ದಾರೆ.















