ಮಡಿಕೇರಿ, NEWS DESK ನ.16: ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ವೆಲ್ಲೂರಿನಲ್ಲಿ ಜೆಎಸ್ಕೆಎ (ಜಪಾನ್ ಶೋಟೋಕನ್ ಕರಾಟೆ ಅಸೋಸಿಯೇಷನ್) ವತಿಯಿಂದ ಇತ್ತೀಚೆಗೆ ನಡೆದ ಅಂತರರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಡಗಿನ ಪೊನ್ನಂಪೇಟೆಯ ಸಂತ ಅಂತೋಣಿ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಎಂ.ಎಲ್. ಅದ್ವೈತ್ ದ್ವಿತೀಯ ಸ್ಥಾನ ಗಳಿಸಿದ್ದಾನೆ.
11ರಿಂದ 13ರ ವಯೋಮಾನದೊಳಗಿನ ಕುಮಿತೆ ವಿಭಾಗದ ಸ್ಪರ್ಧೆಯಲ್ಲಿ ಅದ್ವೈತ್ ಈ ಸಾಧನೆ ಮಾಡಿದ್ದಾನೆ.
ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದ ಮರಾಟಿ ಎಸ್. ಲತಕುಮಾರ್ ಮತ್ತು ಎನ್.ಕೆ. ಸುಶೀಲಾ ದಂಪತಿಯ ಪುತ್ರನಾಗಿರುವ ಅದ್ವೈತ್, ಸೆನ್ಸಾಯಿ ಬಿ.ಎಸ್. ಸಂತೋಷ್ ಅವರ ಮಾರ್ಗದರ್ಶನದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾನೆ.
ಅದ್ವೈತ್ನ ಸಾಧನೆಗೆ ಪೋಷಕರು, ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸೆವರೀನ್ ಡಿಸೋಜಾ ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದು, ಆತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.
















