Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ನ.21ರಂದು ಕುಶಾಲನಗರಕ್ಕೆ ಭಾರತೀಯ ವಾಯುಪಡೆಯ ಸಂಚಾರಿ ಪ್ರಚಾರ ವಾಹನ; ಅಗ್ನಿವೀರ್‌ವಾಯು, ಏರ್‌ಮೆನ್ ಹುದ್ದೆಗಳ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನ.21ರಂದು ಕುಶಾಲನಗರಕ್ಕೆ ಭಾರತೀಯ ವಾಯುಪಡೆಯ ಸಂಚಾರಿ ಪ್ರಚಾರ ವಾಹನ; ಅಗ್ನಿವೀರ್‌ವಾಯು, ಏರ್‌ಮೆನ್ ಹುದ್ದೆಗಳ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ

ನವೆಂಬರ್ 17, 20261 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು, NEWS DESK ನ.17: ಭಾರತೀಯ ವಾಯುಪಡೆಯಲ್ಲಿನ ಅಗ್ನಿವೀರ್‌ವಾಯು ಮತ್ತು ಏರ್‌ಮೆನ್ ವಿಭಾಗಗಳ ಉದ್ಯೋಗಾವಕಾಶಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್ ವತಿಯಿಂದ ಸಂಚಾರಿ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಬೆಂಗಳೂರಿನಲ್ಲಿರುವ ವಾಯುಪಡೆಯ ತರಬೇತಿ ಕಮಾಂಡ್ ಪ್ರಧಾನ ಕಚೇರಿಯಲ್ಲಿ ನವೆಂಬರ್ 17ರಂದು ನಡೆದ ಕಾರ್ಯಕ್ರಮದಲ್ಲಿ ಏರ್ ವೈಸ್ ಮಾರ್ಷಲ್ ಜಿ. ಅನಂತ್ ಹಾಗೂ ಹಿರಿಯ ಆಡಳಿತಾಧಿಕಾರಿ ಮತ್ತು ಕೇಂದ್ರ ಏರ್‌ಮೆನ್ ಆಯ್ಕೆ ಮಂಡಳಿಯ ಅಧ್ಯಕ್ಷ ಏರ್ ಕಮೋಡೋರ್ ಎನ್.ಕೆ. ಚಬ್ಬಾ ಅವರು ಹಸಿರು ನಿಶಾನೆ ತೋರುವ ಮೂಲಕ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.

ಈ ಸಂಚಾರಿ ಪ್ರಚಾರ ವಾಹನವು ಏಳು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಪ್ರತಿದಿನ ಸುಮಾರು 60 ಕಿ.ಮೀ. ಪ್ರಯಾಣಿಸಲಿದೆ. ರಾಮನಗರ, ಮಂಡ್ಯ, ಮೈಸೂರು, ಪಿರಿಯಾಪಟ್ಟಣ, ಮಡಿಕೇರಿ ಹಾಗೂ ಸುಳ್ಯ ಮಾರ್ಗವಾಗಿ ಸಂಚರಿಸಿ ನವೆಂಬರ್ 23ರಂದು ಬಂಟ್ವಾಳದಲ್ಲಿ ಅಭಿಯಾನ ಮುಕ್ತಾಯಗೊಳ್ಳಲಿದೆ.

ಅಭಿಯಾನದ ಭಾಗವಾಗಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಆಟಗಳು ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ನವೆಂಬರ್ 17ರಂದು ಬಿಡದಿ, 18ರಂದು ಚನ್ನಪಟ್ಟಣ, 19ರಂದು ಶ್ರೀರಂಗಪಟ್ಟಣ, 20ರಂದು ಪಿರಿಯಾಪಟ್ಟಣ, 21ರಂದು ಕುಶಾಲನಗರ, 22ರಂದು ಸುಳ್ಯ ಹಾಗೂ 23ರಂದು ಪುತ್ತೂರು ಮತ್ತು ಬಂಟ್ವಾಳದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಏರ್ ವೈಸ್ ಮಾರ್ಷಲ್ ಜಿ. ಅನಂತ್ ಅವರು, ಭಾರತೀಯ ವಾಯುಪಡೆಯು ಸಾಹಸ, ಶಿಸ್ತು ಮತ್ತು ದೇಶಭಕ್ತಿಯ ಜೀವನಶೈಲಿಯನ್ನು ಒದಗಿಸುವ ಪ್ರತಿಷ್ಠಿತ ಸೇವೆಯಾಗಿದೆ. ಯುವಜನರು ದೇಶಸೇವೆಯ ಸವಾಲನ್ನು ಸ್ವೀಕರಿಸಿ ಭಾರತೀಯ ವಾಯುಪಡೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಅಭಿಯಾನದ ಮೂಲಕ ಕರ್ನಾಟಕದ ಯುವಜನರಿಗೆ ಭಾರತೀಯ ವಾಯುಪಡೆಯ ಉದ್ಯೋಗಾವಕಾಶಗಳು, ನೇಮಕಾತಿ ಪ್ರಕ್ರಿಯೆ ಹಾಗೂ ವೃತ್ತಿಜೀವನದ ಕುರಿತು ಸಮಗ್ರ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ.

Follow us Follow us
Share. WhatsApp Facebook Twitter Email Telegram Copy Link

Related Posts

ಕೊಡಗು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಹೊಸೂರು ಜೆ.ಸತೀಶ್ ಕುಮಾರ್ ಅವಿರೋಧ ಆಯ್ಕೆ

ನವೆಂಬರ್ 17, 2026

ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿ: ಶುಭ; ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ

ನವೆಂಬರ್ 17, 2026

ಜಯಲಕ್ಷ್ಮಿ ಕೆ. ಅವರ ‘ನಡೆದಷ್ಟೂ ದಾರಿ’ ಕೃತಿಗೆ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ

ನವೆಂಬರ್ 17, 2026

ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿ: ಶುಭ; ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ

ನವೆಂಬರ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.17: ಮಕ್ಕಳಿಗೆ ಬಾಲ್ಯವನ್ನು ಮುಕ್ತವಾಗಿ ಅನುಭವಿಸಲು ಅವಕಾಶ ಕಲ್ಪಿಸುವುದರ ಜೊತೆಗೆ, ಅವರನ್ನು ದುಡಿಮೆಗೆ ದೂಡದೆ ಶಿಕ್ಷಣ…

ಜಯಲಕ್ಷ್ಮಿ ಕೆ. ಅವರ ‘ನಡೆದಷ್ಟೂ ದಾರಿ’ ಕೃತಿಗೆ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ

ನವೆಂಬರ್ 17, 2026

ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡಲು ಒತ್ತಾಯ : ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸಿದ ಕೊಡಗು ಅಹಿಂದ ಬಳಗ

ನವೆಂಬರ್ 17, 2026

ಸೋಮವಾರಪೇಟೆಯಲ್ಲಿ 12 ಮಂದಿಗೆ ಕಚ್ಚಿದ್ದ ಬೀದಿನಾಯಿ ಸೆರೆ; ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಾಚರಣೆ – ಜನರ ಆತಂಕಕ್ಕೆ ತೆರೆ

ನವೆಂಬರ್ 17, 2026

ಸಿದ್ದಾಪುರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಚಾಲನೆ; ‘ಶುದ್ಧ ಕೊಡಗು – ಹಸಿರು ಕೊಡಗು’ ಪರಿಕಲ್ಪನೆ ಪ್ರತಿಯೊಬ್ಬರ ಮನದಲ್ಲಿರಲಿ: ಶಾಸಕ ಪೊನ್ನಣ್ಣ

ನವೆಂಬರ್ 17, 2026

ಸಿದ್ದಾಪುರದಲ್ಲಿ ₹24.52 ಕೋಟಿ ವೆಚ್ಚದ 66/11 ಕೆ.ವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ; ಸಿದ್ದಾಪುರ–ಪಾಲಿಬೆಟ್ಟ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ

ನವೆಂಬರ್ 17, 2026

ಸಿದ್ದಾಪುರದಲ್ಲಿ ನೂತನ ಆಟೋ ತಂಗುದಾಣ ನಿರ್ಮಾಣಕ್ಕೆ ಭೂಮಿಪೂಜೆ; ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಅನುದಾನದಲ್ಲಿ ಕಾಮಗಾರಿಗೆ ಚಾಲನೆ

ನವೆಂಬರ್ 17, 2026

ಥ್ರೋಬಾಲ್ ಪಂದ್ಯಾಟದಲ್ಲಿ ಸರ್ವದೈವತ ವಿದ್ಯಾಸಂಸ್ಥೆಯ ಸಾಧನೆ: ಮೂರು ತಂಡಗಳು ವಿಭಾಗ ಮಟ್ಟಕ್ಕೆ ಆಯ್ಕೆ

ನವೆಂಬರ್ 17, 2026

ಸಿದ್ದಾಪುರ–ಪಾಲಿಬೆಟ್ಟ ರಸ್ತೆ ಅಭಿವೃದ್ಧಿಗೆ ₹2.25 ಕೋಟಿ ಅನುದಾನ; ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಂದ ಭೂಮಿಪೂಜೆ

ನವೆಂಬರ್ 17, 2026

ಚಂದ್ರವನ ಕಲ್ಯಾಣಿ ಅಭಿವೃದ್ಧಿಗೆ ₹4.73 ಕೋಟಿ ಅನುದಾನ; ಅಮೃತ್ 2.0 ಯೋಜನೆಯಡಿ ಸಮಗ್ರ ಅಭಿವೃದ್ಧಿ ಮತ್ತು ಪುನಶ್ಚೇತನ – ಸಂಸದ ಯದುವೀರ್ ಒಡೆಯರ್

ನವೆಂಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.