Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಹಿಮವನ ಪ್ರತಿಭಾ ಸಂಗಮ ಕನ್ನಡ ಹಬ್ಬಕ್ಕೆ ಉತ್ಸಾಹದ ಸ್ಪಂದನೆ : ಮಕ್ಕಳಿಗೆ ಉತ್ತಮ ಮೌಲ್ಯ ಕಲಿಸಬೇಕು : ಕೊಟ್ಟುಕತ್ತಿರ ಯಶೋದಾ ಪ್ರಕಾಶ್
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಹಿಮವನ ಪ್ರತಿಭಾ ಸಂಗಮ ಕನ್ನಡ ಹಬ್ಬಕ್ಕೆ ಉತ್ಸಾಹದ ಸ್ಪಂದನೆ : ಮಕ್ಕಳಿಗೆ ಉತ್ತಮ ಮೌಲ್ಯ ಕಲಿಸಬೇಕು : ಕೊಟ್ಟುಕತ್ತಿರ ಯಶೋದಾ ಪ್ರಕಾಶ್

ನವೆಂಬರ್ 23, 20264 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, ನ. 23 (NEWS DESK): ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಬದುಕಿನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಸಮರ್ಥ ಕನ್ನಡಿಗರು (ನೋಂ.) ಸಂಸ್ಥೆ ವತಿಯಿಂದ ಮಡಿಕೇರಿ ನಗರದ ಓಂಕಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹಿಮವನ ಪ್ರತಿಭಾ ಸಂಗಮ ಕನ್ನಡ ಹಬ್ಬ’ ಕಾರ್ಯಕ್ರಮ ಉತ್ಸಾಹದಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಟ್ಟುಕತ್ತಿರ ಯಶೋದಾ ಪ್ರಕಾಶ್ ಅವರು, ಸಭಾಂಗಣದಲ್ಲಿ ತುಂಬಿ ತುಳುಕುತ್ತಿದ್ದ ಉತ್ಸಾಹಿ ಪೋಷಕರು, ಸ್ಪರ್ಧೆಗಳಲ್ಲಿ ಭಾಗವಹಿಸಲು ಸಿದ್ಧರಾಗಿ ಬಂದಿದ್ದ ಮಕ್ಕಳು ಹಾಗೂ ಮಹಿಳೆಯರ ಉಪಸ್ಥಿತಿಯೇ ಸಮರ್ಥ ಕನ್ನಡಿಗರು ಸಂಸ್ಥೆ ಜಿಲ್ಲಾ ಮಟ್ಟದಲ್ಲಿ ಜನಮನ್ನಣೆ ಗಳಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದರು. ಮಕ್ಕಳಿಗೆ ಇಂತಹ ವೇದಿಕೆಗಳು ದೊರೆತಾಗ ಅವರು ಎಲ್ಲರೊಂದಿಗೆ ಬೆರೆತು ಬಾಳುವುದನ್ನು ಕಲಿಯುತ್ತಾರೆ. ಇದರಿಂದ ಅವರ ಸಾಮಾಜಿಕ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ. ಮಹಿಳೆಯರೇ ಸೇರಿ ಮುನ್ನಡೆಸುತ್ತಿರುವ ಈ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಇನ್ನಷ್ಟು ಬೆಳೆಯಲಿ. ಜೀವನದಲ್ಲಿ ಯಾವುದೇ ಸಾಧನೆ ಮಾಡದಿದ್ದರೂ ಪರವಾಗಿಲ್ಲ, ಮೊದಲು ಉತ್ತಮ ಮಾನವರಾಗಿ ಬದುಕುವುದನ್ನು ಕಲಿಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಅವರು, ಸಂಸ್ಥೆಯು ಕಲ್ಲುಸಕ್ಕರೆ ನೀಡಿ ಸ್ವಾಗತಿಸುವ ಪರಿಯನ್ನು ದಾಸರ ಪದವನ್ನು ಉಲ್ಲೇಖಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಮುಖ್ಯವಾಗಿದ್ದು, ಬಹುಮಾನವೇ ಪ್ರತಿಭೆಯ ಮಾನದಂಡವಲ್ಲ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಮಹಿಳೆಯರೇ ಮುನ್ನಡೆಸುತ್ತಿರುವ ಸಮರ್ಥ ಕನ್ನಡಿಗರು ಉತ್ತಮ ಸಂಘಟನೆಯಾಗಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಜಾಗೃತಿಯ ಕಾರ್ಯಗಳಿಗೆ ಸಂಸ್ಥೆಯೊಂದಿಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು. ಕನ್ನಡ ಸೇವೆಯನ್ನು ಯಾರೇ ಮಾಡಿದರೂ ಅದು ಶ್ಲಾಘನೀಯ ಎಂದರು. ಬೆನಕ ಕ್ಲಿನಿಕ್‌ನ ವೈದ್ಯೆ ಡಾ. ಈಶ್ವರಿ ಮಾತನಾಡಿ, ಸಮಾಜದ ಶ್ರೀಮಂತಿಕೆ ಇರುವುದು ಹಣದಲ್ಲಲ್ಲ, ಸಂಸ್ಕೃತಿಯಲ್ಲಿ. ನಮ್ಮ ಭಾಷೆಯೇ ಸಂಸ್ಕೃತಿಯ ಬೇರು. ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ನಮ್ಮ ಅಸ್ಮಿತೆಯನ್ನು ಕಳೆದುಕೊಳ್ಳಬಾರದು. ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಮರ್ಥ ಕನ್ನಡಿಗರು ಆಯೋಜಿಸುತ್ತಿರುವ ಇಂತಹ ಪ್ರತಿಭಾ ಸಂಗಮಗಳು ಶ್ಲಾಘನೀಯ ಎಂದರು. *ಮಾತೃಭಾಷೆಯೇ ನಾಡಿನ ಆಂತರಿಕ ಶಕ್ತಿ* ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಸಂಚಾಲಕಿ ಕೆ. ಜಯಲಕ್ಷ್ಮಿ ಮಾತನಾಡಿ, ಮಾತೃಭಾಷೆಯನ್ನು ನಿರ್ಲಕ್ಷಿಸಿದ ನಾಡು ತನ್ನ ಆಂತರಿಕ ಚೈತನ್ಯವನ್ನು ಕಳೆದುಕೊಳ್ಳುತ್ತದೆ. ಬಳಸದೇ ಇರುವ ಭಾಷೆ ಬೆಳೆಯುವುದಿಲ್ಲ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಯುವಜನರಲ್ಲಿ ಆಸಕ್ತಿ ಹಾಗೂ ಅಭಿಮಾನ ಮೂಡಿಸುವುದೇ ಕನ್ನಡ ಹಬ್ಬದ ಮೂಲ ಆಶಯವಾಗಿದೆ. ವರ್ಷದಿಂದ ವರ್ಷಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ ಎಂದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಅವರು ಸಂಸ್ಥೆಯ ತಂಡಕ್ಕೆ ಶುಭ ಹಾರೈಸಿದರು. *ಮಹಿಳೆಯರ ಒಗ್ಗಟ್ಟಿಗೆ ಮೆಚ್ಚುಗೆ* ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಚೆಟ್ಟಳ್ಳಿಯ ಲೇಖಕಿ ಆಶಾ ತಿಮ್ಮಪ್ಪಯ್ಯ ಮಾತನಾಡಿ, ಮಹಿಳೆಯರಲ್ಲಿ ಒಗ್ಗಟ್ಟಿದ್ದರೆ ದೊಡ್ಡ ಸಂಘಟನೆಗಳನ್ನು ಕಟ್ಟುವುದರ ಜೊತೆಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ ಎಂಬುದಕ್ಕೆ ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸಮರ್ಥ ಕನ್ನಡಿಗರು ಸಂಸ್ಥೆಯೇ ಸಾಕ್ಷಿಯಾಗಿದೆ ಎಂದರು. ಮನೆಯ ಜವಾಬ್ದಾರಿಗಳ ನಡುವೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ. ಮಕ್ಕಳಿಗೆ ವೇದಿಕೆ ಕಲ್ಪಿಸುವ ಹಾಗೂ ಮಹಿಳೆಯರಲ್ಲಿ ಉತ್ಸಾಹ ತುಂಬುವ ಸಂಸ್ಥೆಯ ಕಾರ್ಯ ಮೆಚ್ಚುವಂತದ್ದು. ಎಷ್ಟೇ ಅಡೆತಡೆಗಳು ಎದುರಾದರೂ ಎದೆಗುಂದದೆ ಸಂಸ್ಥೆಯನ್ನು ಮುನ್ನಡೆಸಬೇಕು. ಒಳ್ಳೆಯ ಮನಸ್ಸಿನವರು ಸದಾ ಬೆಂಬಲಕ್ಕೆ ಇರುತ್ತಾರೆ ಎಂದು ಶುಭ ಹಾರೈಸಿದರು. ಕೃಷಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್‌ನಲ್ಲಿ ಸ್ವರ್ಣಪದಕ ಪಡೆದಿರುವ, ಪ್ರಸ್ತುತ ವಕೀಲರಾಗಿರುವ ಡಾ. ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ಮಹಿಳೆಯರೇ ಕಟ್ಟಿ ಬೆಳೆಸಿರುವ ಸಂಸ್ಥೆ ಸಮರ್ಥವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅದರ ಹೆಸರಿನಲ್ಲಿರುವ ‘ಸಮರ್ಥ’ ಪದಕ್ಕೆ ಅನ್ವರ್ಥವಾಗಿದೆ ಎಂದು ಶ್ಲಾಘಿಸಿದರು. ಸಮರ್ಥ ಕನ್ನಡಿಗರು ರಾಜ್ಯ ಘಟಕದ ಪ್ರಧಾನ ಸಂಚಾಲಕ ಆನಂದ ದೆಗ್ಗನಹಳ್ಳಿ ಮಾತನಾಡಿ, ಸಮಾನ ಮನಸ್ಕರು ಸೇರಿ ಕಟ್ಟಿಕೊಂಡಿರುವ ಸಂಸ್ಥೆಯು ಸಾಹಿತ್ಯಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು. ಕನ್ನಡ ಹಬ್ಬ ಎಲ್ಲರ ಪಾಲಿಗೂ ನಿಜವಾದ ಹಬ್ಬವಾಗಿದೆ. ಮಕ್ಕಳ ಮತ್ತು ಮಹಿಳೆಯರ ಪ್ರತಿಭೆ ಅನಾವರಣಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಮಾತೃಭಾಷೆಯನ್ನು ಬೆಳೆಸುತ್ತಾ ಎಲ್ಲರೂ ಬೆಳೆಯಬೇಕು ಎಂಬುದು ಸಂಸ್ಥೆಯ ಆಶಯವಾಗಿದೆ. ಮುಂದಿನ ದಿನಗಳಲ್ಲಿ ಪುಸ್ತಕ ಮನೆ ಆರಂಭಿಸಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಯನ್ನು ಪ್ರಾರಂಭಿಸುವ ಯೋಜನೆಯೂ ಇದೆ ಎಂದು ತಿಳಿಸಿದರು. ಮಡಿಕೇರಿಯ ಮನೋವೈದ್ಯ ಡಾ. ಸತೀಶ್ ಅವರು ಮಕ್ಕಳ ಹಾಗೂ ಮಹಿಳೆಯರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿರುವ ಸಂಸ್ಥೆಯ ಕಾರ್ಯವನ್ನು ಮೆಚ್ಚಿ ಶುಭ ಹಾರೈಸಿದರು. *ಮಕ್ಕಳ ಹಾಗೂ ಮಹಿಳೆಯರ ಪ್ರತಿಭೆ ಅನಾವರಣ* ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಛದ್ಮವೇಷ, ಸಮೂಹಗಾಯನ, ಚಿತ್ರಕಲೆ, ಜನಪದಗೀತೆ, ಜನಪದ ನೃತ್ಯ ಹಾಗೂ ಭಕ್ತಿಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಮ್ಯಾ ಮೂರ್ನಾಡು ಶಿಕ್ಷಕಿ ಹಾಗೂ ಸಾಹಿತಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ 13 ಆಹ್ವಾನಿತ ಕವಿಗಳು ಭಾಗವಹಿಸಿದ್ದರು. ರಂಜಿತ್ ಕವಲಪಾರ ಅವರು ಕವಿಗೋಷ್ಠಿಯನ್ನು ನಿರೂಪಿಸಿದರು. ಭಾಗವಹಿಸಿದ ಎಲ್ಲ ಕವಿಗಳನ್ನು ಸಂಸ್ಥೆಯ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. *ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ* ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಯೋಗ ಕ್ಷೇತ್ರದಲ್ಲಿ ಮಹೇಶ್, ವೈದ್ಯಕೀಯ ಕ್ಷೇತ್ರದಲ್ಲಿ ಎಸ್.ವಿ. ನರಸಿಂಹನ್, ಸಂಘಟನಾ ಕ್ಷೇತ್ರದಲ್ಲಿ ಸವಿತಾ ಭಟ್, ಸಮಾಜಸೇವೆಯಲ್ಲಿ ಚೋಕಂಡ ಸಂಜು ಸುಬ್ಬಯ್ಯ, ಮಾಧ್ಯಮ ಕ್ಷೇತ್ರದಲ್ಲಿ ರಂಗಸ್ವಾಮಿ, ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರತಿಕುಮಾರಿ, ಹೈನುಗಾರಿಕೆ, ಕೃಷಿ ಮತ್ತು ಕಾನೂನು ಕ್ಷೇತ್ರದಲ್ಲಿ ಲಂಕೇಶ್ (ಚೆಲುವರಾಜು) ಹಾಗೂ ನಗರಸಭೆಯ ದಫೇದಾರ್ ರಂಗಪ್ಪ ಎಚ್.ಡಿ. ಅವರನ್ನು ಗೌರವಿಸಲಾಯಿತು. ಪ್ರಜ್ಞಾ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಥೆಯ ಸಂಚಾಲಕಿ ಸೌಮ್ಯ ಸಂತೋಷ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ವಿಭಾಗದ ಛದ್ಮವೇಷ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳನ್ನು ಕುಮಾರ ಸಮನ್ಯು, ಕುಮಾರಿ ಮಿನುಗು ಹಾಗೂ ಕುಮಾರಿ ಬಿ.ಎಂ. ಯಶಿಕಾ ನಿರೂಪಿಸಿದರು. ಸಂಸ್ಥೆಯ ಪ್ರಧಾನ ಸಂಚಾಲಕಿ ಕೆ. ಜಯಲಕ್ಷ್ಮಿ ಸ್ವಾಗತಿಸಿದರು. ಅಂಬಿಕಾ ವಂದಿಸಿದರು. ಸಂಸ್ಥೆಯ ಸಂಚಾಲಕಿಯರಾದ ದಿವ್ಯ ಸತೀಶ್ ಹಾಗೂ ಶ್ರೀಲತಾ ಬಿ.ಡಿ. ಕಾರ್ಯಕ್ರಮ ನಿರೂಪಿಸಿದರು. ಮಕ್ಕಳು ಮತ್ತು ಮಹಿಳೆಯರ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಸಮರ್ಥ ಕನ್ನಡಿಗರು ಸಂಸ್ಥೆ ತನ್ನ ನಿರಂತರ ಸೇವೆಯನ್ನು ಮುಂದುವರಿಸಿದೆ.

Follow us Follow us
Share. WhatsApp Facebook Twitter Email Telegram Copy Link

Related Posts

ಯಾಕುಬ್ ಅವರಿಗೆ ಆದ ಅನ್ಯಾಯ ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಅಸ್ತಿತ್ವ ಮತ್ತು ಸ್ವಾಭಿಮಾನದ ಪ್ರಶ್ನೆ : ನಿಷ್ಠಾವಂತ ಮುಸ್ಲಿಂ ನಾಯಕರನ್ನು ಕಡೆಗಣಿಸುವ ರಾಜಕೀಯ ಸಂಸ್ಕೃತಿಗೆ ಅಂತ್ಯ ಯಾವಾಗ? : ಎಂ.ವೈ. ಅಬ್ದುಲ್ ಹಫೀಲ್ ಸಾದಿ ಕೊಳಕೇರಿ ಅಸಮಾಧಾನ

ನವೆಂಬರ್ 23, 2026

ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳ ಯೋಜನೆಯಿಂದ ರೂ. 2 ಲಕ್ಷ ನೆರವು : ಚೆಕ್ ವಿತರಣೆ

ನವೆಂಬರ್ 23, 2026

ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮ ಬಗ್ಗೆ ಎಚ್ಚರಿಕೆ ವಹಿಸಿ: ಮಾರುತಿ ಎಸ್.ಬಾಗಡೆ

ನವೆಂಬರ್ 23, 2026

ಯಾಕುಬ್ ಅವರಿಗೆ ಆದ ಅನ್ಯಾಯ ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಅಸ್ತಿತ್ವ ಮತ್ತು ಸ್ವಾಭಿಮಾನದ ಪ್ರಶ್ನೆ : ನಿಷ್ಠಾವಂತ ಮುಸ್ಲಿಂ ನಾಯಕರನ್ನು ಕಡೆಗಣಿಸುವ ರಾಜಕೀಯ ಸಂಸ್ಕೃತಿಗೆ ಅಂತ್ಯ ಯಾವಾಗ? : ಎಂ.ವೈ. ಅಬ್ದುಲ್ ಹಫೀಲ್ ಸಾದಿ ಕೊಳಕೇರಿ ಅಸಮಾಧಾನ

ನವೆಂಬರ್ 23, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ನ.23 : ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಅವರಿಗೆ ಆಗಿರುವ ಅನ್ಯಾಯ ಕೇವಲ ಒಬ್ಬ ನಾಯಕನಿಗೆ ಆಗಿರುವ…

ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳ ಯೋಜನೆಯಿಂದ ರೂ. 2 ಲಕ್ಷ ನೆರವು : ಚೆಕ್ ವಿತರಣೆ

ನವೆಂಬರ್ 23, 2026

ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮ ಬಗ್ಗೆ ಎಚ್ಚರಿಕೆ ವಹಿಸಿ: ಮಾರುತಿ ಎಸ್.ಬಾಗಡೆ

ನವೆಂಬರ್ 23, 2026

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಸಾಧನೆ

ನವೆಂಬರ್ 23, 2026

ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎ.ಐ ತಂತ್ರಜ್ಞಾನದ ಬಲ: ತುರ್ತು ಚಿಕಿತ್ಸೆಗೆ 2.50 ಲಕ್ಷ ರೂ. ವರೆಗೆ ನೆರವು : ಡಾ.ಶಾಲಿನಿ ರಜನೀಶ್

ನವೆಂಬರ್ 23, 2026

ಅಂಬೇಡ್ಕರ್ ಪರಿನಿರ್ವಾಣ ದಿನ : ಡಿ.5 ರಂದು ಮಡಿಕೇರಿಯಲ್ಲಿ ತಾಲೂಕುಮಟ್ಟದ ರಸಪ್ರಶ್ನೆ ಸ್ಪರ್ಧೆ

ನವೆಂಬರ್ 23, 2026

ನ.26 ರಂದು ಸಿಎನ್‌ಸಿಯಿಂದ 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಆಚರಣೆ : ಡಾ.ಎಂ.ಎ.ಕಲಾo, ನ್ಯಾಯವಾದಿ ಕಿರಣ್ ನಾರಾಯಣ್, ಡಾ.ಮಾತಂಡ ಅಯ್ಯಪ್ಪ, ಪ್ರೊ.ಪಿ.ಎಚ್.ಮೊಹಮ್ಮದ್ ಭಾಗಿ

ನವೆಂಬರ್ 23, 2026

ಹಿರಿಯ ಪತ್ರಕರ್ತ ಶ್ರೀಧರ್ ಹೂವಲ್ಲಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ : ನ.25ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ

ನವೆಂಬರ್ 23, 2026

ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡದ ಕಾಂಗ್ರೆಸ್ ವಿರುದ್ಧ ಅಸಮಾಧಾನ : ಕೆ.ಎ.ಯಾಕುಬ್ ಬೆಂಬಲಕ್ಕೆ ನಿಂತ ಸುನ್ನಿ ಮಹಲ್ ಗಳ ಒಕ್ಕೂಟ : ನೋಟಾದ ಮೂಲಕ ಕಾಂಗ್ರೆಸ್ ಗೆ ತಕ್ಕ ಪಾಠ

ನವೆಂಬರ್ 23, 2026

ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧನೆ ಸಾಧ್ಯ; ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಆದ್ಯತೆ – ಶಾಸಕ ಡಾ. ಮಂಥರ್ ಗೌಡ

ನವೆಂಬರ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.