ಲೇಖಕ: admin

ಮಡಿಕೇರಿ ಸೆ.12 NEWS DESK  : ಇಂಚರ ಶ್ರೀ ಶಕ್ತಿ ಸಂಘದ 10ನೇ ವಾರ್ಷಿಕೋತ್ಸವದ ಪ್ರಯುಕ್ತ  ನಗರದ ರಾಘವೇಂದ್ರ ದೇವಾಲಯದ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸ್ಪರ್ಧೆಯ ಮೂಲಕ ವಿನೂತನವಾಗಿ ಪೋಷಣ್‌ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಾಂಡ ಸವಿತಾ ಕೀರ್ತನ್ ಉದ್ಘಾಟಿಸಿ ಮಾತಾಡಿ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸಿದರು. ಪೌಷ್ಟಿಕ ಆಹಾರ ನಮ್ಮ ದೈನಂದಿನ ಜೀವನದಲ್ಲಿ ತುಂಬಾ ಮುಖ್ಯವಾಗಿದೆ.ಆರೋಗ್ಯಕರ ಜೀವನ ನಡೆಸಲು ಇಂತಹ ಆಹಾರ ತುಂಬಾ ಅವಶ್ಯಕ ಎಂದರು. ಕಾರ್ಯಕ್ರಮದಲ್ಲಿ ಇಂಚರ ಶ್ರೀ ಶಕ್ತಿ ಸಂಘದ ಪದಾಧಿಕಾರಿಗಳು, ಸಹಾಯಕಿ ಅನಿತಾ ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆ ಗೀತಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಮಾತೃ ವಂದನ ನೊಂದಣಿ ಕಾರ್ಯಕ್ರಮ ನಡೆಯಿತು.

Read More

ಮಡಿಕೇರಿ ಸೆ.12 NEWS DESK : ದಿ. ವಿ.ಟಿ.ಶ್ರೀನಿವಾಸ್ ಸಂಗೀತ ರಂಗದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಕಲಾವಿದರಾಗಿದ್ದು, ತಬಲ ಕ್ಯಾಸಿಯೋ ವಾದನೆಗಳಲ್ಲಿ ಪರಿಣಿತರಾಗಿದ್ದರು ಯಾವುದೇ ರಾಗವನ್ನು ನಿಮಿಷ ಮಾತ್ರದಲ್ಲಿ ಕ್ಯಾಸಿಯೋದಲ್ಲಿ ಅಳವಡಿಸುವ ಕಲೆ ಹೊಂದಿದ್ದರು ಎಂದು ನೀನಾದ ಸಂಗೀತ ನೃತ್ಯ ಸಂಸ್ಥೆಯ ಅಧ್ಯಕ್ಷ ಚೇಂದಿರ ನಿರ್ಮಲಾ ಬೋಪಣ್ಣ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಮತ್ತು ಗೋಣಿಕೊಪ್ಪಲು ಪ್ರೌಢಶಾಲೆಯ  ಸಂಯುಕ್ತಾಶ್ರಯದಲ್ಲಿ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿದ ಕಲಾವಿದ ದಿ.ಶ್ರೀನಿವಾಸ್ ನೆನಪು ನುಡಿ ಮತ್ತು ಗಾನ ನಮನ ಕಾರ್ಯಕ್ರಮವನ್ನು ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನ್ನು ಎನ್ನುವ ಗಾಯನದೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಅಜಾತಶತ್ರುವಾಗಿದ್ದ ಅವರು ಸಾವಿರಾರು ಸಂಗೀತ ಮತ್ತು ನೃತ್ಯ ಶಿಷ್ಯರನ್ನು ಹೊಂದಿದ್ದು ಅವರ ನಿಧನವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ…

Read More

ಬೆಂಗಳೂರು ಸೆ.12 NEWS DESK : ಬೆಂಗಳೂರು ನಗರದ ಜನತೆಯ ಅನುಕೂಲಕ್ಕೆ ಮೊದಲ ಹಂತದ 100 ನೂತನ ಬಿಎಂಟಿಸಿ ಬಸ್ ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಒಟ್ಟು 840 ನೂತನ‌ಬಸ್‌ಗಳು ಬಿಎಂಟಿಸಿ ಸೇರಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್ಸ್ ಬಳಿ ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ನೂತನ ಬಿಎಂಟಿಸಿ ಬಸ್‌ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. “ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹೆಚ್ಚುತ್ತಿರುವ ಶ್ರಮಿಕ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನೂತನ‌ಬಸ್‌ಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸುವ ಜೊತೆಗೆ ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀ‌ನ್‌ಗಳನ್ನು ಆರಂಭಿಸಿದ್ದಲ್ಲದೆ ನೂತನವಾಗಿ ಇನ್ನಷ್ಟು ಕ್ಯಾಂಟೀನ್‌ಗಳನ್ನು ಆರಂಭಿಸುತ್ತಿದ್ದೇವೆ” ಎಂದರು. “ಬಡವರ ಮತ್ತು ಮಧ್ಯಮ ವರ್ಗದ ವಿರೋಧಿಯಾಗಿರುವ ಬಿಜೆಪಿ ಈ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಈ ಗ್ಯಾರಂಟಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಆಗಲಿವೆ”. “ಗೃಹಲಕ್ಷ್ಮಿ ಹಣದಿಂದ ಸಾವಿರಾರು ಕುಟುಂಬಗಳು ನಾನಾ ರೀತಿಯ ಅನುಕೂಲಗಳನ್ನು ಒದಗಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿದಿನ ಮಾಧ್ಯಮಗಳು…

Read More

NEWS DESK :: ದೇವರ ನಾಡೆಂದು ಪ್ರಸಿದ್ಧವಾಗಿರುವ ಕೇರಳ ರಾಜ್ಯದ ಪ್ರಸಿದ್ಧ ಹಬ್ಬ ಓಣಂ. ಇದನ್ನು ಪುರಾತನ ಕಾಲದಿಂದಲ್ಲೂ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತದೆ. ಇದು ಕೇರಳದವರ ಪಾಲಿಗೆ ನಾಡ ಹಬ್ಬವಿದ್ದಂತೆ ಎನ್ನಬಹುದು. ಕೃಷಿ ಹಿನ್ನಲೆಯಲ್ಲಿ ಆಚರಿಸುವ ಈ ಹಬ್ಬವು ಮಳೆಗಾಳಿಗೆ ದುಡಿದು ಬೆಂಡದಾ ಜೀವಗಳಿಗೆ ಸಂತಸ ಸಂಭ್ರಮವನ್ನು ಉಂಟುಮಾಡುವ ಹಬ್ಬ. ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ತಮ್ಮ ಕೆಲಸಗಳನ್ನೆಲ್ಲ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕೂರುವ ಸಮಯದಲ್ಲಿ ಬರುವ ಈ ಹಬ್ಬ ಶುಭ ಸೂಚನೆಯ ಸಂಕೇತವಾಗಿದೆ. 10 ದಿನಗಳ ಕಾಲ ನಡೆಯುವ ಓಣಂ ಹಬ್ಬವನ್ನು ಮಲೆಯಾಳಂನ ಆಯಾ ಮಾಸದಲ್ಲಿ ಅಂದರೆ ಸಿಂಹಮಾಸದಲ್ಲಿ ಅಥವಾ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟಂಬರ್ ತಿಂಗಳಿನಲ್ಲಿ ಆಚರಿಸುತ್ತಾರೆ. ಈ ಬಾರಿ ಓಣಂ ಹಬ್ಬವು ಸೆ.15 ರಂದು ಆಚರಣೆ ಮಾಡಲಾಗುತ್ತದೆ. ಹತ್ತು ದಿನಗಳ ಕಾಲ ಆತ್ತಂನಿಂದ ಪ್ರಾರಂಭಗೊಂಡು ಚಿತ್ತಿರ, ಚೂದಿ, ವಿಶಾಖಂ, ಆನಿಯ, ತ್ರಿಕೇಟಾ, ಮೂಲಂ, ಪೇರಾಡಂ, ಉತ್ರಾಡಂ ಮತ್ತು 10ನೇ ದಿನ ತಿರುಓಣಂ…

Read More

ಮೂರ್ನಾಡು ಸೆ.12 NEWS DESK : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕೋಡಂಬೂರಿನ ಜ್ಞಾನಜ್ಯೋತಿ ಎಜುಕೇಷಟಿನ್ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಮಡಿಕೇರಿ ತಾಲ್ಲೂಕು ಮಟ್ಟದ ಅಂತರ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ, ಬಾಲಕಿಯರ ಕ್ರೀಡಾಕೂಟವು ಮೂರ್ನಾಡು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು. ಮಡಿಕೇರಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಸಮಾರಂಭವನ್ನು ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಕುಶನ್ ರೈ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳಲ್ಲಿ ಕ್ರೀಡಾ ಮನೋಭಾವ ಮತ್ತು ಶಿಸ್ತು ಇರಬೇಕು ಎಂದು ಹೇಳಿದರು. ಜ್ಞಾನಜ್ಯೋತಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ಕ್ರೀಡಾ ಧ್ವಜಾರೋಹಣ ನೇರವೇರಿಸಿ, ಮಾತನಾಡಿ, ಓದು ಎಷ್ಟು ಮುಖ್ಯವೊ ಅಷ್ಟೆ ಕ್ರೀಡೆಯು ವಿದ್ಯಾರ್ಥಿಗಳಿಗೆ ಮುಖ್ಯವಾಗಿದೆ. ಕ್ರೀಡೆಯಲ್ಲಿಯೂ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜ್ಞಾನಜ್ಯೋತಿ ಎಜುಕೇಷನ್ ಸೊಸೈಟಿಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶೀಲಾ ಅಬ್ದುಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಬಿ.ಸಿ.ದೊಡ್ಡೇಗೌಡ ಮತ್ತು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್.ಗಾಯಿತ್ರಿ,…

Read More

ಮಡಿಕೇರಿ ಸೆ.12 NEWS DESK : ಕಾಫಿ ಫಸಲನ್ನು ಉತ್ತಮ ಧಾರಣೆಗೆ ಮಾರಾಟ ಮಾಡಬೇಕೆನ್ನುವ ಬೆಳೆಗಾರನ ನಿರೀಕ್ಷೆಗಳಿಗೆ “ಔಟ್ ಟರ್ನ್” ಹೆಸರಿನಲ್ಲಿ ವಂಚನೆಯಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಧಾರಣೆ ಲಭ್ಯವಿದ್ದರು ಖರೀದಿದಾರ ವರ್ತಕರಿಂದ ಬೆಳೆಗಾರರಿಗೆ ಯೋಗ್ಯ ಬೆಲೆ ದೊರೆಯುತ್ತಿಲ್ಲವೆಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಲಹೆಗಾರ ಸಿ.ಎನ್.ಬೋಸ್ ವಿಶ್ವನಾಥ್ ಅತಿವೃಷ್ಟಿಯಿಂದ ಫಸಲು ನೆಲಕಚ್ಚುತ್ತಿದೆ, ಕಾರ್ಮಿಕರ ಸಂಕಷ್ಟಗಳಿಗೆ ಪರಿಹಾರ ದೊರೆಯುತ್ತಿಲ್ಲ. ಬೆಳೆಗಾರರು ಬೆಳೆದ ಕಾಫಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಪರಿಸ್ಥಿತಿ ಹೀಗೆ ಮುಂದುವರಿದರೆ ಕಾಫಿ ಕೃಷಿ ಅವನತಿಯ ಹಾದಿಯನ್ನು ಹಿಡಿಯುವ ಆತಂಕವಿದೆ ಎಂದರು.  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔಟ್ ಟರ್ನ್ ಮೇಲೆ ಪಾರ್ಚ್‍ಮೆಂಟ್ ಕಾಫಿ ಕಿಲೋ ಒಂದಕ್ಕೆ 400 ರಿಂದ 450 ರೂ,.ಗಳಿದ್ದ ಸಂದರ್ಭ, ಸ್ಥಳೀಯ ಖರೀದಿದಾರ ವರ್ತಕರು ಉತ್ತಮ ಬೆಲೆಗೆ ಬೆಳೆಗಾರರಿಂದ ಕಾಫಿ ಖರೀದಿಗೆ ಮುಂದಾಗುತ್ತಿಲ್ಲ. ಬದಲಾಗಿ ಬೆಳೆಗಾರರಿಂದ ಕಾಫಿ ಲಭ್ಯವಾಗುತ್ತಿಲ್ಲವೆನ್ನುವ ಸಬೂಬು ನೀಡಿ, ಧಾರಣೆ 350 ರೂ.ಗಳಿಗೆ ಕುಸಿಯುವ ಹಂತದಲ್ಲಿ ಕಾಫಿ ಖರೀದಿ ಮಾಡುವ…

Read More

ಮಡಿಕೇರಿ ಸೆ.12 NEWS DESK : ಸಂಕಷ್ಟ ಸವಾಲುಗಳ ಮಧ್ಯೆ ಜನರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿರುವ ಕೊಡಗಿನ ಸಹಕಾರ ಸಂಘಗಳ ಕಾರ್ಯವೈಖರಿ ಶ್ಲಾಘನೀಯ. ಭಾರತದಲ್ಲಿ ಹುಟ್ಟಿಕೊಂಡ ಅತ್ಯದ್ಭುತ ವ್ಯವಸ್ಥೆ ಸಹಕಾರಿ ಸಂಘಗಳು ಜನರಿಗೆ ಕಷ್ಟಕಾಲದಲ್ಲಿ ಉತ್ತಮವಾದ ಸೇವೆಯನ್ನು ನೀಡುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಬದುಕು ನಡೆಸಲು ಸಾಧ್ಯವಾಗಿದೆ ಎಂದು ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಭಾ ಭವನ ಮತ್ತು ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕಲ್ಪನೆ ಸಾಕಾರಗೊಳ್ಳಲು ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ಇನ್ನು ಕೆಲವು ತಿಂಗಳಲ್ಲಿ ಮಡಿಕೇರಿಯಲ್ಲಿ ಸಂಸದರ ಕಚೇರಿ ತೆರೆಯಲಿದ್ದು ಕಾಫಿ, ಅಡಿಕೆ ಹಾಗು ಇತರ ಕೃಷಿ ಬೆಳೆಗಳ ಇತರ ಯಾವುದೇ ಸಮಸ್ಯೆಯನ್ನು ತಿಳಿಸಲು ಅವಕಾಶ ಇರುತ್ತದೆ ಎಂದರು. ಮೈಸೂರು ಕುಶಾಲನಗರ ಹೆದ್ದಾರಿ ಮತ್ತು ರೈಲೈ ಕಾಮಗಾರಿ, ಕೊಡಗು ವಿಶ್ವವಿದ್ಯಾನಿಲಯದ ಕೆಲಸಗಳು ಮುಂದಿನ…

Read More

ಸುಂಟಿಕೊಪ್ಪ ಸೆ.12 NEWS DESK : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಸುಂಟಿಕೊಪ್ಪದ ರಾಮಮಂದಿರದಲ್ಲಿ ನಡೆಯುತ್ತಿರುವ 60ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಆದಿ ಚುಂಚನಗಿರಿ ಮಠದ ಸಂಗೀತ ಶಿಕ್ಷಕ ರವಿ ಭೂತನಕಾಡು ಅವರ ಗೀತಗಾಯನ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ಕಾಣದ ಕಡಲಿಗೆ ಹಂಬಲಿಸಿದೆ ಮನ’ ‘ಕೋಡಗನ ಕೋಳಿ ನುಂಗಿತ್ತ”ಸ್ವಾಮಿ ಅಯ್ಯಪ್ಪ’ ‘ಮನದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಸೇರಿದಂತೆ ದಾಸರ ಗೀತೆಗಳು, ಭಕ್ತಿಗೀತೆಗಳು, ಜಾನಪದ ಗೀತೆಗಳು, ಭಾವಗೀತೆಗಳ ಮೂಲಕ ರವಿ ಭೂತನಕಾಡು ಭಕ್ತರನ್ನು ಸಂಗೀತದ ಮೂಲಕ ರಂಜಿಸಿದರು. ಇದರೊಂದಿಗೆ ಧನಂಜಯ ಅಗೋಳಿಕಜೆ ಅವರು ನಡೆಸಿಕೊಟ್ಟ ರಾಷ್ಟ್ರ ವಿಚಾರ ಮಂಥನ ಎಲ್ಲರ ಮನಸೂರೆಗೊಂಡಿತು. ರಾತ್ರಿ ಮಹಾಪೂಜೆ, ವಿಶೇಷ ಪೂಜೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.

Read More

ಮಡಿಕೇರಿ ಸೆ.12 NEWS DESK : ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸೆ.13 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಲಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

Read More

ಮಡಿಕೇರಿ ಸೆ.12 NEWS DESK : ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ- ಎಚ್‍ಐವಿ ಏಡ್ಸ್ ಅರಿವು ಮಾಸಾಚರಣೆ- 2024ರ ಅಂಗವಾಗಿ ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಡಿಕೇರಿಯ ಕೇಂದ್ರೀಯ ವಿದ್ಯಾಲಯದ ಕೆ ಸರ್ವದ್ ಶೆಣೈ ಮತ್ತು ನಹುಷ ಭೂಷಣ್ ನೌಶ ಭೂಷಣ್ ತಂಡ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಈ ತಂಡ ಪ್ರಥಮ ಸ್ಥಾನ ಗಳಿಸಿ ಟ್ರೋಫಿ ಹಾಗೂ ರೂ.6 ಸಾವಿರ ನಗದು ಪುರಸ್ಕಾರವನ್ನು ಪಡೆದುಕೊಂಡಿತು. ಕೂಡಿಗೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಸಿಂಜನ್ ಕೆ.ಜಿ ಹಾಗೂ ಆದಿತ್ಯ ಬಿ.ಎಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕುಶಾಲನಗರದ ಫಾತಿಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಜೆಸಿಕಾ ಮನೋಜ್ ಮತ್ತು ಜೋಮಾ ಪಿ. ಜೋಸೆಫ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಾದಾಪುರದ…

Read More