ಕುಶಾಲನಗರ ಮಾ.27 NEWS DESK : ಕುಶಾಲನಗರ ಪಟ್ಟಣದ ವಾಣಿಜ್ಯ ಸಂಕೀರ್ಣ ಈ ಸಾಲಿನ ನವೆಂಬರ್ ಒಳಗೆ ಲೋಕಾರ್ಪಣೆ ಗೊಳ್ಳಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ. ಅವರು ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಎಸ್ಎಫ್ ಸಿ ವಿಶೇಷ ಅನುದಾನ 2 ಕೋಟಿ, ಕೆ ಆರ್ ಐ ಡಿ ಎಲ್ ಅನುದಾನ 1.5 ಕೋಟಿ ಮತ್ತು ಅಲ್ಪಸಂಖ್ಯಾತ ವಿಶೇಷ ಅನುದಾನ ರು.35 ಲಕ್ಷದಲ್ಲಿ ಕುಶಾಲನಗರ ಪಟ್ಟಣ ಬಡಾವಣೆಗಳು ಹಾಗೂ ಗೊಂದಿ ಬಸವನಹಳ್ಳಿ ಗ್ರಾಮದ ಮುಖ್ಯರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇದುವರೆಗೆ ತಮ್ಮ ಕ್ಷೇತ್ರಕ್ಕೆ ಸುಮಾರು 25 ಕೋಟಿ ರೂಗಳ ಅನುದಾನ ದೊರೆತಿದ್ದು ಅದರಲ್ಲಿ 19 ಕೋಟಿ ರೂಗಳ ಕಾಮಗಾರಿ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿದೆ. ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಪಟ್ಟಣಗಳಲ್ಲಿ ಉಳಿದ ಅನುದಾನಗಳ ಮೂಲಕ ಅಗತ್ಯ ಮೂಲಭೂತ ಸೌಲಭ್ಯಗಳ ಕಾಮಗಾರಿಗಳು ಚಾಲನೆಯಲ್ಲಿದೆ ಎಂದು ಹೇಳಿದರು. ಗುತ್ತಿಗೆದಾರರು ಅವಧಿಯ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು, ಜನರು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ…
ಲೇಖಕ: admin
ಮಡಿಕೇರಿ ಮಾ.27 NEWS DESK : ಐತಿಹಾಸಿಕ ಹಿನ್ನಲೆಯನ್ನು ಒಳಗೊಂಡ ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಪುರಾತನ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವ ವಿಶೇಷ ಪೂಜಾ ಕಾರ್ಯ, ತೆರೆಗಳ ದರ್ಶನ, ದೇವರ ಅವಭೃತ ಸ್ನಾನ ಮತ್ತು ನೃತ್ಯ ಬಲಿಯೊಂದಿಗೆ ಶ್ರದ್ಧಾ ಭಕ್ತಿಯಿಂದ ಬುಧವಾರ ಸಂಪನ್ನಗೊಂಡಿತು. ಇದೇ ಮಾ.22 ರಂದು ಮಹಾಗಣಪತಿ ಹೋಮದೊಂದಿಗೆ ಆರಂಭಗೊಂಡ ಉತ್ಸವದಲ್ಲಿ ತಕ್ಕರ ಮನೆಯಿಂದ ಭಂಡಾರ ತರುವದು, ಅಂದಿ ಬೆಳಕು, ದೇವರ ನೃತ್ಯ ಬಲಿ, ಶ್ರೀ ಪರದೇವರ ಕೋಟದಲ್ಲಿ ಕೊಟ್ಟಿ ಪಾಡುವ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೇವತಾ ಕಾರ್ಯಗಳು ತಂತ್ರಿಗಳಾದ ಉದಯ ಕುಮಾರ್ ಹುಲಿತಾಳ ಅವರ ನೇತೃತ್ವದಲ್ಲಿ, ಕುಮಾರ್, ಪ್ರಶಾಂತ್ ಬಟ್ಟೆಮಕ್ಕಿ ಅವರುಗಳ ಸಹಕಾರದೊಂದಿಗೆ ನಡೆಯಿತು. ಉತ್ಸವದ ನಾಲ್ಕನೇ ದಿನವಾದ ಮಂಗಳವಾರದ ದೊಡ್ಡ ಹಬ್ಬದಂದು ಬೆಳಗ್ಗೆ ದೇವರ ನೃತ್ಯ ಬಲಿ, ಶ್ರೀ ಪರದೇವರ ಕೋಟದಿಂದ ದೇವರ ಮುಡಿ ಮಲಿಯಪಟ್ಟಿಗೆ ಬರುವುದು, ಶೀ ಅಯ್ಯಪ್ಪ ದೇವರ ಭಂಡಾರ ತರುವುದು, ಎತ್ತು ಪೋರಾಟ, ಹಬ್ಬದ ಕಟ್ಟು ಮುರಿಯುವುದು,…
*ಹಳೆಯ ಕೆರೆ ದುರಸ್ತಿ ಮಾಡಿಕೊಡಲಾಗುವುದು*
ಮಡಿಕೇರಿ NEWS DESK ಮಾ.26 : ಕೊಡಗಿನ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಮಳೆೆಯಾಗುತ್ತಿದೆ. ಬುಧವಾರ ಸುರಿದ ಗಾಳಿ ಮಳೆಗೆ ಮಡಿಕೇರಿ ತಾಲ್ಲೂಕಿನ ಪಾರಾಣೆ ಗ್ರಾಮದಲ್ಲಿ ಸುಮಾರು 200 ವರ್ಷಗಳಷ್ಟು ಹಳೆಯದಾದ ಬೃಹತ್ ಮರ ರಸ್ತೆಗಡ್ಡ ಉರುಳಿ ಬಿದ್ದ ಘಟನೆ ನಡೆದಿದೆ. ಮಧ್ಯಾಹ್ನ 2.30 ಗಂಟೆಗೆ ಆರಂಭಗೊಂಡ ಭಾರೀ ಗಾಳಿ ಮಳೆಗೆ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಳಿ ಭಾರೀ ಗಾತ್ರದ ಮರ ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ರಸ್ತೆಗಡ್ಡಲಾಗಿ ಬಿದ್ದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಜಿಲ್ಲೆಯ ಇತರ ಭಾಗಗಳಲ್ಲಿ ಕೂಡ ಗುಡುಗು ಸಹಿತ ಮಳೆಯಾಗಿದೆ. ಕಾಫಿ ಕೊಯ್ಲಿನ ಬಳಿಕ ಮುಂದಿನ ಸಾಲಿನ ಫಸಲಿಗೆ ಅತ್ಯಗತ್ಯವಾದ ಹೂಮಳೆಯನ್ನು ಬೆಳೆಗಾರರು ನಿರೀಕ್ಷಿಸಿದ್ದರು.
ಮಡಿಕೇರಿ NEWS DESK ಮಾ.26 : ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಮಡಿಕೇರಿ ನಗರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಬೆಳ್ಳಿ ಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ. ಹಾಕಿ ಪಂದ್ಯಾವಳಿ ನಡೆಯುವ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಕೊಡವ ಕುಟುಂಬಗಳ ದಾಖಲೆಯ 396 ತಂಡಗಳು ನೋಂದಾಯಿಸಿಕೊಂಡಿದ್ದು, ಮಡಿಕೇರಿಯ ಕೇಂದ್ರ ಸ್ಥಾನದಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಈ ಬಾರಿಯ ವಿಶೇಷ ಎಂದರು. ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ.5 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ 3 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ಸೆಮಿಫೈನಲ್‌ಗೆ ಬಂದ ಎರಡು ತಂಡಗಳಿಗೆ ತಲಾ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಪಂದ್ಯಾವಳಿಯ ಯಶಸ್ಸಿಗೆ ಸರ್ಕಾರದ ಸಂಪೂರ್ಣ ಸಹಕಾರ ಇದ್ದು, ಬೇಡಿಕೆಗಳನ್ನು ಈಡೇರಿಸುವ ಭರವಸೆ…
ಮಡಿಕೇರಿ ಮಾ.26 NEWS DESK : ನಗರದ ಪೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನ ಮೈದಾನದಲ್ಲಿ ಆಟಗಾರರಿಗೆ ಪ್ರಯೋಜನಕಾರಿಯಾಗಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ 1.80 ಲಕ್ಷ ರು. ವೆಚ್ಚದಲ್ಲಿ ನಿಮಿ೯ಸಲಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ನಗರದ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಕಾಲೇಜು ಮೈದಾನದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ರೋಟರಿ ಜಿಲ್ಲೆ 3181 ನ ಗವನ೯ರ್ ವಿಕ್ರಂದತ್ತ ಲೋಕಾಪ೯ಣೆಗೊಳಿಸಿದರು. ನಂತರ ಸಮಾರಂಭದಲ್ಲಿ ಮಾತನಾಡಿದ ವಿಕ್ರಂದತ್ತ, ಕೊಡಗು ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯು ಜನೋಪಯೋಗಿ ಕಾಯ೯ಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಂಡಿರುವುದು ಶ್ಲಾಘನೀಯ. ರೋಟರಿ ವುಡ್ಸ್ ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ ಎಂದು ಶ್ಲಾಘಿಸಿದರು. ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರು ಮಾತನಾಡಿ, 120 ವಷ೯ಗಳ ಸುಧೀಘ೯ ಇತಿಹಾಸವನ್ನು ಮನುಕುಲದ ಸೇವೆಯಲ್ಲಿ ಕಳೆದಿರುವ ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಲಕ್ಷಾಂತರ ಯೋಜನೆಗಳೊಂದಿಗೆ ಮಾನವ ಸೇವೆಗೆ ಮುಂದಾಗಿದೆ. ಕಾಯ೯ಪ್ಪ ಕಾಲೇಜಿನ ಕ್ರೀಡಾಪಟುಗಳಿಗೆ ಅಗತ್ಯವಾದ ಶುದ್ದ ಕುಡಿಯುವ…
ಮಡಿಕೇರಿ ಮಾ.26 NEWS DESK : ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರ ವಹಿಸಬೇಕು. ಕಾಲ ಕಾಲಕ್ಕೆ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸಬೇಕು. ಸಾರ್ವಜನಿಕರಿಂದ ದೂರು ಬರದಂತೆ ಎಚ್ಚರವಹಿಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ತಾಕೀತು ಮಾಡಿದ್ದಾರೆ. ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳ ಅಧಿಕಾರಿಗಳೊಂದಿಗೆ ಪ್ರಸಕ್ತ ಆರ್ಥಿಕ ವರ್ಷದ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ಪಡೆದು ಸಚಿವರು ಮಾತನಾಡಿದರು. ತಹಶೀಲ್ದಾರರು ಮತ್ತು ತಾ.ಪಂ.ಇಒಗಳು ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ ವಿಶೇಷ ಗಮನಹರಿಸಬೇಕು. ಜೊತೆಗೆ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಕುಂದುಕೊರತೆ ಆಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು. ನಾಗರಹೊಳೆಯಲ್ಲಿನ ಗಿರಿಜನ ಆಶ್ರಮ ಶಾಲೆಯಲ್ಲಿ ಮೂಲ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ಸರ್ಕಾರ ಹಲವು ಯೋಜನಾ ಕಾರ್ಯಕ್ರಮಗಳು ಜಾರಿಗೊಳಿಸಿದ್ದರೂ ಸಹ ಪರಿಪೂರ್ಣವಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಯವರು ಹಾಗೂ ಜಿಲ್ಲಾ…
ಮಡಿಕೇರಿ ಮಾ.26 NEWS DESK : ಕಾವೇರಿ ಕ್ಷೇತ್ರ ಭಾಗಮಂಡಲದಲ್ಲಿ ವಜ್ರಮಹೋತ್ಸವದ ಹೊಸ್ತಿಲಲ್ಲಿರುವ ಜೀರ್ಣೋದ್ಧಾರಗೊಂಡ ‘ಶ್ರೀ ರಾಮ ಮಂದಿರ’ದ ಪುನರ್ ಪ್ರತಿಷ್ಠೆ ಮತ್ತು ಲೋಕಾರ್ಪಣಾ ಕಾರ್ಯ ಮಾ.29 ರಿಂದ 31ರವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀ ರಾಮ ಮಂದಿರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ಜೋಯಪ್ಪ, ಶಿಥಿಲಾವಸ್ಥೆಯಲ್ಲಿದ್ದ ಶ್ರೀ ರಾಮ ಮಂದಿರವನ್ನು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿರುವುದಾಗಿ ಮಾಹಿತಿ ನೀಡಿದರು. 1948ರಲ್ಲಿ ದಾನಿಗಳಾದ ಶ್ರೀನಿವಾಸಯ್ಯ ಮತ್ತು ನರಸಿಂಹ ನಾಯಕ್ ಅವರು ಉದಾರವಾಗಿ ನೀಡಿದ 12 ಸೆಂಟ್ ಜಾಗದಲ್ಲಿ ನಿರ್ಮಿಸಲ್ಪಟ್ಟ ಶ್ರೀ ರಾಮ ಮಂದಿರ, 1952 ರಲ್ಲಿ ಉದ್ಘಾಟನೆಗೊಂಡಿತ್ತು. ಭಾಗಮಂಡಲ ವ್ಯಾಪ್ತಿಯ ಜನರ ಭಜನಾ ಕಾರ್ಯಗಳಿಗೆ ಮೀಸಲಾಗಿದ್ದ ಮಂದಿರ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಇದರ ಜೀಣೋದ್ಧಾರ ಕಾರ್ಯವನ್ನು 2017-18ನೇ ಸಾಲಿನಲ್ಲಿ ಕೈಗೆತ್ತಿಕೊಂಡಿದ್ದು, ಇದೀಗ ಪೂರ್ಣವಾಗಿದೆ. ಮಂದಿರದಲ್ಲಿ ನಿತ್ಯದ ಯಾವುದೇ ಪೂಜಾ ಕಾರ್ಯಗಳು ಇರುವುದಿಲ್ಲ. ಬದಲಾಗಿ ನಿರಂತರವಾಗಿ ವಾರಕ್ಕೊಮ್ಮೆಯಾದರು ಭಜನಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವ…
ಸುಂಟಿಕೊಪ್ಪ ಮಾ.26 NEWS DESK : ಬಾಳೆಕಾಡು ಚಾಮುಂಡೇಶ್ವರಿ ಮತ್ತು ಮುತ್ತಪ್ಪ ಸೇವಾ ಸಮಿತಿ ವತಿಯಿಂದ 60ನೇ ವರ್ಷದ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ವಾರ್ಷಿಕ ಮಹೋತ್ಸವದ ಶೋಭಯಾತ್ರೆ ನಡೆಯಿತು. ದೇವಾಲಯದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಪೈಂಗುತ್ತಿ ಪೂಜೆ, ಅಲಂಕಾರ ಪೂಜೆ ನಡೆಯಿತು. ಬಾಳೆಕಾಡುವಿನ ತೋಟದ ದೇವಾಲಯದಿಂದ ಕೇರಳದ 30 ಅಡಿ ಎತ್ತರದ ಬೃಹತ್ ವಿದ್ಯುತ್ ದೀಪ ಅಲಂಕೃತ ಆಕರ್ಷಣೀಯ ಮಂಟಪ ಮತ್ತು ವೈಭವಯುತ ಮಂಟಪದಲ್ಲಿ ಮುತ್ತಪ್ಪ, ತಿರುವಪ್ಪ ಉತ್ಸವ ಮೂರ್ತಿಯ ಭವ್ಯ ಮೆರವಣಿಯು ಬಾಳೆಕಾಡು ದೇವಾಲಯದಿಂದ ಸುಂಟಿಕೊಪ್ಪ ಪಟ್ಟಣದತ್ತ ಸಾಗಿತು. ವಾದ್ಯಮೇಳ, ಕೇರಳದ ಸಿಂಗಾರಿ ಮೇಳಕ್ಕೆ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಮಿತಿಯ ಸದಸ್ಯರು, ಸಮೂದಾಯ ಬಾಂಧವರು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದರು. ಮೆರವಣಿಗೆಯಲ್ಲಿ ಮುತ್ತಪ್ಪ ಮತ್ತು ತಿರುವಪ್ಪ ದೇವರ ಸ್ತಬ್ಥಚಿತ್ರ ಸೇರಿದಂತೆ ಮೂರು ಕಳಶದ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಸುಂಟಿಕೊಪ್ಪ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ಕಳಸ ಪೂಜೆ…
ಮಡಿಕೇರಿ ಮಾ.26 NEWS DESK : ಮಡಿಕೇರಿ ಎ.ಎಲ್.ಜಿ ಕ್ರೆಸೆಂಟ್ ಶಾಲೆಯ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ಅಧಿಕಾರಿ ಸವಿತಾ ಕೀರ್ತನ್, ವಿದ್ಯಾರ್ಥಿಗಳನ್ನು ಅಭಿನಂದಿಸಿ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕರ ಬೆಳವಣಿಗೆಯ ಮಹತ್ವವನ್ನು ಹೇಳಿದರು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು. ಎಎಲ್‌ಜಿ ಕ್ರೆಸೆಂಟ್ ಆಡಳಿತ ಮಂಡಳಿಯ ಭಾತ್ಮಿದಾರ ಮುನೀರ್ ಅಹಮ್ಮದ್, ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಮತ್ತು ನಿರ್ದೇಶಕರಾದ ಲಿಯಾಕತ್, ಉಮರ್, ಖಜಾಂಚಿ ಫಯಾಜ್, ಪ್ರಾಂಶುಪಾಲರಾದ ಜಾಯ್ಸಿ ವಿನಯಾ ಮತ್ತು ಕೆ.ಜಿ ವಿಭಾಗದ ಸಂಯೋಜಕಿ ತಾಸಿನ್ ಸೇರಿದಂತೆ ಅತಿಥಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಬೇಬಿ ಅನೀನಾ, ಬೇಬಿ ಆಯಿರಾ ಸಜ್ಜತ್, ಬೇಬಿ ಅಲ್ಫಿಯ ಶೇಖ್ ನಿರೂಪಿಸಿದರು, ಬೇಬಿ ಮಿಥಾಲಿ ಸ್ವಾಗತಿಸಿದರು ಮತ್ತು ಬೇಬಿ ಧಾನ್ವಿ ವಂದಿಸಿದರು. ಪ್ರಿ-ಕೆಜಿ, ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಪ್ರತಿಭೆ…






