ಲೇಖಕ: admin

ಮಡಿಕೇರಿ ಫೆ.20 NEWS DESK : ಶಿಕ್ಷಣ, ತರಬೇತಿ ಎಂಬುದು ಎಲ್ಲಾ ಸಂಘ ಸಂಸ್ಥೆಗಳ ಉಳಿವು, ಅಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿದೆ. ನಮ್ಮ ಪೂರ್ವಜರು ಸ್ಥಾಪಿಸಿ ಬೆಳೆಸಿರುವ ದವಸ ಭಂಡಾರಗಳಲ್ಲಿ ಶೇ.50 ರಷ್ಟು ಸಂಘಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬಡ್ಡಿ ಸಹಾಯಧನ ಅಥವಾ ಇತರ ಯಾವುದೇ ಅನುದಾನಗಳು ಇಲ್ಲದೆ ಇರುವುದರಿಂದ ಹಿರಿಯರು ಸ್ಥಾಪಿಸಿದ ದವಸ ಭಂಡಾರಗಳು ನಷ್ಟದಲ್ಲಿವೆ. ಆದುದರಿಂದ ಆರ್ಥಿಕವಾಗಿ ಸದೃಢವಾಗಿರುವ ಸಂಸ್ಥೆಗಳು ದವಸ ಭಂಡಾರಗಳ ಅಭಿವೃದ್ಧಿಗೆ ಕೈಜೋಡಿಸಿದಲ್ಲಿ ಅವನತಿಯತ್ತ ಸಾಗುತ್ತಿರುವ ದವಸ ಭಂಡಾರಗಳನ್ನು ಉಳಿಸಬಹುದಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕಿಲನ್ ಗಣಪತಿ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಹಾಗೂ ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ಸ್ ಮತ್ತು ಮುದ್ರಣಾಲಯ ನಿ., ವಿರಾಜಪೇಟೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಯದರ್ಶಿಗಳಿಗೆ ಸಹಕಾರ ಕಾಯ್ದೆ ಕಾನೂನು, ಲೆಕ್ಕಪರಿಶೋಧನೆ ಹಾಗೂ…

Read More

ವಿರಾಜಪೇಟೆ ಫೆ.20 NEWS DESK : ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್ ಘಟಕಗಳ ಸಹಯೋಗದಲ್ಲಿ ಫೆ.24 ರಂದು ರಕ್ತದಾನ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಬಿ.ಡಿ.ಹೇಮ, ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿ ಬಿ.ಎನ್.ಶಾಂತಿಭೂಷಣ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್  ಪಾಲ್ಗೊಳ್ಳಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಕುಶಾಲನಗರ ಫೆ.20 NEWS DESK  :  ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶ್ರೀ ಕೃಷ್ಣ ಸಂಧಾನ ಎಂಬ ಉಚಿತ ಹಾಸ್ಯ ನಾಟಕ  ಗಮನ ಸೆಳೆಯಿತು. ಸಂಘದ ಅಧ್ಯಕ್ಷ ಆವರ್ತಿ ಆರ್.ಮಹದೇವಪ್ಪ ನೇತೃತ್ವದಲ್ಲಿ ಸ್ಥಳೀಯ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಉಚಿತವಾಗಿ ಹಮ್ಮಿಕೊಂಡ ನಾಟಕದಲ್ಲಿ ನೂರಾರು ಪ್ರೇಕ್ಷಕರು ಪಾಲ್ಗೊಂಡಿದ್ದರು.  ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಧಾತ್ರಿ ರಂಗಸಂಸ್ಥೆ ಕಲಾವಿದರ ಮೂಲಕ ಶ್ರೀ ಕೃಷ್ಣ ಸಂಧಾನ ಹಾಸ್ಯ ನಗೆ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ನಾಟಕದ ಉದ್ಘಾಟನೆಯನ್ನು ಉದ್ಯಮಿಗಳು ಹಾಗೂ ಸಮಾಜಸೇವಕರಾದ ರಾಜೇಗೌಡ ಅವರು ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಜಿಲ್ಲಾಧ್ಯಕ್ಷರಾದ ಆವರ್ತಿ ಆರ್ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯತ್ರಿ ಕಲ್ಯಾಣ ಮಂಟಪದ ಮಾಲೀಕರಾದ ಕೆ ಬಿ ಗಾಯತ್ರಿ ಉದ್ಯಮಿ ರಾಜೇಗೌಡ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ನಿನಾಸಂ ತಂಡದ ಸುಮಾರು 20ಕ್ಕೂ ಅಧಿಕ ನಿನಾಸಂ ಕಲಾವಿದರು ನಾಟಕ ನಡೆಸಿಕೊಟ್ಟರು.…

Read More

ಪೊನ್ನಂಪೇಟೆ ಫೆ.20 NEWS DESK : ಧಾರವಾಡದ ಚೇತನ ಫೌಂಡೇಶನ್ ಕರ್ನಾಟಕ ವತಿಯಿಂದ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ತೇಜನಕ್ಕಾಗಿ ಶ್ರಮಿಸಿದವರಿಗೆ ನೀಡಲಾಗುವ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ’ ರಾಜ್ಯಮಟ್ಟದ ಸಮಾಜ ಸೇವಾ ಪ್ರಶಸ್ತಿಗೆ ಭಾಜನರಾದ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮತ್ತು ಕೆದಮುಳ್ಳೂರು ಗ್ರಾ.ಪಂ ಸದಸ್ಯ ಮೀತಲತಂಡ ಎಂ.ಇಸ್ಮಾಯಿಲ್ ಅವರನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.  ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಎ. ಹನೀಫ್ ಅವರ ನೇತೃತ್ವದಲ್ಲಿ ಗುಂಡಿಕೆರೆಯಲ್ಲಿರುವ ಇಸ್ಮಾಯಿಲ್ ಅವರ ನಿವಾಸಕ್ಕೆ ತೆರಳಿದ ಪ್ರಮುಖರು, ಇಸ್ಮಾಯಿಲ್ ಅವರನ್ನು ಅಭಿನಂದಿಸಿದರಲ್ಲದೆ, ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಪ್ರಮುಖರು, ಇಸ್ಮಾಯಿಲ್ ಅವರ ಸಮಾಜಮುಖಿ ಚಿಂತನೆಯ ವ್ಯಕ್ತಿತ್ವ ಹಾಗೂ ಸಮಾಜ ಸೇವಾ ಸಾಧನೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎ.ಹಂಸ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಯ್ಯದ್…

Read More

ಮಡಿಕೇರಿ NEWS DESK ಫೆ.20 : ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ ನೀಡಲಾಗುವ ವಿಶ್ವಮಾನ್ಯ ಕನ್ನಡಿಗ ರಾಜ್ಯ ಪ್ರಶಸ್ತಿಗೆ ಬಹಗಾರ್ತಿ, ಚಿತ್ರ ನಿರ್ಮಾಪಕಿ, ನಟಿ ಹಾಗೂ ಸಹನಿರ್ದೇಶಕಿ ಈರಮಂಡ ಹರಿಣಿ ವಿಜಯ್ ಆಯ್ಕೆಯಾಗಿದ್ದಾರೆ. ಗ್ರಾಮಾಂತರ ಬುದ್ಧಿಜೀವಿಗಳ ಬಳಗದ 40ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ಇನ್ಸ್ಟಿ ಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಫೆ.23 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ರಾಷ್ಟçಕವಿ ಕುವೆಂಪು ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಈರಮಂಡ ಹರೀಣಿ ವಿಜಯ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಹಿತ್ಯೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಈರಮಂಡ ಹರೀಣಿ ವಿಜಯ್ ಅವರು ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇವರು ಕೊಡಗಿನ ಪ್ರತಿಷ್ಠಿತ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ…

Read More

ಮಡಿಕೇರಿ ಫೆ.20 NEWS DESK : ಕೊಡಗು ವಿಶ್ವ ವಿದ್ಯಾಲಯ ರದ್ದುಗೊಳಿಸುವ ಚಿಂತನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕುಶಾಲನಗರದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು. ಕೊಡಗು ವಿವಿ ಹಿತರಕ್ಷಣಾ ಬಳಗ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿ ಅಭಿವೃದ್ಧಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ವಿದ್ಯಾರ್ಥಿ ಪ್ರಮುಖರು ಮಾತನಾಡಿ ಸರಕಾರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕು. ಕೊಡಗು ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸ್ಥಳೀಯವಾಗಿ ನೀಡಿರುವ ಅವಕಾಶವನ್ನು ರದ್ದುಗೊಳಿಸಬಾರದು. ಸರ್ಕಾರ ಈ ಬಗ್ಗೆ ಪರಿಶೀಲಿಸಿ, ಯಾವುದೇ ಕಾರಣಕ್ಕೂ ಕೊಡಗು ವಿವಿಯನ್ನು ರದ್ದುಗೊಳಿಸಬಾರದು ಇತರ ವಿವಿಗೆ ವಿಲೀನ ಗೊಳಿಸಬಾರದು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಹಿತರಕ್ಷಣ ಬಳಗದ ಪ್ರಮುಖರಾದ ನಟೇಶ್ ಗೌಡ, ಕ್ಷೇತ್ರ ಶಾಸಕರ ಮೂಲಕ ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಇರುವ ವಿಶ್ವವಿದ್ಯಾಲಯದ ಹಿತ ರಕ್ಷಣೆ ಕಾಪಾಡುವುದು…

Read More

ಪಿರಿಯಾಪಟ್ಟಣ ಫೆ.20 NEWS DESK : ತಂಬಾಕು ಬೆಳೆಗಾರರು ಹಾಗೂ ವ್ಯಾಪಾರಸ್ಥರ ಬಹುದಿನದ ಬೇಡಿಕೆ ಹಾಗೂ ಅವರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಿದ ಬಳಿಕ ಇಂದು ಪಿರಿಯಾಪಟ್ಟಣ ತಾಲೂಕಿನ ತಂಬಾಕು ಮಂಡಳಿಗೆ  ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿˌ ರೈತರು ಹಾಗೂ ವ್ಯಾಪಾರಸ್ಥರೊಂದಿಗೆ ಸಂವಹನ ನಡೆಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ರೈತ ಆಶೋತ್ತರಗಳಿಗೆ ಸ್ಪಂದಿಸಿ,ˌ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕಟಿಬದ್ಧವಾಗಿದೆ ಎಂದು ತಿಳಿಸಿದರು.

Read More

ಮಡಿಕೇರಿ NEWS DESK ಫೆ.20 : ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲವೆಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಸ್ವಾಗತಾರ್ಹವಾಗಿದ್ದು, ಇದಕ್ಕೆ ಕಾರಣಕರ್ತರಾದ ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರಿಗೆ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸುವುದಾಗಿ ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ತಿಳಿಸಿದ್ದಾರೆ. ಪ್ಲಾಂಟೇಷನ್ ಬೆಳೆಗಳು ಮತ್ತು ಸಂಬಾರ ಪದಾರ್ಥಗಳನ್ನು ರೈತರು ಬೆಳೆದು ಮೂಲ ರೂಪದಲ್ಲಿ ಮಾರಾಟ ಮಾಡಿದರೆ ಅದು ಕಂದಾಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ನಿಯಮವಿದೆ. ಆದರೂ ಕೂಡ ಜಿಎಸ್‌ಟಿ ಪಟ್ಟಿಯಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲವೆಂಬ ಕಾರಣಕ್ಕೆ ಜಿಎಸ್‌ಟಿ ಕೌನ್ಸಿಲ್ ಕೆಲವು ಕರಿಮೆಣಸು ಬೆಳೆಗಾರರಿಗೆ ನೋಟೀಸ್ ನೀಡಿತ್ತು. ಇದರಿಂದ ಗೊಂದಲ ಏರ್ಪಟ್ಟು ಬೆಳೆಗಾರರ ವಿವಿಧ ಸಂಘಟನೆಗಳು ಸಂಸದ ಯದುವೀರ್ ಅವರ ಗಮನ ಸೆಳೆದಿದ್ದವು. ಬೆಳೆಗಾರರ ಮನವಿಗೆ ತಕ್ಷಣ ಸ್ಪಂದಿಸಿದ ಸಂಸದರು ಕೇಂದ್ರ ಹಣಕಾಸು ಸಚಿವರೊಂದಿಗೆ ಸಮಾಲೋಚನೆ ನಡೆಸಿ ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗದಂತೆ ನೋಡಿಕೊಂಡಿದ್ದಾರೆ. ಇದು ಸಂಸದರಿಗೆ ಇರುವ ಜನಪರ ಕಾಳಜಿ…

Read More

ಮಡಿಕೇರಿ ಫೆ.20 NEWS DESK : ಹಜ್ರತ್ ಸೂಫಿ ಶಹೀದ್ ಮತ್ತು ಹಜ್ರತ್ ಸೈಯದ್ ಹಸನ್ ಸಕಾಫ್ ಹಾಗೂ ಇನ್ನಿತರ ಮಹಾತ್ಮರುಗಳ ಹೆಸರಿನಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭವು ಫೆ.21 ರಿಂದ 28ರ ವರೆಗೆ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಪುದಿಯೋಡಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಮ್ಮೆಮಾಡುವಿನಲ್ಲಿ ಎಂಟು ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಫೆ.21 ರಂದು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಪುದಿಯೋಡಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದರು. ಜುಮಾ ನಮಾಝಿನ ಬಳಿಕ ಮಖಾಂ ಝಿಯಾರತ್ ಮತ್ತು ಸಮೂಹ ವಿವಾಹ ನಡೆಯಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮನ್ನು ಕೊಡಗು ನಾಇಬ್ ಖಾಝಿ ಅಬ್ದುಲ್ಲ ಫೈಝಿ ಎಡಪ್ಪಲ ಉದ್ಘಾಟಿಸಲಿದ್ದು, ಟಿಐಎಂಜೆ ಕೋಶಾಧಿಕಾರಿ ಆಲಿ…

Read More

ಮಡಿಕೇರಿ ಫೆ.20 NEWS DESK : ಬೆಂಗಳೂರಿನಲ್ಲಿ ಫೆ.22ರಿಂದ ನಡೆಯಲಿರುವ ಖೇಲೋ ಇಂಡಿಯಾ ಅಂಡರ್ 15 ಮಹಿಳಾ ಫುಟ್ಬಾಲ್ ತಂಡದ ಯುನೈಟೆಡ್ ಎಫ್.ಸಿ ಕೊಡಗು ತಂಡ ಪ್ರಕಟಿಸಲಾಗಿದೆ. ಕೊಡಗು ತಂಡದಲ್ಲಿ ಪಿ.ಪಿ ಕುಶಿ ತಂಗಮ್ಮ, ಸಿ.ಕೆ ನಮ್ರಿತ್ ಪೂವಮ್ಮ, ಪಿ.ಆರ್ ವಿದ್ಯಾ, ಎಂ.ಎಸ್ ಶರ್ವಾ ಸೀತಮ್ಮ, ಡಿ.ಜೆ ವಂಶಿಕ, ಆರ್.ಧನ್ಯ, ಕೆ.ಪಿ ಬ್ರಹ್ಮ್ಯ, ಕೆ.ಎನ್.ವಿದಿತಾ, ಕೆ.ಇ.ಸೋನಾಶ್ರೀ , ಬಿ.ಆರ್.ನೀಕ್ಷಾ, ಎ.ಎಸ್.ಶೃತಿ, ಎಂ.ಎಸ್.ಸೋನಿ, ಯು.ಜನ್ಯಶ್ರೀ, ಕೆ.ಪಿ.ಪೂಜಿತಾ ಹಾಗೂ ವಿ.ಎಸ್ ಸುಪ್ರಿಯಾ ಯುನೈಟೆಡ್ ಎಫ್‌ಸಿ ಕೊಡಗು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚಿಗೆ ಕೊಡಗು ಯುನೈಟೆಡ್ ಎಫ್‌ಸಿ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಅಮ್ಮತ್ತಿಯಲ್ಲಿ ನಡೆದಿತ್ತು. ಖೇಲೋ ಇಂಡಿಯಾ ಅಂಡರ್ 15 ಮಹಿಳಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸುತ್ತಿದ್ದು, ಪ್ರತೀ ತಂಡಗಳು ಲೀಗ್ ಹಂತದಲ್ಲಿ ಎಲ್ಲಾ ತಂಡಗಳ ವಿರುದ್ಧ ಎರಡೆರಡು ಪಂದ್ಯಗಳನ್ನು ಆಡಬೇಕಾಗಿದೆ. ಯುನೈಟೆಡ್ ಎಫ್.ಸಿ ಕೊಡಗು ತಂಡವು ಲೀಗ್ ಮಾದರಿಯಲ್ಲಿ ಹತ್ತು ಪಂದ್ಯಗಳನ್ನು ಆಡಲಿದೆ‌. ತಂಡದ ವ್ಯವಸ್ಥಾಪಕರಾಗಿ ಹೆಚ್.ಹೆಚ್ ಹರೀಶ್,ತರಬೇತುದಾರರಾಗಿ ಜೆ.ಮಾನಸಾ,ಎಸ್ ಅರವಿಂದ್…

Read More