*ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
ಲೇಖಕ: admin
*ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ, ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
*ನಾವೆಲ್ಲರೂ ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡೋಣ, ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
*ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನದಿಂದಲೇ ಬಲವಾಗಿದೆ, ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು*
*ಭಾರತದ ಘನ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಂಡ ಈ ಸುದಿನದಂದು ನಾಡಿನ ಜನತೆಗೆ ಶುಭಾಶಯಗಳು*
*ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು*
ಮೈಸೂರು NEWS DESK ಜ.25 : ಸ್ಕ್ವಾಡ್ರನ್ ಲೀಡರ್ ಎ.ಬಿ.ದೇವಯ್ಯ ಅವರ ಕುರಿತು ತಯಾರಿಸಲಾದ ಬಾಲಿವುಡ್ ಸಿನಿಮಾ ‘SKY FORCE’ ಕುರಿತು ಮೂಲ ಕೃತಿಯ ಲೇಖಕ ಐತಿಚಂಡ ರಮೇಶ್ ಉತ್ತಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಡಗಿನ ಮಹಾಯೋಧರೊಬ್ಬರ ಕುರಿತು ಹಿಂದಿ ಸಿನಿಮಾವೊಂದು, ಅದರಲ್ಲಿಯೂ ಅಕ್ಷಯ್ ಕುಮಾರ್ ನಟನೆ ಮಾಡುವ ಸಿನಿಮಾ ತಯಾರಾಗುತ್ತಿದೆ ಎಂದಾಗ ಹೆಮ್ಮೆಪಟ್ಟಿದ್ದೆ. 2000 ಇಸವಿಯಿಂದ ಸುಮಾರು 10 ವರ್ಷಗಳ ಕಾಲ ಅಜ್ಜಮಾಡ ದೇವಯ್ಯ ಅವರ ಕುರಿತು ಅಧ್ಯಯನ ನಡೆಸಿದ್ದೇನೆ. 1965ರಲ್ಲಿ ಯುದ್ದ ನಡೆದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಸಾಕಷ್ಟು ಮಂದಿ ಸೇನಾಧಿಕಾರಿಗಳು, ಕುಟುಂಬದವರಿಂದ ಮಾಹಿತಿ ಪಡೆದಿದ್ದೇನೆ. ಹಲವು ದಾಖಲೆಗಳನ್ನು ಕಲೆ ಹಾಕಿ ಇಡೀ ದೇಶದಲ್ಲಿಯೇ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ ಕುರಿತು ಬರೆದ ಮೊದಲ ಪುಸ್ತಕ ನನ್ನ `1965ರ ಯುದ್ಧ ಹಾಗೂ ಕೊಡಗಿನ ಮಹಾವೀರ’ ಎಂದು ವಿವರಿಸಿದ್ದಾರೆ. “ಆದರೆ, ಸಿನಿಮಾ ನೋಡಿ ತೀವ್ರ ನಿರಾಸೆಯಾಗಿದೆ. ಸಿನಿಮಾದಲ್ಲಿ ದೇವಯ್ಯ ಅವರ ಹೆಸರನ್ನು ಟಿ.ಕೃಷ್ಣನ್ ವಿಜಯ್ ಎಂದು…
ಮಡಿಕೇರಿ NEWS DESK ಜ.25 : ಜೀವನದಿ ಕಾವೇರಿ ಉಗಮ ಸ್ಥಾನವಾದ ತಲಕಾವೇರಿ ವ್ಯಾಪ್ತಿಯಲ್ಲಿನ ರಕ್ಷಿತಾರಣ್ಯ, ವನ್ಯಜೀವಿ ಅಭಯಾರಣ್ಯವೆಂದು ಗುರುತಿಸಲ್ಪಟ್ಟ ಪರಿಸರ ಸೂಕ್ಷ್ಮ ವಲಯದಲ್ಲಿ ಪ್ರಭಾವಿ ವ್ಯಕ್ತಿಗೆ ಸೇರಿದ ಸಂಸ್ಥೆಯೊಂದು ರಸ್ತೆ ನಿರ್ಮಾಣದ ಪ್ರಯತ್ನಕ್ಕೆ ಮುಂದಾಗುವ ಆಘಾತಕಾರಿ ಬೆಳವಣಿಗೆ ಕಂಡು ಬಂದಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ಕೊಡಗು ವನ್ಯಜೀವಿ ಸಂರಕ್ಷಣಾ ಸಂಘ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವನ್ಯಜೀವು ಸಂರಕ್ಷಣಾ ಸಂಘದ ಅಧ್ಯಕ್ಷರಾದ ಕೆ.ಎನ್.ಮಾದಪ್ಪ, ಕೇರಳದ ಗಡಿಯಲ್ಲಿ ಬರುವ, ಭಾಗಮಂಡಲ ಗ್ರಾಮ ಪಂಚಾಯ್ತಿಗೆ ಒಳಪಟ್ಟ ಮುಂಡ್ರೋಟ್‌ನಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ಜಾಗಕ್ಕೆ ಸಂಪರ್ಕ ಕಲ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ, ಮುಂಡ್ರೋಟ್‌ನಿಂದ ಸರಿ ಸುಮಾರು 24 ಕಿ.ಮೀ. ರಸ್ತೆಯನ್ನು ತಲಕಾವೇರಿ ರಕ್ಷಿತಾರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡುವ ಪ್ರಯತ್ನಗಳಿಗೆ ಇಳಿದಿರುವುದಾಗಿ ಆರೋಪಿಸಿದರು. ತಲಕಾವೇರಿ ಕ್ಷೇತ್ರಕ್ಕೆ ತೆರಳುವ ಪ್ರವೇಶ ದ್ವಾರದಿಂದ ಬಲ ಬದಿಗಾಗಿ ಅರಣ್ಯ ಇಲಾಖೆಯ ವಾಚರ್‌ಗಳ ಕಾಲು ಹಾದಿ ಇದೆ. ಈ ಹಾದಿಯನ್ನು ರಸ್ತೆಯಾಗಿ ಪರಿವರ್ತಿಸಿಕೊಳ್ಳುವ ಇರಾದೆ ಪ್ರಭಾವಿ ವ್ಯಕ್ತಿಗಳ ಸಂಸ್ಥೆಯದ್ದಾಗಿದೆ. ಇಂತಹ ಪ್ರಯತ್ನ ಕಾವೇರಿಯ ಜಲ ಮೂಲ ಸೇರಿದಂತೆ…
ಮಡಿಕೇರಿ NEWS DESK ಜ.25 : ಕೊಡಗಿನ ಅಭಿವೃದ್ಧಿ, ರಾಷ್ಟ್ರ ರಕ್ಷಣೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿರುವ ಜಿಲ್ಲೆಯ ಎರಡು ಪ್ರಬಲ ಸಮುದಾಯಗಳಾದ ಅರೆಭಾಷಾ ಗೌಡ ಸಮೂಹ ಮತ್ತು ಕೊಡವ ಸಮುದಾಯಗಳ ನಡುವೆ ದೇವಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಮೂಡಿರುವ ಭಿನ್ನಾಭಿಪ್ರಾಯದ ಬಗೆಹರಿಕೆಗೆ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು ಮುಂದಾಗಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಮೂಡಿರುವ ಭಿನ್ನಾಭಿಪ್ರಾಯಗಳನ್ನು ಮುಂದುಮಾಡಿಕೊಂಡು ಎರಡು ಜನಾಂಗಗಳು ಹೋರಾಟದ ಹಾದಿಯಲ್ಲಿ ಮುನ್ನಡೆದರೆ, ಪ್ರವಾಸಿ ಕೇಂದ್ರವಾದ ಕೊಡಗಿನ ಬಗ್ಗೆ ಹೊರ ಭಾಗಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣವಿದೆ ಎನ್ನುವ ಭಾವನೆ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಎರಡು ಸಮುದಾಯಗಳ ನಡುವಿನ ಭಿನ್ನಭಿಪ್ರಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಕ್ಕೆ, ಮಧ್ಯಸ್ಥಿಕೆ ವಹಿಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕಾದ ಜಿಲ್ಲೆಯ ಶಾಸಕರು ಮೌನವಾಗಿರುವುದೇ ಕಾರಣ…
ಮಡಿಕೇರಿ NEWS DESK ಜ.25 : ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾಗಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನದ ದಸರಾ ಉತ್ಸವ ಸಮಿತಿ ಆರಂಭಗೊಂಡು ಐವತ್ತು ವಸಂತಗಳು ಪೂರೈಸಿ ಸುವರ್ಣ ಮಹೋತ್ಸವ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ, ಸಮಿತಿಯ ಗತ ಇತಿಹಾಸವನ್ನು ತೆರೆದಿಡುವ ಪ್ರಯತ್ನವಾಗಿ ರಚಿಸಿರುವ ‘ದಶಮಿ’ ಪುಸ್ತಕದ ಬಿಡುಗಡೆ ಮತ್ತು ಸನ್ಮಾನ ಸಮಾರಂಭ ಜ.28 ರಂದು ನಗರದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಟ್ರಸ್ಟ್ನ ಟ್ರಸ್ಟಿಗಳು ಹಾಗೂ ಪುಸ್ತಕದ ಸಂಪಾದಕರಾದ ಟಿ.ಪಿ.ರಮೇಶ್, ಅಂದು ಸಂಜೆ 4 ಗಂಟೆಗೆ ರಾಜಾಸೀಟು ಬಳಿಯ ರಾಜದರ್ಶನ್ ಸಭಾಂಗಣದಲ್ಲಿ ‘ದಶಮಿ’ ಬಿಡುಗಡೆ ಸಮಾರಂಭ ನಡೆಯಲಿದೆ. ಈ ಪುಸ್ತಕವನ್ನು ಶ್ರೀಧರ ಹೂವಲ್ಲಿ ಅವರ ಉಪ ಸಂಪಾದಕತ್ವ, ಡಾ.ದೇವದಾಸ್ ಅವರ ಪೋಷಕ ಸಂಪಾದಕತ್ವದ ಸಹಕಾರದೊಂದಿಗೆ, ಲಭ್ಯ ಮಾಹಿತಿಗಳನ್ನು ಕಲೆ ಹಾಕಿ ರಚಿಸಲಾಗಿದೆ. ಇದರ ಹಿಂದೆ ಮುಂದಿನ ಪೀಳಿಗೆಗೆ ಅಗತ್ಯ ಮಾಹಿತಿ ಒದಗಿಸುವ ಉದ್ದೇಶ ಇರುವುದಾಗಿ ತಿಳಿಸಿದರು. ಕಳೆದ 50 ವರ್ಷಗಳಲ್ಲಿ ಕುಂದುರುಮೊಟ್ಟೆ…






