
ಕಣಿವೆ NEWS DESK ಫೆ.12 : ಕೊಡಗು ಜಿಲ್ಲಾ ಅರೆಸೇನಾಪಡೆಯ ಮಾಜಿ ಯೋಧರ ಸಂಘದ ಪದಾಧಿಕಾರಿಗಳು ಗುರುವಾರ ಮಡಿಕೇರಿಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರನ್ನು ಭೇಟಿ ಮಾಡಿ ಫಲತಾಂಬೂಲ ನೀಡಿ ಅಭಿನಂದಿಸಿದರು. ಹಾಗೆಯೇ ಈ ತಿಂಗಳ ತಾ. 14 ರಂದು ಕುಶಾಲನಗರದಲ್ಲಿ ಆಯೋಜಿಸಿರುವ ಪುಲ್ವಾಮಾ ಹುತಾತ್ಮ ಯೋಧರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಪುಲಿಯಂಡ.ಎಂ.ಚಂಗಪ್ಪ, ಬಿ.ಎಂ.ರವೀಂದ್ರ, ಜಿ.ಕೆ.ದಿನೇಶ್ ಕುಮಾರ್, ಹರೀಶ್ ಕುಮಾರ್, ಎನ್.ಎಂ.ಭೀಮಯ್ಯ ಇದ್ದರು.









