ಮಡಿಕೇರಿ ಜ.3 : ಕೊಡಗು ಜಿಲ್ಲಾ ಅಂಭಾಭವಾನಿ ಯುವಕ, ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ತಾಳತ್ತಮನೆ ವತಿಯಿಂದ 8ನೇ ವಾರ್ಷಿಕ ಗ್ರಾಮೀಣ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟಕ್ಕೆ ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಎಂ.ಎಸ್.ಕಾಂತಿ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪರಮೇಶ್ವರ ಪರಿಶಿಷ್ಟ ಪಂಗಡದ ಜನಾಂಗ ಬಾಂಧವರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಗ್ರಾಮೀಣ ಕೂಟವನ್ನು ಆಯೋಜಿಸಲಾಗಿದೆ. ಇದು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು. ಯುವಕರು ಯುವತಿಯರು ಸಂಘಟನಾತ್ಮಕವಾಗಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸರ್ಕಾರ ಪರಿಶಿಷ್ಟ ಪಂಗಡದವರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನಪ್ರೋತ್ಸಾಹ ನೀಡುತ್ತಿದ್ದು, ಇದನ್ನು ಫಲಾನುಭವಿಗಳು ಸದುಪಯೋಗಿಸಿಕೊಳ್ಳಬೇಕೆಂದರು.
ಯುವಕ ಸಂಘದ ಕಾರ್ಯದರ್ಶಿ ಎಂ.ಡಿ.ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 7 ವರ್ಷಗಳಿಂದ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಸಂಘದ ಕಾರ್ಯ ಚಟುವಟುಕೆಗಳ ಬಗ್ಗೆ ಸಭೆಗೆ ವಿವರಿಸಿದರು.
ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಸಂಘದ ಸ್ಥಾಪನಾ ಕಾರ್ಯದರ್ಶಿ ಬಿ.ಎ.ಗಣೇಶ್, ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ.ಗುರುವಪ್ಪ, ಉಪಾಧ್ಯಕ್ಷರಾದ ಜಿ.ಆರ್.ದೇವಕ್ಕಿ ನಾಯ್ಕ್, ಅಂಭಾಭವಾನಿ ಯುವಕ, ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಆರ್.ಮೋಹನ್, ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಮಹಿಳಾ ಅಧ್ಯಕ್ಷರಾದ ರತ್ನಮಂಜರಿ, ಮಾಜಿ ಕಾರ್ಯದರ್ಶಿ ಕೆ.ಪಿ.ಗಂಗಾಧರ, ವಿರಾಜಪೇಟೆ ತಾಲ್ಲೂಕು ಮಾಜಿ ಸಂಘಟನಾ ಕಾರ್ಯದರ್ಶಿ ಎಂ.ಟಿ.ಸುನಿತ, ಜಿಲ್ಲಾ ಮಾಜಿ ಸಂಘಟನಾ ಕಾರ್ಯದರ್ಶಿ ಎನ್.ಎಸ್.ವಸಂತ, ಮಾಜಿ ಉಪಾಧ್ಯಕ್ಷೆ ಡಿ.ಎಸ್.ತಾಯಮ್ಮ, ಪ್ರಮುಖರಾದ ಗೋಪಿ ಕೃಷ್ಣ, ಹಿರಿಯ ಪ್ರಾಧಿಕಾರಿಗಳಾದ ಎಂ.ಟಿ.ಗುರುವಪ್ಪ, ಎಂ.ಆರ್.ಮೋಹನ್, ರತ್ನಮಂಜರಿ ನರಸಿಂಹ, ಪಿ.ಕೆ.ಗಂಗಾಧರ, ಎಂ.ಟಿ.ಸುನಿತಾ, ತಿಮ್ಮಯ್ಯ ಪಾಲೂರು ಹಾಗೂ ವನಜಾಕ್ಷಿ ಉಪಸ್ಥಿತರಿದ್ದರು.
::: ಪಂದ್ಯ ವಿಜೇತರು :::
ಕ್ರೀಡಾಕೂಟದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡರು. ಕಬಡ್ಡಿ ಪಂದ್ಯಾವಳಿಯಲ್ಲಿ ಕಾಲೇರಿ ಚೆಂಬು ತಂಡ ಪ್ರಥಮ, ಅಂಭಾಭವಾನಿ, ಗುಡ್ಡೆ ಹೊಸೂರು ತಂಡ ದ್ವಿತೀಯ ಬಹುಮಾನವನ್ನು ಪಡೆಯಿತು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿವಾಜಿ ಸ್ಟ್ರೈಕರ್ ತಾಳತ್ತಮನೆ ಪ್ರಥಮ, ಗೂಗ್ಲಿ ಬಾಯ್ಸ್ ಕಾನೂರು ದ್ವಿತೀಯ, ಥ್ರೋಬಾಲ್ ಪಂದ್ಯಾವಳಿಯಲ್ಲಿ ಗುಡ್ಡೆಹೊಸೂರು ಚಾಮುಂಡೇಶ್ವರಿ ತಂಡ ಪ್ರಥಮ, ಮಡಿಕೇರಿ ಅಂಭಾಭವಾನಿ ತಂಡ ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಹಂಚ್ಚಿ ಗಲ್ರ್ಸ್ ತಂಡ ಪ್ರಥಮ, ಗುಡ್ಡೆಹೊಸೂರು ಅಂಭಾಭವಾನಿ ತಂಡ ದ್ವಿತೀಯ, ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭದ್ರಗೋಳ ತಂಡ ಪ್ರಥಮ, ಚೆಂಬು ಕಾಲೇರಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪುರುಷರ ವಿಭಾಗದ ಭಾರದ ಗುಂಡು ಎಸೆತ ಪಂದ್ಯದಲ್ಲಿ ಎಂ.ಎಸ್.ಗಣೇಶ್ ಪ್ರಥಮ, ಎಂ.ಆರ್.ಮೋಹನ ದ್ವಿತೀಯ ಹಾಗೂ ದೀಪಕ್ ತೃತೀಯ ಬಹುಮಾನ ಪಡೆದುಕೊಂಡರು. ಮಹಿಳೆಯರ ಬಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಶ್ವೇತಾ ಪ್ರಥಮ, ರೇಖಾ ದ್ವಿತೀಯ, ತುಳಸಿ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಮಹಿಳೆಯರ ವಿಭಾಗದ ಲೆಮನ್ ಅಂಡ್ ಸ್ಪೂನ್ ಸ್ಪರ್ಧೆಯಲ್ಲಿ ರತ್ನಮಂಜರಿ ಪ್ರಥಮ, ಶಶಿಕಲಾ ದ್ವಿತೀಯ, ಜಲಜಾಕ್ಷಿ ತೃತೀಯ, ಯುವತಿಯರ ವಿಭಾಗದಲ್ಲಿ ದೀಪಿಕಾ ಪ್ರಥಮ, ಶಾರದಾ ದ್ವಿತೀಯ, ಸ್ವಾತಿ ತೃತೀಯ, ಸೂಜಿಗೆ ನೂಲು ಹಾಕುವ ಸ್ಪರ್ಧೆಯಲ್ಲಿ ಜಲಜಾಕ್ಷಿ ಪ್ರಥಮ, ರೇಖಾ ದ್ವಿತೀಯ, ರಾಧ ತೃತೀಯ ಸ್ಥಾನ ಪಡೆದುಕೊಂಡರು. ಹುಡುಗಿಯರ ವಿಭಾಗದಲ್ಲಿ ವರ್ಷ ಪ್ರಥಮ, ಸ್ವಾತಿ ದ್ವಿತೀಯ, ಶ್ವೇತ ತೃತೀಯ ಬಹುಮಾನ ಪಡೆದುಕೊಂಡರು.
ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ತುಳಸಿ ಪ್ರಥಮ, ಸವಿತಾ ದ್ವಿತೀಯ, ಭಾರತಿ ತೃತೀಯ, ಪುರುಷರ ವಿಭಾಗದಲ್ಲಿ ಎಂ.ಕೆ.ಮೋಹನ, ಎಂ.ವಿ.ಜಯರಾಮ, ಕಂಶಿತ್ ತೃತೀಯ.
ಪಾಸಿಂಗ್ ದ ಬಾಲ್ ಮಹಿಳೆಯರ ವಿಭಾಗದಲ್ಲಿ ರಮ್ಯ ಪ್ರಥಮ, ಸುನೀತ ದ್ವಿತೀಯ, ಸುಮತಿ ತೃತೀಯ, ಪುರುಷರ ವಿಭಾಗದಲ್ಲಿ ಪವಿತ್ ಪ್ರಥಮ, ಪ್ರಥಮ್ ದ್ವಿತೀಯ, ಕಂಶಿತ್ ತೃತೀಯ, ಗೋಣಿ ಚೀಲ ಓಟದ ಮಹಿಳೆಯರ ವಿಭಾಗದಲ್ಲಿ ಪ್ರೇಮ ಪ್ರಥಮ, ಹೂವಮ್ಮ ದ್ವಿತೀಯ, ರೇಖಾ ತೃತೀಯ, ಪುರುಷರ ವಿಭಾಗದಲ್ಲಿ ಆದರ್ಶ್ ಪ್ರಥಮ, ದೀಪಕ್ ದ್ವಿತೀಯ, ಎಂ.ಆರ್.ಮೋಹನ್ ತೃತೀಯ, ವೇಗದ ನಡಿಗೆ ಸ್ಪರ್ಧೆಯಲ್ಲಿ ರಾಧಾಕೃಷ್ಣ ಪ್ರಥಮ, ತಿಮ್ಮಯ್ಯ ದ್ವಿತೀಯ, ಐತ್ತಪ್ಪ ತೃತೀಯ ಬಹುಮಾನ ಪಡೆದುಕೊಂಡರು.
100 ಮೀಟರ್ ಓಟದ ಸ್ಪರ್ಧೆಯ 11 ರಿಂದ 15 ವರ್ಷ ಬಾಲಕರ ವಿಭಾಗದಲ್ಲಿ ಧನುಷ್ ಪ್ರಥಮ, ಸಂಚಿತ್ ದ್ವಿತೀಯ, ರಕ್ಷಿತ್ ತೃತೀಯ, ಬಾಲಕಿಯರ ವಿಭಾಗದಲ್ಲಿ ಪವಿತ್ರ ಪ್ರಥಮ, ಸುಷ್ಮ ದ್ವಿತೀಯ, ಡಿಂಪಲ್ ತೃತೀಯ ಬಹುಮಾನ ಪಡೆದುಕೊಂಡರು.
100 ಮೀಟರ್ ಓಟ 15 ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಎಂ.ಆರ್.ಮೋಹನ ಪ್ರಥಮ, ಯಕ್ಷಿತ್ ದ್ವಿತೀಯ, ಸಂದರ್ಶ ತೃತೀಯ, ಬಾಲಕಿರ ವಿಭಾಗದಲ್ಲಿ ರಚನ ಪ್ರಥಮ, ನಿಶ್ಮಿತಾ ದ್ವಿತೀಯ, ಪವಿತ್ರ ತೃತೀಯ ಬಹುಮಾನವನ್ನು ಗೆದ್ದುಕೊಂಡರು.
50 ಮೀಟರ್ ಓಟದ ಸ್ಪರ್ಧೆ ಬಾಲಕರ ವಿಭಾಗದಲ್ಲಿ ಕೋಶಲ್ ದ್ವಿತೀಯ, ಪ್ರೀತಂ ತೃತೀಯ, ಯುವತಿಯರ ವಿಭಾಗದಲ್ಲಿ ರಮ್ಯಶ್ರೀ ಪ್ರಥಮ, ದರ್ಶಿ ದ್ವಿತೀಯ, ಲಿಖಿತ ತೃತೀಯ ಬಹುಮಾನ ಪಡೆದುಕೊಂಡರು.
200 ಮೀಟರ್ ಓಟ 16-21 ವರ್ಷದ ಯುವತಿಯರ ವಿಭಾಗದಲ್ಲಿ ರಚನ ಪ್ರಥಮ, ನಿಷ್ಮಿತ ದ್ವಿತೀಯ, ವರ್ಷ ತೃತೀಯ, ಬಾಲಕರ ವಿಭಾಗದಲ್ಲಿ ಭರತ್ ಪ್ರಥಮ ಯಕ್ಷೀತ್ ದ್ವಿತೀಯ, ಭುವನೇಶ್ ತೃತೀಯ. 200 ಮೀಟರ್ ಓಟ ಸ್ಪರ್ಧೆಯ 21 ವರ್ಷ ಮೇಲ್ಪಟ್ಟ ಯುವತಿಯರ ವಿಭಾಗದಲ್ಲಿ ಪವಿತ್ರ ಪ್ರಥಮ, ಸುನೀತಾ, ದ್ವಿತೀಯ, ಶಾರದ ತೃತೀಯ, ಬಾಲಕರ ವಿಭಾಗದಲ್ಲಿ ಎಂ.ಕೆ.ಸಂತೋಷ್ ಪ್ರಥಮ, ನವೀನ್ ದ್ವಿತೀಯ, ಯಕ್ಷಿತ್ ತೃತೀಯ.
400 ಮೀಟರ್ ಓಟದ ಸ್ಪರ್ಧೆಯಲ್ಲಿ ಎಂ.ಕೆ.ಸಂತೋಷ್ ಪ್ರಥಮ, ಉಜ್ವಲ್ ದ್ವಿತೀಯ, ಧನುಷ್ ತೃತೀಯ, ಬಾಟಲಿಗೆ ನೀರು ತುಂಬಿಸುವ ಸ್ಪರ್ಧೆಯಲ್ಲಿ ಪ್ರೇಮ ತಂಡ ಪ್ರಥಮ, ಜಲಜ ತಂಡ ದ್ವಿತೀಯ, ಪುಟಾಣಿಗಳ ಕಪ್ಪೆ ಜಿಗಿತ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಪೂರ್ವಿಕ್ ಪ್ರಥಮ, ಸಾತ್ವಿಕ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಲಾವಣ್ಯ ಪ್ರಥಮ, ಪಾವನಿ ದ್ವಿತೀಯ, ಪ್ರತಿಕ್ಷ ತೃತೀಯ ಬಹುಮಾನವನ್ನು ಗೆದ್ದುಕೊಂಡರು.
ಪುಟಾಣಿಗಳ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಲಾವಣ್ಯ ಪ್ರಥಮ, ಪಾವನಿ ದ್ವಿತೀಯ, ಪ್ರತಿಕ್ಷ ತೃತೀಯ, ಬಾಲಕರ ವಿಭಾಗದಲ್ಲಿ ಪವಿತ್ ಪ್ರಥಮ, ಪ್ರಥಮ್ ದ್ವಿತೀಯ, ಕಂಶಿತ್ ತೃತೀಯ ಬಹುಮಾನ ಪಡೆದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಕೂಟದ ಎಲ್ಲಾ ಸ್ಪರ್ಧೆಗಳನ್ನು ತೀರ್ಪುಗಾರರಾದ ರಮೇಶ್, ಮಂಜುನಾಥ್ ಹಾಗೂ ರಘು ನಡೆಸಿಕೊಟ್ಟರು.
ಎಂ.ಡಿ.ಪೃಥ್ವಿ ಕುಮಾರ್ ಹಾಗೂ ಎಂ.ವಿ.ಜಯರಾಮ ಕಾರ್ಯಕ್ರಮ ನಿರೂಪಿಸಿದರು. ಅಂಭಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಆರ್.ಮೋಹನ ವಂದಿಸಿದರು.