ಸೋಮವಾರಪೇಟೆ ಜ.3 : ಕುರುಹಿನಶೆಟ್ಟಿ ಸಮಾಜದ ಶ್ರೀ ರಾಮಮಂದಿರದಲ್ಲಿ ಸೋಮವಾರ 6ನೇ ವರ್ಷದ ವೈಕುಂಠ ಏಕಾದಶಿ ನಡೆಯಿತು.
ಬೆಳಿಗ್ಗೆ 7 ರಿಂದ 10ರ ವರೆಗೆ ಮತ್ತು ಸಂಜೆ 5 ರಿಂದ 8-30ರ ವರೆಗೆ ಸ್ವರ್ಗದ ಬಾಗಿಲ ಪ್ರವೇಶ ಮತ್ತು ದೇವರ ದರ್ಶನ ನಡೆಯಿತು. ಸಂಜೆ 5ಕ್ಕೆ ಸೀತಾ ಬಳಗದಿಂದ ವಿಷ್ಣು ಸಹಸ್ರನಾಮ, ಪಠನ, ನಂತರ ಆರ್ಟ್ ಆಫ್ ಲಿವಿಂಗ್‌ನ ಸೂರ್ಯಪಾದಾಜೀ ಮತ್ತು ತಂಡದವರಿಂದ ದಿವ್ಯಸತ್ಸಂಗ ನಡೆಯಿತು.
ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಸೀತಾ ಬಳಗದ ಅಧ್ಯಕ್ಷೆ ಲೀಲಾ ನಿರ್ವಾಣಿ, ರಾಮ ಯುವಕ ಸಂಘದ ಅಧ್ಯಕ್ಷ ಬಿ.ಜಿ. ರವಿ, ಪ್ರಮುಖರಾದ ಸತಿನ್ ಸಿದ್ದಪ್ಪ, ಬಿ.ಎಂ. ಶ್ರೀಧರ್ ಮತ್ತಿತರರು ಇದ್ದರು.












