ಕುಶಾಲನಗರ ಜ.5 : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ 86ನೇ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಚುಟುಕು ಕವಿ, ಸಾಹಿತಿ ಹಾ.ತಿ. ಜಯಪ್ರಕಾಶ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಪೂಜಾರಿ, ಗೌರವಾಧ್ಯಕ್ಷರಾದ ಫ್ಯಾನ್ಸಿ ಮುತ್ತಣ್ಣ, ಕುಶಾಲನಗರ ತಾಲೂಕು ಅಧ್ಯಕ್ಷ ನಾಗೇಗೌಡ, ಹೋಬಳಿ ಅಧ್ಯಕ್ಷ ಹರೀಶ್‍ಅಕ್ಷರ, ನಗರಾಧ್ಯಕ್ಷ ಹರ್ಷ, ಪ್ರಮುಖರಾದ ಸತೀಶ್‍ಕುಮಾರ್, ಮಂಜುನಾಥ್, ಗೀತಾಲಿಂಗಪ್ಪ, ಸರಳಾ ರಾಮಣ್ಣ ಮತ್ತುರೋಷನ್ ಇದ್ದರು.












