ಮಡಿಕೇರಿ ಜ.7 : ಮೈಸೂರಿನ ಜೆಕೆ ಗ್ರೌಂಡ್ ಮೈದಾನದ ಆಡಿಟೋರಿಯಂ ನಲ್ಲಿ ನಡೆದ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ನಗರದ ವಿಂಗ್ಸ್ ಆಫ್ ಫ್ಯಾಶನ್ ನೃತ್ಯ ತಂಡದ ವಿದ್ಯಾರ್ಥಿ ಹಾಗೂ ಮುಳಿಯ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪೂಜಾ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಇವರು ಫೆಬ್ರವರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.