ನಾಪೋಕ್ಲು ಜ.7 : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರದ ಗದ್ದುಗೆ ಏರಲು ಕಾರ್ಯಕರ್ತರು ತಳಮಟ್ಟದಿಂದಲೇ ಶ್ರಮಿಸಿ ಪಕ್ಷದ ಸಾಧನೆಗಳನ್ನು ಪ್ರತಿಯೊಬ್ಬ ಮತದಾರನಿಗೂ ಮನವರಿಕೆ ಮಾಡಿಕೊಡಬೇಕು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಕರ್ನಾಟಕ ರಾಜ್ಯ ಬಿಜೆಪಿ ಯ “ಬೂತ್ ವಿಜಯ ಅಭಿಯಾನದ ಅಂಗವಾಗಿ ನಾಪೋಕ್ಲು ಭಗವತಿ ದೇವಾಲಯದ ಸಮುದಾಯಭವನದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ ಅವರ ಉತ್ತಮ ಆಡಳಿತ ಹಾಗೂ ಪಕ್ಷದ ತತ್ವ ಸಿದ್ಧಾಂತಗಳ ಆಧಾರದಲ್ಲಿ ಮತಯಾಚನೆ ಮಾಡಿ ಸದಢ ಸರ್ಕಾರವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದರು ಕಿವಿ ಮಾತು ಹೇಳಿದರು.
ಈ ಸಂದರ್ಭ ಶಾಸಕರಾದ ಕೆ.ಜಿ.ಬೋಪಯ್ಯ, ಮಂಡೆಪಂಡ ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯರಾದ ಮಂಡೆಪಂಡ ಸುಜಾಕುಶಾಲಪ್ಪ, ರಾಜ್ಯ ಸಮಿತಿ ಸದಸ್ಯ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಗೆಲುವಿಗೆ ಬೇಕಾದ ಕಾರ್ಯತಂತ್ರದ ಬಗ್ಗೆ ಮಾರ್ಗದರ್ಶನ ಹಾಗೂ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ನಾಪೋಕ್ಲು ಬಿಜೆಪಿ ಶಕ್ತಿಕೇಂದ್ರದ ಪ್ರಮುಖ ಶಿವಚಾಳಿಯಂಡ ಅಂಬಿಕಾರ್ಯಪ್ಪ, ಬಲ್ಲಮಾವಟಿ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ ಚಂಗೇಟಿರ ಕುಮಾರ್ ಸೋಮಣ್ಣ, ಕಕ್ಕಬ್ಬೆ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ ಕಲಿಯಂಡ ಸುನಂದ, ಪಾರಣೆ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ ಅಪ್ಪನೆರವಂಡ ರಾಜ, ಎಮ್ಮೆಮಾಡು ಬಿಜೆಪಿ ಶಕ್ತಿಕೇಂದ್ರದ ಪ್ರಮುಖ ಚಂಬರಂಡ ಮಾಹಿನೆ, ಹೊದ್ದೂರು ಬಿಜೆಪಿ ಶಕ್ತಿಕೇಂದ್ರದ ಪ್ರಮುಖ ನೆರವಂಡ ಸಂಜಯ್ ಪೂಣಚ್ಚ, ಈ ಸಂದರ್ಭ ಜಿ.ಪಂ ಮಾಜಿ ಉಪಾಧ್ಯಕ್ಷ ಬಿದ್ದಂಡ ಉಷಾ ದೇವಮ್ಮ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತೆಕ್ಕಡೆ ಶೋಭಾ ಮೋಹನ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ನೆರೆಯಡಮ್ಮಂಡ ಉಮಾ ಪ್ರಭು, ಮಡಿಕೇರಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾಂಗಿರ ಅಶ್ವಿನ್, ಜಿಲ್ಲಾ ಸಮಿತಿ ಸದಸ್ಯ ಕರವಂಡ ಲವ ನಾಣಯ್ಯ, ಪ್ರಮುಖರಾದ ಕುಡಿಯೋಳಂಡ ರಮೇಶ್ ಮುದ್ದಯ್ಯ, ಅಮ್ಮಂಡ ಮನು ಮಹೇಶ್, ಚಂಡಿರ, ಜಗದೀಶ್, ಸಾಮಾಜಿಕ ಜಾಲತಾಣಗಳ ಸದಸ್ಯರಾದ ಕರವಂಡ ಅಪ್ಪಣ್ಣ, ಕೋಡಿರ ಪ್ರಸನ್ನ ಬಿಜೆಪಿ ಪಕ್ಷದ ಚುನಾಯಿತ ಪ್ರತಿನಿಧಿಗಳು ಹಾಗೂ ಹಿರಿಯ ಕಾರ್ಯಕರ್ತರು, ಎಲ್ಲಾ ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲಾ ಸಮಿತಿ ಸದಸ್ಯರು ನಿರ್ದೇಶಕರು, ವಿವಿಧ ನಾಯಕರು ಹಾಜರಿದ್ದರು.
ವರದಿ – ದುಗ್ಗಳ ಸದಾನಂದ