ಮಡಿಕೇರಿ ಜ.7 : ಮಡಿಕೇರಿ ಮ್ಯಾನ್ಸ್ ಕಾಂಪೌಂಡ್ ಕ್ಲಬ್ ವತಿಯಿಂದ ಮ್ಯಾನ್ಸ್ ಕಾಂಪೌಂಡ್ (ಜಿಲ್ಲಾ ಕ್ರೀಡಾಂಗಣ) ನಲ್ಲಿ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ಮುಕ್ತ 5+2 ಆಟಗಾರರ ಕಾಲ್ಚೆಂಡು ಪಂದ್ಯಾವಳಿಗೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಶ್ಮಯಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಫುಟ್ಬಾಲ್ ಕ್ರೀಡೆಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿರುವ ಎಂ.ಸಿ.ಸಿ. ಕ್ಲಬ್‍ನ ಕೆಲವು ವರ್ಷಗಳ ನಂತರ ಪಂದ್ಯಾವಳಿಯನ್ನು ಪ್ರಾರಂಭಿಸಿರುವುದು ಶಾಘನೀಯ. ಮುಂದಿನ ದಿನಗಳಲ್ಲಿ ಇಲಾಖಾ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದಾಗಿ ಭರವಸೆ ನೀಡಿ, ಪಂದ್ಯಾವಳಿ ಯಶಸ್ಸಿಗೆ ಶುಭ ಹಾರೈಸಿದರು.
ಇದೇ ಸಂದರ್ಭ ಎಂ.ಸಿ.ಸಿ. ಕ್ಲಬ್‍ನ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಕ್ಲಬ್‍ನ ಸದಸ್ಯರುಗಳಿಗೆ ಸಮವಸ್ತ್ರವನ್ನು ಅತಿಥಿಗಳು ವಿತರಣೆ ಮಾಡಿದರು.
ಕ್ಲಬ್‍ನ ಅಧ್ಯಕ್ಷ ಕ್ರಿಸ್ಟೋಫರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಂ.ಸಿ.ಸಿ. ಕ್ಲಬ್‍ನ ಹಿರಿಯ ಆಟಗಾರರುಗಳಾದ ಎನ್.ಕೆ.ರವೀಂದ್ರ, ಕುಟ್ಟಯ್ಯ ವಾಸು, ಸುಜಿತ್ ಚಿಣ್ಣಪ್ಪ, ಕ್ಲಬ್‍ನ ಕಾರ್ಯದರ್ಶಿ ಉಮೇಶ್‍ಕುಮಾರ್, ಖಜಾಂಚಿ ಪೀಟರ್, ಪದಾಧಿಕಾರಿ ಸಚಿನ್ ವಾಸುದೇವ್ ಹಾಜರಿದ್ದರು.
ರಾಜೇಶ್ವರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಎಂ.ಸಿ.ಸಿ.ಕ್ಲಬ್‍ನ ನಾಬಿಸ್ವಾಗತ ಗೀತೆ ಹಾಡಿದರು. ಎಂ.ಸಿ.ಸಿ. ಸದಸ್ಯ ಕುಡೆಕಲ್ ಸಂತೋಷ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಇತ್ತೀಚೆಗೆ ನಿಧನರಾದ ಫುಟ್ಬಾಲ್ ಮಾಂತ್ರಿಕ ಬ್ರೆಝಿಲ್‍ನ ಪೀಲೆ ಹಾಗೂ ಸುಂಟಿಕೊಪ್ಪದ ಶಿವಕುಮಾರ್ ಅವರುಗಳ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು.
ಎರಡು ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ತಾ.8ರಂದು(ಇಂದು) ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿಗಳು ನಡೆಯಲಿವೆ. ಪಂದ್ಯಾವಳಿಯ ತೀರ್ಪುಗಾರರಾಗಿ ರಾಜ್ಯಮಟ್ಟದ ತೀರ್ಪುಗಾರ ಇಸ್ಮಾಯಿಲ್ ಕಂಡಕೆರೆ ಹಾಗೂ ಸಂತೋಷ್ ಕಾರ್ಯನಿರ್ವಹಿಸಿದರೆ, ವೀಕ್ಷಕ ವಿವರಣೆಯನ್ನು ವಿವೇಕ್ ಮೊಗೇರ ನೀಡಿದರು.