ವಿರಾಜಪೇಟೆ ಜ.7 : ವಿದ್ಯಾರ್ಥಿಗಳು ಕ್ಷಣಿಕ ಸುಖಕ್ಕಾಗಿ ತಮ್ಮ ಬದಕನ್ನು ನಾಶ ಮಾಡಿಕೊಳದೇ ನಿಮ್ಮಲ್ಲಿರುವ ಪ್ರತಿಭೆಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ.ಮಾಳೇಟಿರ ಕಾವೇರಪ್ಪ ಹೇಳಿದರು.
ಇತ್ತಿಚೆಗೆ ನಡೆದ ವಿರಾಜಪೇಟೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಲ್ಲಿ ಅನೇಕ ಆಕರ್ಷಣೆಗಳು ಬರುತ್ತದೆ, ಅವುಗಳಿಗೆ ಬಲಿಯಾಗಬಾರದು. ತಂದೆತಾಯಿಯ ಆಶೋತ್ತರ ಏನು, ಅವರು ತಮ್ಮ ವಿದ್ಯಗೆ ಹೇಗೆ ಶ್ರಮ ವಹಿಸುತ್ತಿದ್ದಾರೆ ಎಂಬುವುದನ್ನು ಅರಿತು ಅವರ ಆಶಯದಂತೆ ಮುನ್ನಡೆಯಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟರಾಜು ಮಾತನಾಡಿ, ಇಂದಿನವರೆಗಿನ ಪಠ್ಯೇತರ ಚಟುವಟಿಕೆಗಳಿಗೆ ಈಗ ವಿರಾಮ ಕಾಲ, ಇನ್ನು ಪಠ್ಯ ಚಟುವಟಿಕೆಯ ಕಾಲ ಸನ್ನಿಹಿತವಾಗಿದೆ. ಅಂದರೆ ಇನ್ನು ಪರೀಕ್ಷೆಗಳ ಕಾಲ ಆದರಿಂದ ಕಾಲ ವ್ಯರ್ಥ ಮಾಡದೆ ಪರೀಕ್ಷೆಗಳಿಗೆ ಸಿದ್ದರಾಗಿ ಹಾಗೂ ಸಂಸ್ಥೆಗೆ ಉತ್ತಮ ಫಲಿತಾಂಶ ಬರುವಂತೆ ಶ್ರಮ ವಹಿಸಿ. ಉಪನ್ಯಾಸಕರು ನೀಡುವ ಉಪನ್ಯಾಸವನ್ನು ಅಂದೆ ಮನನ ಮಾಡಿಕೊಂಡರೆ ಪರೀಕ್ಷೆ ಎಂಬುವುದು ಕಷ್ಟಕರವಲ್ಲ. ಆದರಿಂದ ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಅತ್ಯಗತ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ ವಹಿಸಿದ್ದರು.
ವೇದಿಕೆಯಲ್ಲಿ ವಿರಾಜಪೇಟೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಾತಂಡ ಜ್ಯೋತಿ, ಉಪ ಪ್ರಾಂಶುಪಾಲರಾದ ಪ್ರತಿಕಾ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಜೋಕಿಂ ರಾಡ್ರಿಗಸ್, ಆಶಾ ಸುಬ್ಬಯ್ಯ, ಪೋಷಕರ ಸದಸ್ಯ ತೋಲ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭ ಗೋಣೀಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ.ಮಾಳೇಟಿರ ಕಾವೇರಪ್ಪ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು.