ಸೋಮವಾರಪೇಟೆ ಜ.7 : ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆಯ ನೂತನ ಸಾಲಿನ ಅಧ್ಯಕ್ಷರಾಗಿ ಪೂರ್ಣಿಮಾ ಗೋಪಾಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಶಾ ಯೊಗೇಂದ್ರ ಆಯ್ಕೆಯಾದರು.
ಒಕ್ಕಲಿಗರ ಸಮುದಾಯ ಭವನದಲ್ಲಿ ಇತ್ತೀಚೆಗೆ ಅಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರಾಗಿ ಹರಿಣಿ ಕುಶಾಲಪ್ಪ, ಖಜಾಂಚಿಯಾಗಿ ತನ್ಮಯಿ ಪ್ರವೀಣ್, ಭಾತ್ಮೀದಾರರಾಗಿ ಚಂದ್ರಿಕಾ ಕುಮಾರ್ ಆಯ್ಕೆಯಾದರು.













