ಸೋಮವಾರಪೇಟೆ ಜ.7 : ಮೀಸಲು ಅರಣ್ಯದ ಸರಹದ್ದಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ನಿರ್ಮಾಣವಾಗುತ್ತಿರುವ ರೈಲ್ವೆ ಬ್ಯಾರಿಕೇಡ್ ಅವೈಜ್ಞಾನಿಕವಾಗಿದ್ದು, ಕಾಡಾನೆಗಳು ಬ್ಯಾರಿಕೇಡ್‌ನಲ್ಲಿ ನುಸುಳಿ ಬರುತ್ತಿವೆ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಆರೋಪಿಸಿದರು.
ಸ್ಥಳೀಯ ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆ.ಡಿಪಿ.ಸಭೆಯಲ್ಲಿ ಅವರು ಅರೋಪ ಮಾಡಿದರು. ಎ.ಸಿ.ರೂಂ ನಲ್ಲಿ ಕುಳಿತ ಅಧಿಕಾರಿಗಳು ಯೋಜನೆ ರೂಪಿಸುತ್ತಾರೆ. ಅಂತಹವರ ಅಸಡ್ಡೆಯಿಂದ ಸರ್ಕಾರದ ಕೋಟ್ಯಾಂತರ ರೂ. ಹಣ ಪೋಲಾಗುತ್ತದೆ ಎಂದ ಅವರು ಎರಡು ಪಟ್ಟಿಯ ರೈಲ್ವೆ ಬ್ಯಾರಿಕೇಡ್ ನಿರ್ಮಿಸುತ್ತಿದ್ದಾರೆ. ಈಗ ಕಾಡಾನೆಗಳು ಪಟ್ಟಿಯೊಳಗೆ ನುಗ್ಗಿ ಕೃಷಿ ಭೂಮಿಗೆ ಲಗ್ಗೆಯಿಡುತ್ತಿವೆ. ಇನ್ನಾದರೂ ಮೂರು ಪಟ್ಟಿಗಳನ್ನು ಅಳವಡಿಸುವಂತೆ ಆಗ್ರಹಿಸಿದರು.
ಸರ್ಕಾರದಿಂದ ಅನುಮೋದನೆಗೊಂಡ ಯೋಜನೆಯಾಗಿದ್ದು, ಈಗ ಬದಲಾಯಿಸಲು ಸಾಧ್ಯವಿಲ್ಲ. ಕಾಮಗಾರಿ ನಂತರ ಮತ್ತೊಂದು ಪಟ್ಟಿ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಸಿಎಫ್ ಗೋಪಾಲ್ ಹೇಳಿದರು.
ಶಾಸಕರು ಮಾತನಾಡಿ, ರಾಜ್ಯದಲ್ಲಿ ಅತಿ ಕಡಿಮೆ ವಿದ್ಯುತ್ ಬಳಸುವ ಬಳಕೆದಾರರೆಂದರೆ ಕಾಫಿ ಬೆಳೆಗಾರರು. ಅವರ 10 ಎಚ್.ಪಿ. ವರೆಗಿನ ವಿದ್ಯುತ್ ಸಂಪರ್ಕವನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದ್ದು, ಕೊಡಗಿನ ಕಾಫಿ ಬೆಳೆಗಾರರ ವಿದ್ಯುತ್ ಬಿಲ್ ಬಾಕಿ 45 ಕೋಟಿ ರೂ. ಮಾತ್ರ ಬಾಕಿ ಉಳಿದಿದ್ದು, ಮನ್ನಾ ಮಾಡಲು ಸರ್ಕಾರ ಭರವಸೆ ನೀಡಿದ್ದು ಹಣಕಾಸು ಇಲಾಖೆಯ ಒಪ್ಪಿಗೆಗೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಇತರೆ ಬೆಳೆಗಳ ಬೆಳೆಗಾರರ ವಿದ್ಯುತ್ ಬಿಲ್ ಸಾವಿರಾರು ಕೋಟಿ ಬಾಕಿ ಉಳಿದಿದೆ. ಆದುದ್ದರಿಂದ ಸರ್ಕಾರ ಉಚಿತ ವಿದ್ಯುತ್ ಘೋಷಣೆ ಮಾಡುವುದರಿಂದ ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದೆಂದು ಸೆಸ್ಕ್ ಇಲಾಖೆಯ ಇಇ ಅಶೋಕ್‌ಗೆ ಸೂಚಿಸಿದರು.
ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಖಾಯಂ ಪಿಡಿಒಗಳು, ಡಾಟ ಆಪರೇಟರ್, ಬಿಲ್ ಕಲೆಕ್ಟರ್‌ಗಳಿಲ್ಲದೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಕಳೆದ ಎರಡು ವರ್ಷಗಳಿಂದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಖಾಯಂ ಪಿಡಿಒ ಗಾಗಿ ಲಿಖಿತ ಮನವಿ ಮಾಡಿಕೊಂಡರು ಕ್ರಮ ಕೈಗೊಂಡಿಲ್ಲ ಎಂದು ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಟಿ.ಪರಮೇಶ್ ಹೇಳಿದರು.
ದುಂಡಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಜಾಸ್ತಿಯಾಗಿದೆ. ಗ್ರಾಮದ ರಸ್ತೆಯಲ್ಲೇ ಓಡಾಡುತ್ತಿವೆ ಎಂದು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯ÷ಕ್ಷೆ ಪೂರ್ಣಿಮಾ ಹೇಳಿದರು.
ಎರಡು ಹೆಣ್ಣಾನೆ ಮತ್ತು ಒಂದು ಮರಿಯಿದೆ. ಒಂದೆರಡು ದಿನದಲ್ಲಿ ಇನ್ನೊಂದು ಮರಿ ಹಾಕಲಿದೆ. ಈ ಸಂದರ್ಭದಲ್ಲಿ ಓಡಿಸಲು ಸಾಧ್ಯವಿಲ್ಲ. ಮರಿ ನಡೆಯಲು ಪ್ರಾರಂಭವಾದ ಮೇಲೆ ಕಾರ್ಯಚರಣೆ ನಡೆಸಿ ಕಾಡಿಗೆ ಅಟ್ಟಲು ಕ್ರಮಕ್ಯಗೊಳ್ಳಲಾಗುವುದು ಎಂದು ಶನಿವಾರಸಂತೆ ಆರ್‌ಎಫ್‌ಒ ಪ್ರಪುಲ್ ಶೆಟ್ಟಿ ಹೇಳಿದರು.
ಸಭೆಯಲ್ಲಿ ಸೋಮವಾರಪೇಟೆ ತಹಸೀಲ್ದಾರ್ ನರಗುಂದ್, ಕುಶಾಲನಗರ ತಹಸೀಲ್ದಾರ್ ಪ್ರಕಾಶ್, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ರಾಜ್‌ಗೋಪಾಲ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಇದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*