ನಾಪೋಕ್ಲು ಜ.11 : ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ಮತ್ತು ಪೋಷಕರ ನಿರೀಕ್ಷೆಯನ್ನು ಹುಸಿಗೊಳಿಸದೆ ಮಕ್ಕಳ ಉತ್ತಮ ಭವಿಷ್ಯವನ್ನು ರೂಪುಗೊಳಿಸಲು ಕಾರ್ಯ ಪ್ರವೃತ್ತವಾಗಿದೆ ಎಂದು ಸ್ಥಳೀಯ ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ರತ್ನ ಚರ್ಮನ ಹೇಳಿದರು.
ಅಂಕುರ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪಾಠದ ಜೊತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾಗುತ್ತಿದ್ದು, ಇದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದ ಅವರು ಸಂಸ್ಥೆಯ ಉದ್ದೇಶ ಹಾಗೂ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಮೇಲುಕು ಹಾಕಿದರು.
ಸಂಸ್ಥೆಯ ಅಧ್ಯಕ್ಷ ಕೇಟೋಳಿರ ರಾಜಾ ಚರ್ಮಣ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಟ್ರಸ್ಟ್ ಕಾಮೆಂಡ ಕಂಬಯ್ಯ, ನಿವೃತ್ತ ಪ್ರಾಂಶುಪಾಲ ಪ್ರೊ. ಕಲ್ಯಾಟ0ಡ ಪೂಣಚ್ಚ, ಪೆಮ್ಮುಡಿಯಂಡ ಅಪ್ಪಣ್ಣ, ಮುಕ್ಕಾಟಿರ ವಿನಯ್, ಕು0ಡಿಯೋಳಂಡ ಗಣೇಶ್ ಮುತ್ತಪ್ಪ, ಬಡುವಂಡ್ರ ಅರುಣ್ ಅಪ್ಪಚ್ಚು, ಮುಂಡಂಡ ಜಯಕುಮಾರ್, ಕೇಟೋಳಿರ ಗಾಯನ್ ಗೌರಮ್ಮ ಸೇರಿದಂತೆ ಪೋಷಕರು. ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕಿ ದೇಚಮ್ಮ ಸ್ವಾಗತಿಸಿದರು. ಬೊಳ್ಯಪ0ಡ ಆಶಾ ಬೋಪಣ್ಣ ಮತ್ತು ಬಳ್ಯಾಟಂಡ ಡಿಶ್ಮ ಕುಟ್ಟಯ್ಯ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಮನವಟ್ಟಿರ ಜೀವಿತ್ ಬೆಳ್ಯಪ್ಪ ವರದಿ ವಾಚಿಸಿ, ಸರ್ವರನ್ನು ವಂದಿಸಿದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ಹಾಗೂ ಅರ್ಹತಾ ಪತ್ರವನ್ನು ವಿತರಿಸಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ನಂತರ ಸೌಂಡ್, ಲೈಟಿಂಗ್ ಮೂಲಕ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಸೇರಿದಂತೆ ಹಿಂದಿನ ಹಾಗೂ ಪ್ರಸ್ತುತ ವಿದ್ಯಾಮಾನಗಳನ್ನು ಪ್ರಕಟಿತ ವೇಷ, ಭೂಷಣ, ನೃತ್ಯ ಪ್ರಕಾರಗಳ ವಿವಿಧ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು. (ವರದಿ : ದುಗ್ಗಳ ಸದಾನಂದ)