ಮಡಿಕೇರಿ NEWS DESK ಏ.29 : ಮ್ಯಾನ್ಸ್ ಕಾಂಪೌAಡ್ ಕ್ಲಬ್ ವತಿಯಿಂದ ಮೇ 1ರಿಂದ 20ರ ವರೆಗೆ ಫುಟ್ಬಾಲ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ಎ.ಎಂ.ಕ್ರಿಷ್ಟೋಫರ್ ತಿಳಿಸಿದ್ದಾರೆ. ಕೊಡಗಿನ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಎಂ.ಸಿ.ಸಿ ವತಿಯಿಂದ 2024 ರ ಕರ್ನಾಟಕ ಮಿನಿ ಒಲಂಪಿಕ್ಸ್ ನ 14 ರ ವಯೋಮಿತಿಯ ಬಾಲಕರ ಕೊಡಗು ತಂಡವನ್ನು ತರಬೇತುಗೊಳಿಸಿದ ನುರಿತ ತರಬೇತುದಾರರಾದ ಎ.ಎಂ.ಕ್ರಿಷ್ಟೋಫರ್ ಅವರು ತರಬೇತಿ ನೀಡಲಿದ್ದಾರೆ. ಭಾರತ ದೇಶ ಹಾಗೂ ಕರ್ನಾಟಕ ರಾಜ್ಯಕ್ಕೆ ಉತ್ತಮ ಆಟಗಾರರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಎಂ.ಸಿ.ಸಿಯದ್ದಾಗಿದೆ. 16 ವಯೋಮಿತಿಯೊಳಗಿನ ಬಾಲಕ ಹಾಗೂ ಬಾಲಕಿಯರಿಗೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ (ಮ್ಯಾನ್ಸ್ ಕಾಂಪೌಂಡ್) ಫುಟ್ಬಾಲ್ ಮೈದಾನದಲ್ಲಿ ಪ್ರತಿದಿನ ಬೆಳಿಗ್ಗೆ 6.30 ಗಂಟೆಯಿಂದ 8:30 ರವರೆಗೆ ಫುಟ್ಬಾಲ್ ತರಬೇತಿ ನೀಡಲಾಗುವುದು ಎಂದು ಎ.ಎಂ.ಕ್ರಿಷ್ಟೋಫರ್ ತಿಳಿಸಿದ್ದಾರೆ. ಪ್ರವೇಶ ಶುಲ್ಕ ಓರ್ವ ಶಿಬಿರಾರ್ಥಿಗೆ ರೂ.2 ಸಾವಿರ ಆಗಿದ್ದು, ಆಸಕ್ತರು 7019909495, 9448976406 ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳ ಬಹುದಾಗಿದೆ.











