ಮಡಿಕೇರಿ ಜ.12 : ಕೊಡಗು ರಕ್ಷಣಾ ವೇದಿಕೆಯ ವತಿಯಿಂದ ಮಡಿಕೇರಿಯ 23 ವಾರ್ಡಿನ 11,000 ಮನೆಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಅರಿಯುವ ನಿರಂತರ ಒಂದು ತಿಂಗಳ ನೂತನ ಅಭಿಯಾನಕ್ಕೆ ನಗರದ ಮಲ್ಲಿಕಾರ್ಜುನ ನಗರ ವಾರ್ಡಿನಲ್ಲಿ ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ ಚಾಲನೆ ನೀಡಿದರು.
ಈ ಸಂದರ್ಭ ವೇದಿಕೆಯ ಮಡಿಕೇರಿ ನಗರ ಘಟಕದ ಅಧ್ಯಕ್ಷ ಶರತ್, ಉಪಾಧ್ಯಕ್ಷ ವರ್ಗೀಸ್, ಪ್ರಧಾನ ಕಾರ್ಯದರ್ಶಿ ಬನ್ಸೀ ನಾಣಯ್ಯ , ಖಜಾಂಚಿ ಸಿದ್ದಿಕ್, ಜಿಲ್ಲಾ ನಿರ್ದೇಶಕ ಸುಲೇಮಾನ್, ಮುಖಂಡ ಮುದ್ದುರ ನಿತಿನ್ ದೇವಯ್ಯ ಮತ್ತಿತರರು ಹಾಜರಿದ್ದರು.