ವಿರಾಜಪೇಟೆ ಜ.14 : ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿರಾಜಪೇಟೆಯ ನಾಟ್ಯಮಯೂರಿ ನೃತ್ಯ ಶಾಲೆಯ ಸಂಸ್ಥಾಪಕಿ ಪ್ರೇಮಾಂಜಲಿ ಹಾಗೂ ವಿದ್ಯಾರ್ಥಿಗಳ ತಂಡವು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹಲವಾರು ಸಾಹಿತಿಗಳು, ಗಣ್ಯವ್ಯಕ್ತಿಗಳು, ಹಾಗೂ ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಭಾಗವಹಿಸಿದರು.














