ಮಡಿಕೇರಿ ಜ.16 : ಕೊಡಗು ಜಿಲ್ಲಾ ಅಂಬಾಭವಾನಿ ಯುವಕ ಮತ್ತು ಯುವತಿ, ಕ್ರೀಡಾ ಮತ್ತು ಮನೋರಂಜನಾ ಸಂಘ ತಾಳತ್ತಮನೆ, ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ತಾಳತ್ತಮನೆಯಲ್ಲಿ “ಭಾಗವಹಿಸುವ ದಿನ” ಕಾರ್ಯಕ್ರಮ ನಡೆಯಿತು.
ತಾಳತ್ತಮನೆಯ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷರಾದ ರತ್ನಮಂಜರಿ ಉದ್ಘಾಟಿಸಿದರು.
ಯುವ ವೇದಿಕೆಯ ಅಧ್ಯಕ್ಷ ಎಂ.ಆರ್.ಮೋಹನ್ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಮತ್ತು ರಾಷ್ಟ್ರೀಯ ಯುವ ದಿನದ ಮಹತ್ವವನ್ನು ಸಭೆಗೆ ತಿಳಿಸಿದರು.
ಸಮಾಜದ ಯುವಕ ಯುವತಿಯರು ಮುಂದೆ ಬಂದು ಯುವ ವೇದಿಕೆಯಿಂದ ನಡೆಸುವ ಎಲ್ಲಾ ಚಟುವಟಿಕೆಗಳಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಂಘದ ಸಹ ಕಾರ್ಯದರ್ಶಿ ಎ.ಎಂ.ನರಸಿಂಹ, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇಂದ್ರ, ಸಮಿತಿ ಸದಸ್ಯರಾದ ಎಂ.ಬಿ.ಪೂವಪ್ಪ, ಕೆ.ಎಸ್.ಹೇಮಂತ್, ಎಂ.ಕೆ.ಮೋಹನ್, ಎಂ.ಎಸ್.ವೆಂಕಪ್ಪ, ಉಪಸ್ಥಿತರಿದ್ದರು.
ಎಂ.ಆರ್.ಮೋಹನ್ ಸ್ವಾಗತಿಸಿ, ಖಜಾಂಚಿ ಸಂತೋಷ್ ವಂದಿಸಿದರು.