Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»Uncategorized»ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ. ಮೈಸೂರು ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರ ನೇತೃತ್ವದಲ್ಲಿ ಜರುಗಿದ ದಿವ್ಯ ಬಲಿಪೂಜೆ
Uncategorized ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ. ಮೈಸೂರು ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರ ನೇತೃತ್ವದಲ್ಲಿ ಜರುಗಿದ ದಿವ್ಯ ಬಲಿಪೂಜೆ

ಫೆಬ್ರವರಿ 13, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ವಿರಾಜಪೇಟೆ, NEWS DESK ಫೆ.13: ಪಟ್ಟಣದ ಐತಿಹಾಸಿಕ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ ಹಾಗೂ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವವನ್ನು ಸಂಭ್ರಮದಿಂದ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ರತೀ ವರ್ಷದಂತೆ ಈ ವರ್ಷವು ಫೆಬ್ರವರಿ 11 ರಂದು ಸಂಜೆ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ಮಹೋತ್ಸವವನ್ನು ಆಚರಿಸಲಾಯಿತು. ಹಬ್ಬದ ಹಿಂದಿನ ಮೂರು ದಿವಸಗಳ ಕಾಲ ಚರ್ಚ್ ನಲ್ಲಿ ಆಧ್ಯಾತ್ಮಿಕ ಸಿದ್ಧತೆಯು ನಡೆಯಿತು. ಧ್ವಜಾರೋಹಣ, ಜಪಸರ, ಬಲಿಪೂಜೆ ಹಾಗೂ ನವೇನ ಪ್ರಾರ್ಥನೆಯು ಜರುಗಿತು. ಬೆಂಗಳೂರಿನ ರಕ್ಷಕರ ಸಭೆಯ ಗುರುಗಳಾದ ಫಾ. ರಾಬಿನ್ ರವರು ಈ ಮೂರು ದಿವಸಗಳ ಕಾಲ ಪ್ರವಚನವನ್ನು ನೀಡಿದರು. ಬುಧವಾರ ವಾರ್ಷಿಕ ಮಹೋತ್ಸವದ ದಿನದಂದು ಸಂಜೆ ಮೈಸೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರವೋ ರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಹಿಂದೆ ವಿರಾಜಪೇಟೆಯನ್ನು ಆಳಿದ ವೀರ ರಾಜರು ಸಂತ ಅನ್ನಮ್ಮ ಚರ್ಚ್ ಗೆ ಕೊಡುಗೆಯಾಗಿ ನೀಡಿದ ದೀಪಗಳನ್ನು ಧರ್ಮಾಧ್ಯಕ್ಷರು ಬೆಳಗಿಸುವುದರ ಮೂಲಕ ಧಾರ್ಮಿಕ ಆಚರಣೆಗಳಿಗೆ ಚಾಲನೆಯನ್ನು ನೀಡಲಾಯಿತು. ಬೈಬಲ್ ಪಠಣ, ಪರಮ ಪ್ರಸಾದದ ವಿತರಣೆಯು ಈ ಸಂದರ್ಭದಲ್ಲಿ ನಡೆಯಿತು. ಗಾಯನ ವೃಂದದವರಿಂದ ದೇವರ ನಾಮಾವಳಿಯ ಸ್ತುತಿಯು ನಡೆಯಿತು.

ತದನಂತರ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು. ಚರ್ಚ್ ಹಾಗೂ ಒಳ ಆವರಣವನ್ನು ವಾರ್ಷಿಕ ಮಹೋತ್ಸವದ ಪ್ರಯುಕ್ತ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್, ಸಂತ ಅನ್ನಮ್ಮ ಪಿ ಯು ಕಾಲೇಜಿನ ಪ್ರಾಂಶುಪಾಲ ಹಾಗೂ ಅಮ್ಮತ್ತಿ ಚರ್ಚ್ ನ ಗುರುಗಳಾದ ರೆ. ಫಾ. ಮದಲೈ ಮುತ್ತು, ಧರ್ಮಗುರುಗಳಾದ ಫಾ.ಮೈಕಲ್ ಮೆನೇಜಸ್, ಫಾ.ಜಾನ್ ಡಿಕೋನ, ಫಾ.ದಯಾನಂದ ಪ್ರಭು, ಫಾ.ನವೀನ್ ಕುಮಾರ್ ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಧರ್ಮಗುರುಗಳು, ಕನ್ಯಾ ಸ್ತ್ರೀಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದರು.

ಸಂತ ಅನ್ನಮ್ಮ ನವರ ಹಾಗೂ ಲೂರ್ದು ಮಾತೆಯ ತೇರಿನ ಮೆರವಣಿಗೆ: ವಾರ್ಷಿಕ ಮಹೋತ್ಸವದ ಪ್ರಯುಕ್ತವಾಗಿ ಸಂತ ಅನ್ನಮ್ಮನವರ ಹಾಗೂ ಲೂರ್ದು ಮಾತೆಯ ಸ್ವರೂಪಗಳ ತೇರಿನ ಮೆರವಣಿಗೆಯು ವಿರಾಜಪೇಟೆ ನಗರದಲ್ಲಿ ನಡೆಯಿತು. ವಿದ್ಯುತ್ ಹಾಗೂ ಹೂವಿನ ಅಲಂಕೃತ ಮಂಟಪದಲ್ಲಿ ಸಂತ ಅನ್ನಮ್ಮ ಹಾಗೂ ಲೂರ್ದು ಮಾತೆಯವರ ಸ್ವರೂಪಗಳನ್ನು ಪ್ರತಿಷ್ಠಾಪಿಸಿ ಸಂತ ಅನ್ನಮ್ಮ ಚರ್ಚ್ ನಿಂದ ಹೊರಟ ಮೆರವಣಿಗೆಯು ವಿರಾಜಪೇಟೆ ನಗರದ ರಾಜಬೀದಿಗಳಲ್ಲಿ ಸಾಗಿತು. ಭಕ್ತಾದಿಗಳು ಮೊಂಬತ್ತಿಯನ್ನು ಬೆಳಗಿಸಿ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭದಲ್ಲಿ ಧರ್ಮಗುರುಗಳು, ಚರ್ಚ್ ಪಾಲನಾ ಸಮಿತಿಯವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು. ತದನಂತರ ಚರ್ಚ್ ಗೆ ತೆರಳಿ ಪರಮ ಪ್ರಸಾದದ ಆಶೀರ್ವಾದವು ಜರುಗಿತು. ಮಹೋತ್ಸವದ ಪ್ರಯುಕ್ತವಾಗಿ ಲೇಸರ್ ಶೋ, ಸಿಡಿಮದ್ದಿನ ಪ್ರದರ್ಶನ ವು ನಡೆಯಿತು. ತದನಂತರ ಆಗಮಿಸಿದ ಭಕ್ತಾದಿಗಳಿಗೆ ಅನ್ನದಾನ ಸೇವೆಯನ್ನು ನೆರವೇರಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Related Posts

ಮೂನಾಡ್ ನಲ್ಲಿ ಸಿಎನ್‌ಸಿ ಕೊಡವ ಜನಜಾಗೃತಿ ಮಾನವ ಸರಪಳಿ : 100 ವರ್ಷಗಳಾದರೂ ಕೊಡವ ಲ್ಯಾಂಡ್ ಸಾಧಿಸಲು ಬದ್ಧರಾಗಿದ್ದೇವೆ : ಎನ್.ಯು.ನಾಚಪ್ಪ ಪ್ರತಿಪಾದನೆ

ಅಕ್ಟೋಬರ್ 15, 2026

ಅ.16ರಂದು ಮಕ್ಕಳ ದಸರಾ ಸಂಭ್ರಮ – ಮಕ್ಕಳಿಂದ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಕೊಡ್ಲಿಪೇಟೆಯಲ್ಲಿ ಅ.17ರಂದು ಕಾವೇರಿ ಆರತಿ, ಬಾಗಿನ ಅರ್ಪಣೆ

ಅಕ್ಟೋಬರ್ 15, 2026

ಅ.16ರಂದು ಮಕ್ಕಳ ದಸರಾ ಸಂಭ್ರಮ – ಮಕ್ಕಳಿಂದ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.15: ಮಡಿಕೇರಿ ಜನೋತ್ಸವದ ಪ್ರಯುಕ್ತ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಕ್ಟೋಬರ್ 16ರಂದು ನಗರದ ಗಾಂಧಿ…

ಕೊಡ್ಲಿಪೇಟೆಯಲ್ಲಿ ಅ.17ರಂದು ಕಾವೇರಿ ಆರತಿ, ಬಾಗಿನ ಅರ್ಪಣೆ

ಅಕ್ಟೋಬರ್ 15, 2026

ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆಗೆ ಪೂರ್ವಸಿದ್ಧತೆ; ಡಿಸೆಂಬರ್ 22ರಂದು ಹನುಮ ಜಯಂತಿ ಆಚರಣೆ; ದಶಮಂಟಪಗಳ ಸಮಿತಿಯಿಂದ ಸಿದ್ಧತೆ

ಅಕ್ಟೋಬರ್ 15, 2026

ನಾಪೋಕ್ಲುವಿನಲ್ಲಿ ಅ. 20ರಂದು 34ನೇ ವರ್ಷದ ಅದ್ಧೂರಿ ಆಯುಧ ಪೂಜೆ; ಅಲಂಕೃತ ವಾಹನಗಳ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ; ನಿವೃತ್ತ ವೈದ್ಯ ಡಾ. ಹೆಚ್.ವಿ. ದೇವದಾಸ್ ಅವರಿಗೆ ಸನ್ಮಾನ

ಅಕ್ಟೋಬರ್ 15, 2026

ಮಡಿಕೇರಿ ದಸರಾ ದೀಪಾಲಂಕಾರ : ಅಲಂಕಾರ ಸಮಿತಿಗೆ ಪೂರ್ಣ ಜವಾಬ್ದಾರಿ ನೀಡಿಲ್ಲ : ಮುನೀರ್ ಮಾಚಾರ್ ಸ್ಪಷ್ಟನೆ : ಮುಂದಿನ ದಸರಾ ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ಲಾ ಸಮಿತಿಗಳ ಅಭಿಪ್ರಾಯ ಪಡೆಯಲು ಒತ್ತಾಯ

ಅಕ್ಟೋಬರ್ 15, 2026

ರಜನಿ ರೈ ಅವರಿಗೆ ಡಾಕ್ಟರೇಟ್ ಪದವಿ

ಅಕ್ಟೋಬರ್ 14, 2026

ಬಾಳೆಲೆಯಲ್ಲಿ ಬಾಂಗ್ಲಾದೇಶದ ನಾಲ್ವರು ಅಕ್ರಮ ವಲಸಿಗರು ಪತ್ತೆ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾಹಿತಿ

ಅಕ್ಟೋಬರ್ 14, 2026

ಮಡಿಕೇರಿಯಲ್ಲಿ ಅ.16 ಮತ್ತು 17ರಂದು ಸೂರ್ಯ ಘರ್ ಯೋಜನೆಯ ವಿಶೇಷ ಅಭಿಯಾನ

ಅಕ್ಟೋಬರ್ 14, 2026

ಬಾಳೆಲೆಯಲ್ಲಿ ನಾಲ್ವರು ಬಾಂಗ್ಲಾದೇಶಿ ವಲಸಿಗರು ಪತ್ತೆ; ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಹಿಂದೂ ಜಾಗರಣಾ ವೇದಿಕೆ ಆಗ್ರಹ

ಅಕ್ಟೋಬರ್ 14, 2026

ಮಡಿಕೇರಿ : ಅ.15 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 14, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.